Prajanudi
ರಾಜಕೀಯ

ಬಿಜೆಪಿ ಸಂಭಾವ್ಯ ಪಟ್ಟಿ: ಖರ್ಗೆ ವಿರುದ್ಧ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಬೆಂ.ಗ್ರಾ. ಆರ್.ಅಶೋಕ್


ಬೆಳಗಾವಿ: ಹಿರಿಯ ಕಾಂಗ್ರೆಸ್ ಸಂಸದ ಎಂ. ಮಲ್ಲಿಕಾರ್ಜುನ ಖರ್ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಹಣ ಹಾಗೂ ಅಧಿಕಾರದ ಪ್ರಭಾವ ಬಳಸಲಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಅವರನ್ನು ಖರ್ಗೆ ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಿದೆ.ಇನ್ನೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ದಿವಂಗತ ಎಚ್.ಎನ್ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಸೇರಿದಂತಕೆ ಹಾಲಿ 15 ಸಂಸದರ ಹೆಸರನ್ನು ಅಂತಿಮಗೊಳಿಸಲಾಗಿದೆ.ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಡ ದಲ್ಲಿ ಬಿಜೆಪಿ ಪರಾಭವ ಗೊಂಡ ಹಿನ್ನೆಲೆಯಲ್ಲಿ  2019ರ ಲೋಕಸಭೆ ಚುನಾವಣೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ.,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಶೀಘ್ರವೇ ರಾಜ್ಯ ಸಂಸದರು ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ನಾಯಕರುಗಳಿಗೆ ಕಳುಹಿಸಿಕೊಡಲಿದ್ದಾರೆ. ಅಂತಿಮವಾಗಿ ಬಿಜೆಪಿ ರಾಷ್ಟ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ.ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಎಚ್ಚೆತ್ತುಕೊಂಡಿರುವ ಬಿಜೆಪಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲಿದೆ. ಹಾಲಿ ಸಂಸದರಿಗೆ ಸೀಟು ಕೊಡುವುದರ ಜೊತೆಗೆ ಬೇರೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ಸಲಹೆ ಕೇಳಲಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸುರೇಶ್ ಅಂಗಡಿ ಈಗಾಗಲೇ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ, ಹಾಗಾಗಿ ರಾಜ್ಯ ನಾಯಕರು ಪ್ರಭಾಕರ್ ಕೋರೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ,ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ, ಬೆಳಗಾವಿ ಅಥವಾ ಚಿಕ್ಕೋಡಿಯಿಂದ ಸ್ಪರ್ಧೆ ಬಯಸಿದ್ದೇವೆ ಎಂದು ಪ್ರಭಾಕರ್ ಕೋರೆ ತಿಳಿಸಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರಕ್ರಿಯೇ ಶೀಘ್ರವೇ ನಡೆಯಲಿದೆ. ಕೇಂದ್ರದ ಬಿಜೆಪಿ ನಾಯಕರ ಜೊತೆ ಕೋರೆ ಉತ್ತಮ ಸಂಬಂಧ ಹೊಂದಿದ್ದು, ಟಿಕೆಟ್ ಗಾಗಿ ಲಾಬಿ ನಡೆಸುವ ಸಾಧ್ಯತೆಯಿದೆ.ರಾಜ್ಯ ಸಭೆ ಸದಸ್ಯರಾಗಿರುವ ಕೋರೆ ಅವರ ಅಧಿಕಾರವಧಿ ಇನ್ನೂ ಎರಡು ಸಮಯ ಬಾಕಿಯಿದೆ, ಬೆಳಗಾವಿಯಿಂದ ಸುರೇಶ್ ಅಂಗಡಿ ನಾಲ್ಕನೇ ಬಾರಿಗೆ ಕಣಕ್ಕಳಿಯಲಿದ್ದಾರೆ., ಇನ್ನೂ ರಾಯಚೂರಿನಲ್ಲಿ ಶಾಸಕ ಕೆ, ಶಿವನಗೌಡ ನಾಯಕ್, ಅಥವಾ ಮಾಜಿ ಸಂಸದ ಸಣ್ಣ ಫಕೀರಪ್ಪ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಟರು ಚಿಂತಿಸುತ್ತಿದ್ದಾರೆ, ದಾವಣೆಗೆರೆಯಿಂದ ಜಿ.ಎಂ ಸಿದ್ದೇಶ್ವರ್ ಕಣಕ್ಕಿಳಿಯಲಿದ್ದಾರೆ.ಹಾಸನದಿಂದ ಎಂಎಲ್ ಸಿ ತೇಜಸ್ವಿನಿ ರಮೇಶ್ ಮತ್ತು ಮಾಜಿ ಸಚಿವ ಆರ್. ವಿಜಯ ಶಂಕರ್,  ಮಾದಾರ ಚನ್ನಯ ಸ್ವಾಮೀಜಿ ಅಥವಾ ಜೆ.ಎನ್ ಜನಾರ್ದನ ಸ್ವಾಮಿ ಅವರಿಗೆ ಚಿತ್ರದುರ್ಗದಿಂದ ಟಿಕೆಟ್ ನೀಡಲಾಗುವುದು. ಇನ್ನೂ ಕಾಂಗ್ರೆಸ್ ಸಂಸದರಿರಿರುವ ಕೆಲ ಕ್ಷೇತ್ರಗಳಿಗೆ ಬಿಜೆಪಿ ಹೊಸ ಅಭ್ಯರ್ಥಿಗಳನ್ನು ಯಡಿಯೂರಪ್ಪ ಗುರುತಿಸಿದ್ದಾರೆ,. ಮಾಜಿ ಸಂಸದೆ ಶಾಂತಾ, ಮಾಜಿ ಶಾಸಕ ಸುರೇಶ್ ಬಾಬು, ಶಾಸಕ ನಾಗೇಂದ್ರ, ಹಾಗೂ ಅವರ ಸಹೋದರ ವೆಂಕಟೇಶ್ ಪ್ರಸಾದ್, ಅವರನ್ನು ಕಣಕ್ಕಳಿಸುವ ಸಾದ್ಯತೆಯಿದೆ. ಬೆಂಗಳೂರು ಉತ್ತರಿಂದ ಡಿ,ವಿ ಸದಾನಂದಗೌಡ ಅವರನ್ನು ಸ್ಪರ್ದಿಸಲಿದ್ದಾರೆ,. ಬೆಂಗಳೂರು ಸೆಂಟ್ರಲ್ ನಲ್ಲಿ ಪಿ.ಸಿ ಮೋಹನ್ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಆರ್. ಅಶೋಕ್ ಅಥವಾ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರರು ಕಣಕ್ಕಿಳಿಯುವ ಸಾಧ್ಯತೆಗಳಿವೆ.

Related posts

ಅತೃಪ್ತರ ಬೇಡಿಕೆ ಈಡೇರಿಸುವ ಭರವಸೆ: 18ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್

Prajanudi Admin

ಬಿಜೆಪಿಯಿಂದ ಕುದುರೆ ವ್ಯಾಪರ, ಪ್ರತಿ ಶಾಸಕರಿಗೆ 30 ಕೋಟಿ ರು. ಆಮಿಷ: ಸಿದ್ದರಾಮಯ್ಯ

Prajanudi Admin

ಆಪರೇಷನ್ ಕಮಲಕ್ಕೆ ನಾವು ಹೆದರಲ್ಲ: ಜಿ ಪರಮೇಶ್ವರ್

Prajanudi Admin

Leave a Comment