Prajanudi
ನ್ಯೂಸ್ ರಾಜ್ಯ

ಕರ್ನಾಟಕ ನಗರಗಳಲ್ಲಿನ ಶೇ. 57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯ ಹೊಂದಿದೆ: ವರದಿ


ಬೆಂಗಳೂರು: ಕರ್ನಾಟಕದ ನಗರ ಪ್ರದೇಶಗಳಲ್ಲಿ ಕೇವಲ ಶೇ.57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಅದ್ಯಯನವೊಂದು ಬಹಿರಂಗಪಡಿಸಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನ ನಿರ್ದೇಶಕ ಜಗನ್ ಶಾ ಈ ಮಾಹಿತಿ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಲದ ಅಗತ್ಯ ನೀರು ಹಾಗೂ ನೈರ್ಮಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ್ದಾರೆ.ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.42ರಷ್ಟು  ಸುಧಾರಿತ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿವೆ.ಚಿಕ್ಕ ರಾಜ್ಯಗಳಾದ ಈಶಾನ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಲಲ್ಲಿ ಉತ್ತಮ ನೈರ್ಮಲ್ಯ ಸೌಲಭ್ಯವಿದೆ. ಅಲ್ಲದೆ, ಸುಧಾರಿತ ಕುಡಿಯುವ ನೀರಿನ ಮೂಲದ ಕುರಿತಂತೆ ಹೇಳುವುದಾದರೆ ನಗರ ಪ್ರದೇಶಗಳಲ್ಲಿ 89ಶೇ. ಸೌಲಭ್ಯವಿದ್ದರೆ ಗ್ರಾಮೀಣ ಭಾಗಗಳಲ್ಲಿ 88 ಶೇ. ಇದೆ. 015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಆಧಾರದಲ್ಲಿ ಈ ಅಂಕಿ ಸಂಖ್ಯೆ ನೀಡಲಾಗಿದೆ. “ಕರ್ನಾಟಕ, ಮತ್ತು ವಿಶೇಷವಾಗಿ ಬೆಂಗಳೂರು, ದೇಶದ ಅತ್ಯಂತ ಹಳೆಯ ನೀರಿನ ಸರಬರಾಜು ಮತ್ತು ಒಳಚರಂಡಿ ಮಂಡಳಿಗಳನ್ನು ಹೊಂದಿದೆ,” ಎಂದು ಅವರು ಹೇಳಿದರು. ಭಾರತದಲ್ಲಿ ನೀರು ಮತ್ತು ನೈರ್ಮಲ್ಯವನ್ನು ಸುಧಾರಿಸುವ ರಾಷ್ಟ್ರೀಯ ನೀತಿಗಳು ಮತ್ತು ಉಪಕ್ರಮಗಳು ಹಾಗೂ ಅಕ್ಟೋಬರ್ ನಲ್ಲಿ ನಿರೂಪಿಸಲಾದ ರಾಷ್ಟ್ರೀಯ ನಗರ ನೈರ್ಮಲ್ಯ ನೀತಿಯಲ್ಲಿನ ಬದಲಾವಣೆಗಳು, ನಿರೀಕ್ಷೆಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗಿದೆಇದು ರಾಜ್ಯದ ನಿರ್ಮಲೀಕರಣ ತಂತ್ರಗಳು ಮತ್ತು ನಗರ ನೈರ್ಮಲ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ, ಘನ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ತೆರೆದ ಮಲವಿಸರ್ಜನೆ ಮುಕ್ತ ನಗರ ನಿರ್ಮಾಣ ಮಾಡುವ ಉದ್ದೇಶದ ಕುರಿತಂತೆ ಅವರು ಮಾತನಾಡಿದ್ದಾರೆ.”ದೇಶದ ಸುಮಾರು 3,500 ನಗರಗಳು ಒಳಚರಂಡಿ ಜಾಲವನ್ನು ಹೊಂದಿಲ್ಲ. ಈ ಸೌಲಭ್ಯ ಕಲ್ಪಿಸಲು ನಾವು ಸೂಕ್ತ ಸಂಪನ್ಮೂಲವನ್ನೂ ಹೊಂದಿಲ್ಲ.ಇನ್ನು ಎಲ್ಲೆಡೆ ನೀರಿನ ಕೊರತೆ ಇದೆ, ವಾತಾವರಣ ಬದಲಾವಣೆಯ ಕಾರಣ ಅಂತರ್ಜಲ ಮಟ್ಟ ಹಾಗೂ ನೀರಿನ ಒರತೆಗಳು ಶೀಘ್ರವಾಗಿ ಒಣಗುತ್ತಿದೆ.ಅನೇಕ ಭಾಗಗಳಲ್ಲಿ ನೀರಿನ ಅಭಾವ ಎದುರಾಗುತ್ತಿದೆ.ಗಾಳಿಯಿಂದ ನೀರಿನ ಉತ್ಪಾದನೆಎಲಿಕ್ಸಿರ್ ನೀರು ೯ಎಚ್2ಓಗಾಳಿಯಿಂದ ಶುದ್ಧ ಕ್ಷಾರೀಯ ಕುಡಿಯುವ ನೀರನ್ನು ಉತ್ಪಾದಿಸುವ ವಾಯುಮಂಡಲದ ನೀರಿನ ಜನರೇಟರ್ ಅನ್ನು ಸಮ್ಮೇಳನದಲ್ಲಿ ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಪ್ರದರ್ಶಿಸಿದ್ದಾರೆ. ನೀರಿನ ಜನರೇಟರ್ ದಿನಕ್ಕೆ 10 ಲೀಟರ್ ನಿಂದ  5,000 ಲೀಟರುಗಳವರೆಗೆ ವಿವಿಧ ಸಾಮರ್ಥ್ಯದಲ್ಲಿ ಬಳಕೆಗೆ ಸಿಗಲಿದೆ.ಇದು ಗಾಳಿಯಲ್ಲಿ ತೇವಾಂಶವನ್ನು ಬಳಸಿ ನೀರನ್ನು ಉತ್ಪಾದಿಸಬಲ್ಲದು.ನಂತರ 13 ಹಂತಗಳಲ್ಲಿ ಇದನ್ನು ಶೋಧಿಸಿ ಬಳಕೆ ಮಾಡಲಾಗುತ್ತದೆ.ಇದರ ಏರ್ ಪಿಲ್ಲರ್ ಗಳನ್ನು ಪ್ರತಿ 12 ತಿಂಗಳುಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ.

Related posts

ಬೆಂಗಳೂರು: ರಕ್ತದಾನ ಉತ್ತೇಜಿಸಲು ಸಾಮಾನ್ಯ ಜನರಿಗೆ ಟೆಕ್ಕಿ ಪ್ರಥಮ ಚಿಕಿತ್ಸೆ ತರಬೇತಿ!

Prajanudi Admin

ಬೆಳಗಾವಿ: ಅಂತ್ಯಕ್ರಿಯೆ ಮುಗಿಸಿ ಬರುವಾಗ ಕಾಲುವೆಗೆ ಬಿದ್ದ ಕಾರು, ಒಂದೇ ಕುಟುಂಬದ ಐವರು ಸಾವು

Prajanudi Admin

ಶಬರಿಮಲೆಗೆ ಮಹಿಳೆಯರ ಪ್ರವೇಶ: ಕರ್ಮಾ ಸಮಿತಿಯಿಂದ ತೀವ್ರ ಪ್ರತಿಭಟನೆ!

Prajanudi Admin

Leave a Comment