Prajanudi
ನ್ಯೂಸ್ ರಾಜ್ಯ

ಈ ವರ್ಷ ಆನ್ ಲೈನ್ ನಲ್ಲಿ ಸಿಇಟಿ ಇಲ್ಲ: ಪರೀಕ್ಷಾ ಪ್ರಾಧಿಕಾರ


ಬೆಂಗಳೂರು: ಈ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಆನ್ ಲೈನ್ ನಲ್ಲಿ ಇರುವುದಿಲ್ಲ. ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಈ ವರ್ಷ ಸಂಪೂರ್ಣ ಸಜ್ಜಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.ಸಿಇಟಿ 2019ರ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಸಲಾಗುವುದು ಎಂದು ಮೊನ್ನೆ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದ್ದರು. ಆದರೂ ಆನ್ ಲೈನ್ ನಲ್ಲಿ ಪರೀಕ್ಷೆ ಮಾಡಲು ಸಮಯಾವಕಾಶ ಬೇಕಾಗಿದೆ ಎಂದು ಹೇಳಿದ್ದರು. ಜನವರಿ 19ರಂದು ಭೇಟಿಯಾಗಿ ಸಭೆ ನಡೆಸಲಿದ್ದು ಅಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಪ್ರಕ್ರಿಯೆಗಳು ನಡೆಯುತ್ತಿದ್ದು ಇದಕ್ಕೆ ಸಾಫ್ಟ್ ವೇರ್ ನ್ನು ಸಿದ್ದಪಡಿಸುತ್ತಿದ್ದರೂ ಕೂಡ ಹಲವು ಬಾರಿ ಪ್ರಾಯೋಗಿಕ ಅಣಕು ಪರೀಕ್ಷೆ ನಡೆಸಿದ ನಂತರವಷ್ಟೇ ಪರೀಕ್ಷೆ ನಡೆಸಲು ಸಾಧ್ಯ. ಒಂದೇ ಸಲಕ್ಕೆ ವಿದ್ಯಾರ್ಥಿಗಳ ಮೇಲೆ ಹೇರಲು ಸಾಧ್ಯವಿಲ್ಲ ಏಕೆಂದರೆ ಬಹುತೇಕ ಮಂದಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ. 2020ರ ಸಿಇಟಿಯಿಂದ ನಡೆಸಬಹುದಾಗಿದೆ ಎಂದು ಕೆಇಎಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Related posts

ಸಾವಿನಲ್ಲೂ ಸಾರ್ಥಕತೆ: ಹೃದಯಾಘಾತದಿಂದ ಸಾವನ್ನಪ್ಪಿದ ಪತ್ರಕರ್ತನ ಅಂಗಾಂಗ ದಾನ

Prajanudi Admin

ಬಿಜೆಪಿ ಜೊತೆಗಿನ ಅನುಭವವೂ ಚೆನ್ನಾಗಿರಲಿಲ್ಲ, ಅನುಕೂಲಕ್ಕೆ ತಕ್ಕಂತೆ ಮೋದಿ ಹೇಳಿಕೆ: ದೇವೇಗೌಡ

Prajanudi Admin

ರಾಮ ಮಂದಿರ ಪ್ರಕರಣದ ವಿಚಾರಣೆ ಮುಂದೂಡಲು ಸುಪ್ರೀಂ ಕೋರ್ಟ್ ತೆಗೆದುಕೊಂಡಿದ್ದು ಕೇವಲ 30 ಸೆಕೆಂಡ್!

Prajanudi Admin

Leave a Comment