Prajanudi
ನ್ಯೂಸ್ ರಾಜ್ಯ

ಹೊಸ ತಂತ್ರಜ್ಞಾನ ಬಳಸಿ ಮಾಡುವ ಅಪರಾಧಗಳನ್ನು ಪತ್ತೆ ಹಚ್ಚಲು ನೂತನ ಆವಿಷ್ಕಾರ ಅಗತ್ಯ: ಸಿಎಂ


ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಕ್ರಿಮಿನಲ್‌ಗಳು ಅಪರಾಧಗಳನ್ನು ಎಸಗಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಜೊತೆಗೆ ಹೊಸ ಬಗೆಯ ಅಪರಾಧ ಪ್ರಕರಣಗಳು ಸಹ ಹೆಚ್ಚುತ್ತಿವೆ. ಹೀಗಾಗಿ ಎಫ್‌ಎಸ್‌ಎಲ್‌ಗಳಲ್ಲಿ ಹೊಸ ಅನ್ವೇಷಣೆ ಮತ್ತು ಸಂಶೋಧನೆಗಳಿಗೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ನಗರದ ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಹಮ್ಮಿಕೊಂಡಿದ್ದ ‘ನ್ಯಾಯ ವಿಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗೆಗಳು’ ಎಂಬ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್‌) ಕಾರ್ಯ ನಿರ್ವಹಿಸುವ ವಿಜ್ಞಾನಿಗಳಿಗೆ ನಿರಂತರವಾಗಿ ತರಬೇತಿ ಆಯೋಜಿಸುವ ಮೂಲಕ ಕೌಶಲ ವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ವಿಧಿ ವಿಜ್ಞಾನ ಪ್ರಯೋಗಾಲಯಗಳು ನೀಡಿದ ವರದಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಎಫ್‌ಎಸ್‌ಎಲ್‌ನ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳಿಂದಾಗಿ ಕ್ರಿಮಿನಲ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚು ಸಹಕಾರಿಯಾಗುತ್ತಿದೆ. ನ್ಯಾಯಾಲಯಗಳು ಸಹ ಎಫ್‌ಎಸ್‌ಎಲ್‌ನ ವೈಜ್ಞಾನಿಕ ವರದಿಗಳನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸುತ್ತಿವೆ. ಶಾಂತಿಯುತ ಸಮಾಜ ನಿರ್ಮಾಣಕ್ಕೆ ಎಫ್‌ಎಸ್‌ಎಲ್‌ನ ಕೊಡುಗೆ ಅಪಾರವಾಗಿದೆ. ಕರ್ನಾಟಕದಲ್ಲಿ ದೇಶದಲ್ಲೇ ಅತ್ಯುತ್ತಮ ದರ್ಜೆಯ ಪ್ರಯೋಗಾಲಯ ಮತ್ತು ದಕ್ಷ ವಿಜ್ಞಾನಿಗಳನ್ನು ಹೊಂದಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.,ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು, ಹಿರಿಯ ಪೊಲೀಸ್‌ ಅಧಿಕಾರಿಗಳಾದ ಡಾ.ಸಲೀಂ, ಎಂ.ಎನ್‌.ರೆಡ್ಡಿ, ಪ್ರವೀಣ್‌ ಸೂದ್‌, ಪೋಸ್ಟ್‌ ಮಾಸ್ಟರ್‌ ಜನರಲ್‌ ಅರವಿಂದ್‌ ವರ್ಮಾ, ಎಫ್‌ಎಸ್‌ಎಲ್‌ ನಿರ್ದೇಶಕಿ ಇಶಾ ಪಂತ್‌ ಮತ್ತಿತರರಿದ್ದರು. ಮಡಿವಾಳಜ ಎಫ್ ಎಸ್ ಎಲ್ ಕ್ಯಾಂಪಸ್ ನಲ್ಲಿ ಆರ್ಟ್ ಸೈಬರ್ ಫೋರೆನ್ಸಿಕ್ ಲ್ಯಾಬ್ ಸ್ಥಾಪಿಸಲು ಸರ್ಕಾರ 5 ಕೋಟಿ ರು ಅನುದಾನ ನೀಡಿದೆ ಎಂದು ರಾಜ್ಯಾ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ತಿಳಿಸಿದ್ದಾರೆ,.

Related posts

ಬುಲಂದ್'ಶೆಹರ್ ಪೊಲೀಸ್ ಹತ್ಯೆ ಪ್ರಕರಣ: ಅಧಿಕಾರಿಗೆ ಮಾರಾಕಾಸ್ತ್ರದಿಂದ ತಲೆಗೆ ಹೊಡೆದಿದ್ದ ಆರೋಪಿ ಬಂಧನ

Prajanudi Admin

ಮಂಜಿನಲ್ಲಿ ವರಾಹಾವತಾರ ಸೃಷ್ಟಿ: ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ!

Prajanudi Admin

ಪವಾಡ ಪುರುಷನ ಅಂತ್ಯ: ಸಾವಿಗೆ 2 ದಿನ ಮುನ್ನವೇ ಆಹಾರ ಸೇವನೆ ನಿಲ್ಲಿಸಿದ್ದ ಸಿದ್ದಗಂಗೆಯ ಯೋಗಿ!

Prajanudi Admin

Leave a Comment