Prajanudi
ನ್ಯೂಸ್ ರಾಜ್ಯ

ಸಿದ್ದರಾಮಯ್ಯ ಬೆಂಗಾವಲು ವಾಹನಗಳ ಡಿಕ್ಕಿ: ಪೊಲೀಸ್​ ಅಧಿಕಾರಿ ಹೃದಯಾಘಾತದಿಂದ ಸಾವು


ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳ ಸರಣಿ ಅಪಘಾತದಿಂದ ಆಘಾತಕ್ಕೊಳಗಾಗಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತಿದ್ದ ಕಾರು ಸೇರಿದಂತೆ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂರು ಪೊಲೀಸ್​ ವಾಹನಗಳು ಮತ್ತು ಎರಡು ಖಾಸಗಿ ವಾಹನಗಳು ಜಖಂಗೊಂಡಿದ್ದವು. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಆದರೆ ಬೆಂಗಾವಲು ಕಾರಿನಲ್ಲಿದ್ದ ಮಂಡ್ಯ ಡಿಎಆರ್​ನ ಎಆರ್​ಎಸ್​ಐ ಆಗಿದ್ದ ಮರೀಗೌಡ (56) ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಮರೀಗೌಡ ಅವರು ಸಂಜೆ ಮಂಡ್ಯ ಪೊಲೀಸ್​ ಕ್ವಾಟ್ರಸ್​ ನ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.ಈ ಸಂಬಂಧ  ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಶಬರಿಮಲೆ ವಿವಾದದ ಕುರಿತು ಸಾಹಿತಿ ಭೈರಪ್ಪ, ಪೇಜಾವರ ಶ್ರೀ ಹೇಳಿದ್ದು ಹೀಗೆ

Prajanudi Admin

ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ

Prajanudi Admin

ಚೆನ್ನೈ: ಸರವಣ ಭವನ್, ಅಂಜಪ್ಪರ್, ಗ್ರ್ಯಾಂಡ್ ಸ್ವೀಟ್ಸ್ ಕಚೇರಿಗಳ ಮೇಲೆ ಐಟಿ ದಾಳಿ

Prajanudi Admin

Leave a Comment