• Home
  • ಆರೋಗ್ಯ
  • ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ -ಡಾ| ನಾರಾಯಣ ಪಂಜಿ,
ಆರೋಗ್ಯ ನಮ್ಮ ವಿಶೇಷ

ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ -ಡಾ| ನಾರಾಯಣ ಪಂಜಿ,

ಶಿವಮೊಗ್ಗ ಅ3: ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯರು ಅನಾರೋಗ್ಯಕ್ಕೀಡಾಗುವುದು ಹೆಚ್ಚಾಗುತ್ತಿದೆ.   ಆರೋಗ್ಯ ಸಂರಕ್ಷಣೆಗಾಗಿ ಉತ್ತಮ ಜೀವನಶೈಲಿ, ಆಹಾರ ಪದ್ಧತಿ, ವ್ಯಾಯಾಮದೊಂದಿಗೆ ನಿರಂತರ ಆರೋಗ್ಯ ತಪಾಸಣೆ ಸಹ ಅಗತ್ಯ ಎಂದು ನರರೋಗ ತಜ್ಞ ಡಾ. ನಾರಾಯಣ ಪಂಜಿ ಹೇಳಿದರು.

ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂಪನಿ ವತಿಯಿಂದ ಇಂದು ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವಾದ ಮೆಗಾ ಹೆಲ್ತ್ ಎಕ್ಸ್ ಪೋ-2019 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಅನಾರೋಗ್ಯ ಉಂಟಾದಾಗ ಮಾತ್ರ ವೈದ್ಯರನ್ನು ಕಾಣುತ್ತೇವೆ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತೇವೆ. ಆದರೆ, ಕೆಲವು ಕಾಯಿಲೆಗಳು ಕಾಣಿಸಿಕೊಳ್ಳುವುದೇ ಗೊತ್ತಾಗುವುದಿಲ್ಲ. ಇಲ್ಲವೇ ಪ್ರಾರಂಭಿಕ ಹಂತದಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷಿಸಿದರೆ ಅಪಾಯ ನಿಶ್ಚಿತ ಎಂದರು.

ಮಲೆನಾಡಿನಲ್ಲಿ  ರೈತಕುಟುಂಬಗಳೇ ಹೆಚ್ಚು. ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದಾಗ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಿಂದೆಲ್ಲಾ 45ರಿಂದ 55 ವರ್ಷದ ವಯೋಮಾನದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಗಳು ಈಗ 30 ವರ್ಷದವರಲ್ಲೇ ಕಂಡುಬರುತ್ತಿದೆ. ಆದ್ದರಿಂದ ವಯಸ್ಸಾದ ಮೇಲೆ ಆರೋಗ್ಯದ ಇನ್‍ಶ್ಯೂರೆನ್ಸ್ ಮಾಡಿಸಿಕೊಳ್ಳುವ ಬದಲು 30ರ ಹರೆಯದ ಆಸುಪಾಸಿನಲ್ಲಿ ಇನ್‍ಶ್ಯೂರೆನ್ಸ್ ಮಾಡಿಸಿಕೊಳ್ಳುವುದು ಉತ್ತಮ ಎಂದರು.

ಇಳಿ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳು ಹೆಚ್ಚು. ಆದರೆ, ಮನೆ ಸಾಲ, ಮಕ್ಕಳ ಮದುವೆ ಸಾಲ, ಸೇರಿದಂತೆ ಮತ್ತಿತರೆ ಕಾರಣಗಳಿಂದಾಗಿ ಅನಾರೋಗ್ಯ ಉಂಟಾದಾಗ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಜೀವನದ ಕೊನೆ ಹಂತದಲ್ಲಿ ಆರೋಗ್ಯ ಸಂರಕ್ಷಣೆಗೆ ಆರ್ಥಿಕ ಭದ್ರತೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂಪನಿಯ ವಲಯಾಧಿಕಾರಿ ಎಸ್. ಚಂದ್ರಶೇಖರ್ ಮಾತನಾಡಿ, ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ತಪಾಸಣೆ ಅಷ್ಟೇ ಅಲ್ಲ, ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಪರೀಕ್ಷೆಗಳನ್ನೂ ಸಹ ನಡೆಸುತ್ತಿದೆ ಎಂದರು.

ಬ್ರಾಂಚ್‍ನ ಶಾಖಾಧಿಕಾರಿ ರಾಘವೇಂದ್ರ, ಡಾ. ಗೋಪಾಲ್, ಡಾ. ಸಚಿನ್. ಎಸ್. ಕೊಟ್ಟೂರ್, ಉಪಸ್ಥಿತರಿದ್ದರು.

 

Related posts

ಮೈಸೂರು ದಸರಾ: ಯುವ ಸಂಭ್ರಮಕ್ಕೆ ಡೇಟ್ ಫಿಕ್ಸ್

Kannadigara Prajanudi

ಯುವ ಸಮೂಹ ಜಾನಪದ ಕಲೆ ಮೈಗೂಡಿಸಿಕೊಳ್ಳಿ : ಡಿ. ಮಂಜುನಾಥ್

Kannadigara Prajanudi

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ

Kannadigara Prajanudi

Leave a Comment