Prajanudi
ಕ್ರೀಡೆ

ಕ್ರಿಕೆಟ್ ಅಲ್ಲ… ಜಾಹೀರಾತು ಲೋಕದಲ್ಲೂ​ ವಿರಾಟ್ ಕೊಹ್ಲಿಯೇ ನಂ.1!


ನವದೆಹಲಿ: ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಲೋಕದಲ್ಲಿ ನಂಬರ್ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿರುವ ನಾಯಕ ವಿರಾಟ್ ಕೊಹ್ಲಿ, ಇದೀಗ ಜಾಹಿರಾತು ಕ್ಷೇತ್ರದಲ್ಲೂ ನಂಬರ್ 1 ಆಗಿ ಮುಂದುವರೆದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಂ ಇಂಡಿಯಾ ನಾಯಕ ಕೊಹ್ಲಿ ಇದೀಗ ಜಾಹಿರಾತು ಕ್ಷೇತ್ರದಲ್ಲೂ ನಂಬರ್ 1 ಸ್ಥಾನಿಯಾಗಿ ಮುಂದುವರೆದಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ಭಾರತದ ಪ್ರಮುಖ ಸೆಲೆಬ್ರಿಟಿ ಜಾಹಿರಾತುದಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನಿಯಾಗಿ ಮುಂದುವರೆದಿದ್ದಾರೆ. ಜಾಹಿರಾತುಗಳಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವ ಮೂಲಕ ಬ್ರಾಂಡ್​ ವ್ಯಾಲ್ಯೂ ಉಳಿಸಿಕೊಂಡಿದ್ದ ಕೊಹ್ಲಿ, ಇದೀಗ ಬಿಟೌನ್ ನ ಸೆಲಿಬ್ರಿಟಿ​ಗಳನ್ನ ಹಿಂದಿಕ್ಕಿದ್ದಾರೆ. ಸ್ಪೋರ್ಟ್ಸ್​ ಪರ್ಸನ್ ಆಗಿರೋ ವಿರಾಟ್​ ​ನಂಬರ್​ 1 ಜಾಹಿರಾತು ಸೆಲೆಬ್ರಿಟಿ ಎಂಬ ಪಟ್ಟವನ್ನ ಮುಡಿಗೇಡಿಸಿಕೊಂಡಿದ್ದಾರೆ. 2018ರಲ್ಲಿ ಸಾಕಷ್ಟು ಜಾಹಿರಾತುಗಳಲ್ಲಿ ವಿರಾಟ್​ ಕಾಣಿಸಿಕೊಂಡಿದ್ದು,ಅತಿ ಹೆಚ್ಚು ರೇಟಿಂಗ್ಸ್​ ವಿರಾಟ್​ ಜಾಹೀರಾತುಗಳಿಗಿದೆ ಎಂದು ಸೆಲೆಬ್ರಿಟಿ ಬ್ರ್ಯಾಂಡ್​ ಎಂಡೋರ್ಸ್​ಮೆಂಟ್ ವರದಿಯಿಂದ ಬಹಿರಂಗವಾಗಿದೆ. ​ಇನ್ನು ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆಯಿದ್ದು, ಮೂರನೇ ಸ್ಥಾನದಲ್ಲಿ ಅಕ್ಷಯ್​ ಕುಮಾರ್,​ ನಾಲ್ಕನೇ ಸ್ಥಾನದಲ್ಲಿ ರಣ್​ವೀರ್​ ಸಿಂಗ್​ ಹಾಗೂ 5ನೇ ಸ್ಥಾನದಲ್ಲಿ ಶಾರುಖ್​ ಖಾನ್​ ಇದ್ದಾರೆ.

Related posts

'ಕಾಫಿ' ತಂದ ಆಪತ್ತು: ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಶೋಕಾಸ್ ನೋಟಿಸ್

Prajanudi Admin

ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಆಸ್ಟ್ರೇಲಿಯಾ ಕೋಚ್ ಶ್ಲಾಘನೆ!

Prajanudi Admin

ವಿಶ್ವಕಪ್ ನಲ್ಲಿ ಧೋನಿ ನಂ.4 ಕ್ರಮಾಂಕದಲ್ಲಿ ಆಡಬೇಕು: ಸುರೇಶ್ ರೈನಾ

Prajanudi Admin

Leave a Comment