• Home
  • ಅಂಕಣ
  • ವಿಶ್ವ ಬಾಹ್ಯಕಾಶ ಸಪ್ತಾಹ -2019
ಅಂಕಣ

ವಿಶ್ವ ಬಾಹ್ಯಕಾಶ ಸಪ್ತಾಹ -2019

ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯು.ಆರ್.ರಾವ್ ಉಪಗ್ರಹ ಕೇಂದ್ರದ ಸಹಯೋಗದೊಂದಿಗೆ ವಿಶ್ವ ಬಾಹ್ಯಕಾಶ ಸಪ್ತಾಹ-2019 ಹಮ್ಮಿಕೊಳ್ಳಲಾಗಿತ್ತು.

ಯು.ಆರ್.ರಾವ್ ಉಪಗ್ರಹ ಕೇಂದ್ರದ ಪ್ರಧಾನ ವ್ಯವಸ್ಥಾಪಕರಾದ ದೇವಿಪ್ರಸಾದ್ ಕಾರನಿಕ್ ಮಾತನಾಡಿ, ಭಾರತದ ಪರವಾಗಿ 19 ಎಪ್ರಿಲ್ 1975ರಲ್ಲಿ ಪ್ರಪ್ರಥಮವಾಗಿ ಆರ್ಯಭಟ ಉಪಗ್ರಹ ಉಡಾವಣೆ ಮಾಡಲಾಯಿತು. ಇದುವರೆಗೂ ಇಸ್ರೋ ಸ್ವಯಂ ನಿರ್ಮಿತ 106 ಉಪಗ್ರಹ ಹಾಗು 33 ದೇಶಗಳ 297 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಇಸ್ರೋದ ಉಪಗ್ರಹ ವಿನ್ಯಾಸ, ನಿರ್ಮಾಣ ಮತ್ತು ಉಡಾವಣಾ ವಾಹಕಗಳ ತಂತ್ರಜ್ಞಾನ ಪ್ರಪಂಚದ ಅತ್ಯುತ್ತಮ ತಂತ್ರಜ್ಞಾನಗಳಲ್ಲೊಂದಾಗಿದೆ. ದೂರಸಂಪರ್ಕ ಸೇವೆ, ಭೂ, ನೌಕಾ ಹಾಗೂ ವಾಯುದಳ, ದೂರಶಿಕ್ಷಣ, ದೂರ ವೈದ್ಯಕೀಯ ಸೇವೆ, ಭೂಸಮೀಕ್ಷೆ, ಗಣಿ ಮತ್ತು ಭೂವಿಜ್ಞಾನ, ನೀರಾವರಿ ನಿರ್ವಹಣೆ, ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಉಪಗ್ರಹ ಪ್ರಮುಖ ಪಾತ್ರವಹಿಸುತ್ತದೆ. ಮಂಗಳಯಾನ ಮತ್ತು ಚಂದ್ರಯಾನಗಳಂತ ಯೋಜನೆಗಳು ಭಾರತವನ್ನು ವಿಶ್ವ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ದೇಶದ ಮನುಕುಲದ ಒಳಿತಿಗಾಗಿ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಯಲ್ಲಿ ಉಪಗ್ರಹ ಕೇಂದ್ರ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ಯು.ಆರ್.ರಾವ್ ಉಪಗ್ರಹ ಕೇಂದ್ರದ ಸಹ ವ್ಯವಸ್ಥಾಪಕರಾದ ರಮೇಶ್ ನಾಯ್ಡು ಮಾತನಾಡಿ ಬಾಹ್ಯಾಕಾಶ ಸಂಶೋಧನೆಗಳು ಜನ ಸಾಮಾನ್ಯರ ಶಾಂತಿ ಮತ್ತು ಬದುಕಿನ ಉನ್ನತೀಕರಣಕ್ಕೆ ಪೂರಕವಾದರೆ ಮಾತ್ರ್ರ ಅರ್ಥಪೂರ್ಣವಾಗುತ್ತವೆ.  ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಬಗ್ಗೆ ವಿದ್ಯಾರ್ಥಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ-ಪ್ರತಿವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ “ವಿಶ್ವ ಬಾಹ್ಯಕಾಶ ಸಪ್ತಾಹ” ಆಚರಿಸಲಾಗುತ್ತದೆ ಎಂದರು. ಪ್ರಾಚಾರ್ಯರಾದ ಡಾ.ಬಿ.ಸಿ. ಶಾಂತಪ್ಪ ಮಾತನಾಡಿ ಯು.ಆರ್.ರಾವ್ ಅವರನ್ನು  ಚಿತ್ರದುರ್ಗದಲ್ಲಿ  ಪ್ರಪ್ರಥಮವಾಗಿ ಅವರಿಂದ ಉಪನ್ಯಾಸ ಏರ್ಪಡಿಸಿ ಸನ್ಮಾನಿಸಿದ ಕೀರ್ತಿ ಎಸ್.ಜೆ.ಎಂ. ವಿದ್ಯಾಪೀಠಕ್ಕೆ ಸಲ್ಲುತ್ತದೆ. ದೇಶದ ತಂತ್ರಜ್ಞಾನ ಶಕ್ತಿಯುತವಾಗಿದ್ದರೆ ದೇಶದ ಅಭಿವೃದ್ದಿ ಸುಲಭವಾಗುತ್ತದೆ. ಅಂತರಿಕ್ಷದಲ್ಲಿ ಉಪಗ್ರಹ ತ್ಯಾಜ್ಯಗಳಿಂದ ಮಾಲಿನ್ಯ ಕೂಗು ಕೇಳಿಬರುತ್ತಿದೆ ಆದರೆ ಅದು ಸಲ್ಲದು. ಉಪಗ್ರಹಗಳಿಂದ ಯಾವುದೇ ತ್ಯಾಜ್ಯ ನಿರ್ಮಾಣವಾಗುವುದಿಲ್ಲ. ಉಪಗ್ರಹಗಳಿಂದ ದೂರ ಸಂಪರ್ಕಕ್ಷೇತ್ರದಲ್ಲಿ ಅಸಾಧಾರಣ ಅಭಿವೃದ್ದಿಯಾಗಿದೆ. ಇಸ್ರೋ ಕೇಂದ್ರ ಒಂದೇ ಬಾರಿಗೆ 3-4 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿಗಳು ಬಾಹ್ಯಾಕಾಶ ತಂತ್ರಜ್ಞಾನ ಅರಿತು ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕೆಂದು ಕರೆಇತ್ತರು.

ಸದರಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಉಪಗ್ರಹ ಮಾದರಿ ಹಾಗು ಉಡಾವಣ ವಾಹಕಗಳ ಮಾದರಿ ಮತ್ತು ಬಿತ್ತಿ ಪತ್ರಗಳಪ್ರದರ್ಶನ ಕಾರ್ಯಕ್ರಮದ ಬಹು ಮುಖ್ಯ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದ ನಿರೂಪಣೆ-ಶ್ರೀಮತಿ. ಸುಶ್ಮಿತ ದೇಬ್, ಪ್ರಾರ್ಥನೆ-ಶ್ರೀಮತಿ ವಿಜಯಲಕ್ಷ್ಮಿ, ಸ್ವಾಗತ-ಚೇತನ್, ವಂದನಾರ್ಪಣೆ-ಶ್ರೀಮತಿ.ತನುಜಾ ಕಾರ್ಯಕ್ರಮವನ್ನು ಸಂಸ್ಥೆಯ ಇಲಾಖಾ ಮುಖ್ಯಸ್ಥರು, ಅಧ್ಯಾಪಕರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Related posts

ಮಹಾಲಯ ಅಮಾವಾಸ್ಯೆ ದಿನದಂದು ಹುಟ್ಟಿದ ಎಲ್ಲ ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಹೊಣೆ ನಮ್ಮದೇ – ಡಾ.ಶಿವಮೂರ್ತಿ ಮುರುಘಾ ಶರಣರು

Kannadigara Prajanudi

ಸಮಾಜದಲ್ಲಿ ಹೊಸಹೊಸ ಬಗೆಯ ಸೈಬರ್ ಕ್ರೈಂಗಳು ನಡೆದು ಆತಂಕವನ್ನು ತಂದೊಡ್ಡುತ್ತಿವೆ -ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Kannadigara Prajanudi

ವರ್ತಮಾನ! ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗ

Kannadigara Prajanudi

Leave a Comment