Prajanudi
ಕ್ರೀಡೆ

ನಿವೃತ್ತಿ ನಂತರ ಬ್ಯಾಟ್ ಹಿಡಿಯಲ್ಲ: ವಿರಾಟ್ ಕೊಹ್ಲಿ


ಸಿಡ್ನಿ: ಸದ್ಯ ಕ್ರಿಕೆಟಿಗರು ನಿವೃತ್ತಿ ನಂತರ ಟಿ20 ಲೀಗ್ ಗಳಲ್ಲಿ ಆಡುವುದು ಒಂದು ಟ್ರೆಂಡ್ ಆಗಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮಾತ್ರ ನಿವೃತ್ತಿ ನಂತರ ಬ್ಯಾಟ್ ಹಿಡಿಯುವುದಿಲ್ಲ ಎಂದು ಘೋಷಿಸಿದ್ದಾರೆ.ನಿವೃತ್ತಿ ನಂತರ ಆಸ್ಟ್ರೇಲಿಯನ್ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡುತ್ತಿರಾ? ಎಂಬ ವರದಿಗಾರರ ಪ್ರಶ್ನಿಗೆ ಉತ್ತರಿಸಿದ ಕೊಹ್ಲಿ, ನಾನು ಈಗಾಗಲೇ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಯಾವಾಗ ನನಗೆ ಆಡಿದ್ದು ಸಾಕು ಅಂತ ಅನಿಸುತ್ತದೆಯೋ ಆವತ್ತು ಆಟದಿಂದ ನಿವೃತ್ತಿ ಪಡೆಯುತ್ತೇನೆ. ಅದರ ನಿವೃತ್ತಿ ನಂತರ ಬ್ಯಾಟ್ ಕೂಡಾ ಹಿಡಿಯುದಿಲ್ಲ ಎಂದಿದ್ದಾರೆ. ನಿವೃತ್ತಿ ನಂತರ ಮತ್ತೆ ಕ್ರಿಕೆಟ್ ಆಡುವ ಯೋಚನೆ ಇಲ್ಲ. ನನ್ನ ಆಟ ಯಾವತ್ತು ಮುಗಿಯುತ್ತೋ ಆವತ್ತು ನಾನು ವಿದಾಯ ಘೋಷಿಸುತ್ತೇನೆ. ಮತ್ತೆ ಬ್ಯಾಟ್ ಹಿಡಿಯುದಿಲ್ಲ. ನಿವೃತ್ತಿ ನಂತರ ಮೊದಲು ಏನು ಮಾಡಬೇಕು ಎಂದು ಕೂಡಾ ಯೋಚನೆ ಮಾಡಿಲ್ಲ ಎಂದರು. ಭಾರತ ಮತ್ತು ಆಸ್ಟ್ರೇಲಿಯಾ  ನಡುವಿನ ಮೊದಲ ಏಕದಿನ ಪಂದ್ಯ ಜನವರಿ 12 ಶನಿವಾರ ಸಿಡ್ನಿಯಲ್ಲಿ ನಡೆಯಲಿದೆ.

Related posts

ಭಾರತ ವರ್ಸಸ್ ಆಸ್ಟ್ರೇಲಿಯಾ 4ನೇ ಟೆಸ್ಟ್; ಮಂದ ಬೆಳಕಿಗೆ ಬಲಿಯಾದ 4ನೇ ದಿನದಾಟ

Prajanudi Admin

ಹಾರ್ದಿಕ್ ಪಾಂಡ್ಯ, ರಾಹುಲ್ ವಿರುದ್ಧ ಶಿಸ್ತು ಕ್ರಮ, 82 ವರ್ಷಗಳಲ್ಲೇ 2ನೇ ಪ್ರಕರಣ

Prajanudi Admin

ಆಸಿಸ್ ವಿರುದ್ಧ ಮಾರಕ ಬೌಲಿಂಗ್ ದಾಳಿ; ಅಪರೂಪದ ದಾಖಲೆ ಬರೆದ ಯಜುವೇಂದ್ರ ಚಹಲ್

Prajanudi Admin

Leave a Comment