• Home
  • ಶಿಕ್ಷಣ
  • ಗಾಂಧೀಜಿ ವಿಚಾರಧಾರೆಗಳಿಗೆ ಅಪಚಾರ ಮಾಡಿತೆ ಕುವೆಂಪು ವಿವಿ?
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿಕ್ಷಣ

ಗಾಂಧೀಜಿ ವಿಚಾರಧಾರೆಗಳಿಗೆ ಅಪಚಾರ ಮಾಡಿತೆ ಕುವೆಂಪು ವಿವಿ?

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಹ್ಯಾದ್ರಿ ಉತ್ಸವ ಜರಗುತ್ತಿದೆ. ವಿವಿ ಆವರಣಕ್ಕೆ ಎರಡು ಜಿಲ್ಲೆಯ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಇದರಲ್ಲಿ ಭಾಗವಹಿಸಿದ್ದಾರೆ. ಹತ್ತಾರು ಸ್ಪರ್ಧೆಗಳನ್ನು ಇವರಿಗಾಗಿ ಆಯೋಜಿಸಲಾಗಿರುತ್ತದೆ. ಅವುಗಳಲ್ಲಿ ಚರ್ಚಾಗೋಷ್ಠಿಯು ಕೂಡ ಒಂದು. ಈ ಬಾರಿಯ ಚರ್ಚಾಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟಂತಹ ವಿಷಯವನ್ನು ತಾವು ಕೇಳಿದರೆ ಒಂದು ಬಾರಿ ಹೌಹಾರುತ್ತೀರಿ! ಅಷ್ಟೇ ಏಕೆ, ಈ ಚರ್ಚೆಯಲ್ಲಿ ಭಾಗವಹಿಸಿದಂತಹ ವಿದ್ಯಾರ್ಥಿಗಳೇ ಅವರು ಚರ್ಚಿಸಬೇಕಾದ ವಿಷಯ ಕಂಡು ದಿಗ್ಭ್ರಾಂತರಾಗಿದ್ದಾರೆ. ಅದರೆ ಇದು ಸ್ಪರ್ಧೆ, ಭಾಗವಹಿಸಲೇ ಬೇಕಾದ್ದರಿಂದ ಕೆಲ ವಿದ್ಯಾರ್ಥಿಗಳು, ತಮ್ಮ ವಿಷಯವನ್ನು ಅಲ್ಲಿ ಪ್ರಚುರಪಡಿಸಿದ್ದಾರೆ. ಆದರೆ ನಾವು  ಎಂದೂ ಇಲ್ಲಿಟ್ಟಿರುವ ಪ್ರಸ್ತುತೆಯನ್ನು ಪ್ರಶ್ನಿಸುವ ಮನಸ್ಥಿತಿ ಹೊಂದಿಲ್ಲವೆಂದು ವಿದ್ಯಾರ್ಥಿಗಳು ಆಯೋಜಕರ ಮೊಖಕ್ಕೆ ರಾಚುವಂತೆ ನೇರವಾಗಿ ಹೇಳಿಯೇ ತಮ್ಮ ವಿಷಯವನ್ನು ಮಂಡಿಸಿದ್ದಾರೆ. ಅದರೂ ಆಯೋಜಕರಿಗೆ ತಮ್ಮ ತಪ್ಪಿನ ಅರಿವಾಗಿಲ್ಲ.

 

