February 23, 2019
Prajanudi
ಎಡಿಟರ್ ಚಾಯ್ಸ್ ನಮ್ಮ ವಿಶೇಷ

ನರ್ಸರಿಗೆ ಅಡ್ಮಿಷನ್ ಮಾಡಿದ್ರೆ ಮಾತ್ರ 1ನೇ ಕ್ಲಾಸಿಗೆ ಸೀಟು; ಇದು ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳ ನಿಯಮ!

ಬೆಂಗಳೂರು: ನಗರದ ಬಹುತೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಮಾಡಲು ಮುಂದಾಗಿರುವ ಬಹುತೇಕ ಪೋಷಕರಿಗೆ ಸಮಸ್ಯೆ ಎದುರಾಗಿದೆ. ಅನೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಹೊಸ ಮಕ್ಕಳನ್ನು ದಾಖಲಿಸಿಕೊಳ್ಳಲು ಒಪ್ಪುತ್ತಿಲ್ಲ. ನರ್ಸರಿಯಿಂದಲೇ ತಮ್ಮ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ಆದ್ಯತೆ ನೀಡುತ್ತಿವೆ. ನಿಮಗೆ ಒಂದನೇ ತರಗತಿಯಲ್ಲಿ ಸುಲಭವಾಗಿ ದಾಖಲಾಗಲು ಮಕ್ಕಳನ್ನು ನರ್ಸರಿಗೇ ಸೇರಿಸಿ ಎಂದು ಹಲವು ಶಾಲೆಗಳು ಒತ್ತಾಯ ಮಾಡುತ್ತಿವೆ. ಇದು ಬಹುತೇಕ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.ನಾವು ಮಕ್ಕಳನ್ನು ಮನೆ ಹತ್ತಿರದ ಮಾಂಟೆಸ್ಸರಿ ಶಾಲೆಗೆ ಕಳುಹಿಸಿದ್ದು ಈ ವರ್ಷ ಒಂದನೇ ಕ್ಲಾಸಿಗೆ ಹಾಕಬೇಕು.

5 ಖಾಸಗಿ ಶಾಲೆಗಳಿಗೆ ಹೋದೆವು, ಆದರೆ ಅಲ್ಲಿ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಸೀಟು ಇಲ್ಲ ಎಂದು ಕಳಿಸಿದ್ದಾರೆ ಎಂದು ಶಿಲ್ಪಾ ಪ್ರಶಾಂತ್ ಎಂಬುವವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.ಬೇರೆ ಶಾಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳು ಪ್ರತ್ಯೇಗ ವಿಭಾಗ ಆರಂಭಿಸಬೇಕು ಎಂದು ಮತ್ತೊಬ್ಬ ಪೋಷಕರು ಹೇಳುತ್ತಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಾವು ಏಳು ಶಾಲೆಗಳನ್ನು ಸಂಪರ್ಕಿಸಿದ್ದೇವೆ. ಆದರೆ ನನ್ನ ಮಗುವನ್ನು ದಾಖಲಿಸಿಕೊಳ್ಳಲು ಯಾರೂ ಸಿದ್ದರಿಲ್ಲ. ಹೀಗಾಗಿ ಇಷ್ಟವಿಲ್ಲದ ಶಾಲೆಯಲ್ಲಿ ಸೇರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಹಯೋಗ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್, ಸರ್ಕಾರ ಸೂಚಿಸಿದ ವಯಸ್ಸಿಗೆ ಅನುಗುಣವಾಗಿ ಶಾಲೆಗಳು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಪೋಷಕರಿಗೆ ಅದೇ ಶಾಲೆ ಬೇಕೆಂದರೆ ನರ್ಸರಿಯಿಂದಲೇ ದಾಖಲಾತಿ ಮಾಡಿಕೊಳ್ಳಬೇಕು ಎನ್ನುತ್ತಾರೆ.

Related posts

4 ವರ್ಷಗಳಲ್ಲಿ 200 ಹೆರಿಗೆ! ಹುಬ್ಬಳ್ಳಿಯ ಈ ವೈದ್ಯಕೀಯ ಸಹಾಯಕ ಗ್ರಾಮಿಣ ಮಹಿಳೆಯ ಆಶಾದೀಪ

Prajanudi Admin

ಲೈಂಗಿಕ ಹಿಂಸೆಯ ವಿರುದ್ಧ ಹೋರಾಡಿದ ಚಾಂಪಿಯನ್ನರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಗರಿ

Prajanudi Admin

2018ರ ಭೀಕರ ಪ್ರಕೃತಿ ವಿಕೋಪಗಳು

Prajanudi Admin

16 comments

Leave a Comment