• Home
  • Uncategorized
  • 50 ವರ್ಷ ಮೀರಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ…..
Uncategorized ಮುಖ್ಯಾಂಶಗಳು ರಾಜ್ಯ ಶಿಕ್ಷಣ

50 ವರ್ಷ ಮೀರಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ…..

ಬೆಂಗಳೂರು 5: ಶಿಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದ ಶಿಕ್ಷಕರ ಕಡ್ಡಾಯ ಟ್ರಾನ್ಸ್‍ಫರ್ ನಿಯಮಗಳಿಗೆ ಸರ್ಕಾರ ಕೊನೆಗೂ ತಿದ್ದುಪಡಿ ತರಲು ಮುಂದಾಗಿದ್ದು, 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲು ತೀರ್ಮಾನಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರಲ್ಲದೆ, ವರ್ಗಾವಣೆ ಪ್ರಕ್ರಿಯೆಯನ್ನು ಶಿಕ್ಷಕ ಸ್ನೇಹಿಯಾಗಿ ಮಾಡಲಾಗುವುದು. ಇನ್ನು ಮುಂದೆ ಕಡ್ಡಾಯ ವರ್ಗಾವಣೆ ಎನ್ನುವ ಮಾನವೀಯ ನೆಲೆಯಲ್ಲಿ ವಲಯ ವರ್ಗಾವಣೆ ಎಂದು ಮರು ನಾಮಕಾರಣ ಮಾಡಲಾಗುವುದೆಂದರು.

50 ವರ್ಷ ಮೀರಿದ ಶಿಕ್ಷಕಿಯರು ಹಾಗೂ 55 ವರ್ಷ ಮೀರಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುವುದು. ನಿವೃತ್ತಿಗೆ ಕೆಲವೇ ವರ್ಷ ಇರುವಾಗ ವರ್ಗಾವಣೆ ಮಾಡಿದರೆ ಅಲ್ಲಿ ನೆಲೆಯೂರುವುದು ಕಷ್ಟ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬುದ್ಧಿಮಾಂಧ್ಯ, ಅಂಗವಿಕಲ ಮಕ್ಕಳನ್ನು ಹೊಂದಿರುವ ಶಿಕ್ಷಕರು ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಚಿಂತನೆ ಕೂಡ ಮಾಡಲಾಗಿದೆ.

 

Related posts

ಮೋದಿಗೆ ಬಂದ ಉಡುಗೊರೆ ಖರೀದಿಸಲು ಅವಕಾಶ: ಆನ್​ಲೈನ್ ಮೂಲಕ ಪ್ರಕ್ರಿಯೆ ಆರಂಭ, 200ರಿಂದ 2.5 ಲಕ್ಷ ರೂ.ವರೆಗೆ ಬೆಲೆ ನಿಗದಿ

Kannadigara Prajanudi

ಮನೆ ಯಜಮಾನನ ಸಾವು: ನೊಂದ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

Kannadigara Prajanudi

ಡಿಜಿಟಲ್‌ ಪಾವತಿಯಲ್ಲಿ ಗಮನಾರ್ಹ ಹೆಚ್ಚಳ

Kannadigara Prajanudi

Leave a Comment