ಹಾಗಾದರೆ ಆ ವಿಚಾರ ಏನು? ನೋಡಿ ಇಲ್ಲಿದೆ ಡಿಟೈಲ್

ಕುವೆಂಪು ವಿಶ್ವವಿದ್ಯಾನಿಲಯದ ಸಹ್ಯಾದ್ರಿ ಉತ್ಸವಕ್ಕೆ ಒಂದು ಘನತೆ ಮತ್ತು ಹಿರಿಮೆ ಇದೆ. ಅದನ್ನು ನಿರಂತರವಾಗಿ ಕಾಪಾಡಿಕೊಂಡು ಬರಲಾಗಿದೆ. ಆದರೆ ಈ  ಬಾರಿ ಚರ್ಚಾಗೋಷ್ಟಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಚರ್ಚೆಗೆ ಕೊಟ್ಟಂತಹ ವಿಷಯ “ಗಾಂಧೀಜಿ ಚಿಂತನೆಗಳು ಪ್ರಸ್ತುತವೇ?”  ಈ ವಿಷಯವನ್ನು  ಕುರಿತು ಮಾತನಾಡುವುದಕ್ಕೆ ವಿದ್ಯಾರ್ಥಿಗಳಿಗೆ  ಚರ್ಚೆಗೆ ವಿಷಯವನ್ನು  ಇಟ್ಟಿದ್ದು ಎಷ್ಟರಮಟ್ಟಿಗೆ ಸರಿ? ಎಂಬ ಬಗ್ಗೆ  ಶೈಕ್ಷಣಿಕ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಗಾಂಧೀಜಿಯವರು ಈ ದೇಶದ ಸ್ವಾಭಿಮಾನದ ಸಂಕೇತ, ಅಹಿಂಸೆಯ ರೂಪಕ ಮತ್ತು ಬಹಳ ಮುಖ್ಯವಾಗಿ ಅಂತರರಾಷ್ಟ್ರೀಯ ಘನತೆಯ ವ್ಯಕ್ತಿತ್ವ. ಇವತ್ತು ಗಾಂಧಿ ತತ್ವಗಳೆನ್ನೆಲ್ಲಾ ಜಗತ್ತಿನಾದ್ಯಂತ ಪ್ರಸಾರ ಮಾಡುವಂತಹ ಈ ಸಂದರ್ಭದಲ್ಲಿ, ಗಾಂಧಿಯ ಆದರ್ಶಗಳೆ ನಮಗೆ ಮುಖ್ಯವಾಗಬೇಕು ಎಂದು ಆಲೋಚನೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ಭಾರತದಲ್ಲೂ ಕೂಡ ಗಾಂಧಿಜಯಂತಿಯ 150 ವರ್ಷಗಳನ್ನ ಸಮೃದ್ಧವಾಗಿ ಆಚರಿಸಿ ಗಾಂಧಿಯನ್ನು ಎಲ್ಲರಿಗೂ ಪರಿಚಯಿಸಬೇಕು ಎನ್ನುವ ಈ ಹೊತ್ತಿನಲ್ಲಿ,             ಸಾಂಸ್ಕೃತಿಕ,                  ಚಾರಿತ್ರಿಕ ಘನತೆಯನ್ನು ಹೊಂದಿರುವ ವಿಶ್ವವಿದ್ಯಾನಿಲಯ ಗಾಂಧೀಜಿಯವರ ಪ್ರಸ್ತುತತೆಯನ್ನು ಸರಿ ತಪ್ಪು ಎಂದು ಚರ್ಚೆಗೆ  ಇಡೋದೇ ಎಷ್ಟರಮಟ್ಟಿಗೆ ಸರಿಯಾದುದು? ಇದು ಗಾಂಧೀಜಿಗೆ ಸಲ್ಲಿಸಬಹುದಾದಂತಹ ಮರ್ಯಾದೆ ಅನ್ನಿಸುತ್ತದೆಯೇ? ಸ್ವತ: ಕುವೆಂಪು ಗಾಂಧಿಯಿಂದ, ಗಾಂಧಿಯ ಸರ್ವೋದಯ ತತ್ವದಿಂದ ಪ್ರಭಾವಿತರಾದವರು. ಅಂತಹ ತತ್ವಗಳನ್ನು ಇಟ್ಟುಕೊಂಡ ವಿಶ್ವವಿದ್ಯಾನಿಲಯ ಹೀಗೆ ಆಲೋಚನೆ ಮಾಡುವಂತಹದ್ದು ಅಪಾಯಕಾರಿಯಂತಲೇ ಭಾವಿಸಬಹುದು. ವಿಶ್ವವಿದ್ಯಾನಿಲಯಕ್ಕೆ ಸಾಂಸ್ಕøತಿಕ ಜವಾಬ್ದಾರಿ  ಎಲ್ಲ ಕಾಲದಲ್ಲೂ ಇರಬೇಕು. ಇಂತಹದ್ದೊಂದು ವಿಚಾರವನ್ನು ಆಯ್ಕೆ ಮಾಡಬಹುದಾದಂತಹ ಬೌದ್ಧಿಕತೆಯನ್ನು ಏನೆಂದು ಕರೆಯಬಹುದು? ಎನ್ನುವಂತಹದ್ದು ಕೂಡ ನಮಗೆ ಆತಂಕವನ್ನು ತರುವ ಸಂಗತಿ. ಇಂತಹ ವಿಷಯಗಳನ್ನು ತರುವಾಗಲೂ ಕೂಡ ಒಂದು  ಸಾಂಸ್ಕೃತಿಕ, ಎಚ್ಚರ ಇಲ್ಲದೇ ಇರುವಂತವರು, ಇಂತಹದ್ದನ್ನು ನಿರ್ವಹಿಸುವುದನ್ನು ಕೂಡ ನಾವು ಖಂಡಿಸಬೇಕಾಗುತ್ತದೆ. ಈ ಕುರಿತು ವಿಶ್ವವಿದ್ಯಾನಿಲಯ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಹೋದಲ್ಲಿ ಈ ತರಹದ ಒಂದು ಗೊಂದಲದ  ಸ್ಥಿತಿ ನಿರ್ಮಾಣವಾಗಿ ತನಗೆ ಅಪಚಾರವಾಗುವಂತಹ ಸ್ಥಿತಿ ನಿರ್ಮಾಣವಾಗುತ್ತೆ. ಭಾರತದ ಸಂದರ್ಭದಲ್ಲಿ ಘನತೆಯಿಂದ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿರುವ ವಿಶ್ವವಿದ್ಯಾನಿಲಯ ಇಂತಹ ವಿಚಾರಗಳ ಕುರಿತಾಗಿ ನಿರಂತರವಾದ ಎಚ್ಚರವನ್ನು ವಹಿಸಿಬೇಕು ಎನ್ನುವುದು ನಮ್ಮ ಆಗ್ರಹ.

Related posts

“ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಸಂಪುಟ ಅನುಮೋದನೆ”

vivaanwebservices@gmail.com

‘ಸೈ ರಾ’ ಕನ್ನಡ ಟ್ರೇಲರ್ ರಿಲೀಸ್: ಸುದೀಪ್ ಧ್ವನಿ ಕೇಳಿ ಥ್ರಿಲ್ ಆದ ಅಭಿಮಾನಿಗಳು

Kannadigara Prajanudi

ದಂಡ ಮೊತ್ತ ಪರಿಸ್ಕರಿಸಿ ರಾಜ್ಯ ಸರ್ಕಾರ ಅಧಿಸೂಚನೆ

Kannadigara Prajanudi

Leave a Comment