• Home
  • ಮುಖ್ಯಾಂಶಗಳು
  • ಅಯೋಧ್ಯೆ ರಾಮ ಜನ್ಮಸ್ಥಳ ನಿಜ, ಆದರೆ ಮಧ್ಯದ ಗುಂಬಜು ಇದ್ದಲ್ಲೇ ಹುಟ್ಟಿದ್ದೆಂದು ನಂಬಲಾಗದು
ಮುಖ್ಯಾಂಶಗಳು

ಅಯೋಧ್ಯೆ ರಾಮ ಜನ್ಮಸ್ಥಳ ನಿಜ, ಆದರೆ ಮಧ್ಯದ ಗುಂಬಜು ಇದ್ದಲ್ಲೇ ಹುಟ್ಟಿದ್ದೆಂದು ನಂಬಲಾಗದು

ನವದೆಹಲಿ: ಶ್ರೀ ರಾಮ ಅಯೋಧ್ಯೆಯಲ್ಲಿ ಜನಿಸಿದ್ದು ಎಂಬುದನ್ನು ಒಪ್ಪುತ್ತೇವೆ. ಆದರೆ, ಬಾಬರಿ ಮಸೀದಿಯ ಮಧ್ಯದ ಗುಂಬಜು ಇದ್ದಲ್ಲೇ ರಾಮ ಜನಿಸಿದ್ದು ಎಂದರೆ ನಂಬಲಾಗದು. ಈ ಒಂದು ಮಾತು ಹೇಳದೇ ಹೋಗಿದ್ದರೆ, ಶ್ರೀ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಸೌಹಾರ್ದವಾಗಿ ಬಗೆಹರಿದಿರುತ್ತಿತ್ತು ಎಂದು ಮುಸ್ಲಿಂ ಪ್ರತಿವಾದಿಯರು ಸುಪ್ರೀಂಕೋರ್ಟ್​ಗೆ ಹೇಳಿದ್ದಾರೆ.

ವಿವಾದದ ಕುರಿತ ಸಂವಿಧಾನಪೀಠದ ಶುಕ್ರವಾರದ ವಿಚಾರಣೆ ವೇಳೆ ಮುಸ್ಲಿಂ ಪ್ರತಿವಾದಿಯ ಪರ ವಕೀಲ ರಾಜೀವ್​ ಧವನ್​ ನಾವು ಸೇರಿ ಯಾರೊಬ್ಬರೂ ಕೂಡ ಶ್ರೀ ರಾಮ ಅಯೋಧ್ಯೆಯಲ್ಲಿ ಜನ್ಮಿಸಿದ್ದ ಎಂಬುದನ್ನು ಅಲ್ಲಗಳೆಯುತ್ತಿಲ್ಲ. ಆದರೆ, ಬಾಬರಿ ಮಸೀದಿಯ ಮಧ್ಯದ ಗುಂಬಜು ಕೆಳಗೇ ರಾಮ ಜನಿಸಿದ್ದು ಎಂಬ ವಾದವನ್ನು ಪ್ರತಿಪಾದಿಸದೆ ಕೈಬಿಟ್ಟಿದ್ದರೆ ಈ ವಿವಾದ ಇತ್ಯರ್ಥವಾಗಿ ಯಾವುದೋ ಕಾಲವಾಗಿರುತ್ತಿತ್ತು. ಇಂದಿಗೂ ಹಿಂದೂಗಳು ಶ್ರೀ ರಾಮ ಮಸೀದಿಯ ಮಧ್ಯಭಾಗದ ಗುಂಬಜಿನ ಕೆಳಗೇ ಜನಿಸಿದ್ದು ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಜಾಗವೇ ಈಗ ವಿವಾದದ ಮುಖ್ಯಭಾಗವಾಗಿದೆ ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ರಾಜೀವ್​ ಧವನ್​ ಮನವರಿಕೆ ಮಾಡಿಕೊಡಲು ಯತ್ನಿಸಿದರು.

1992ರ ಡಿಸೆಂಬರ್​ 6ರಂದು ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿಯ ಸ್ಥಳದಲ್ಲಿದ್ದ ಮಸೀದಿಯನ್ನು ಕೆಡವುವ ಮೂಲಕ ಜಾಗತಿಕವಾಗಿ ಇದ್ದ ಭಾರತ ಒಂದು ಜಾತ್ಯತೀತ ಮತ್ತು ಪರಧರ್ಮ ಸಹಿಷ್ಣು ದೇಶ ಎಂಬ ಭಾವನೆಯನ್ನು ಹುಸಿಗೊಳಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಬಹುನಾಗರಿಕತೆಯುಳ್ಳ ರಾಷ್ಟ್ರ ಎಂದು ವಿದ್ವಾಂಸರು ಹೇಳುತ್ತಿದ್ದರು. ಆದರೆ ಈಗ ಕೇವಲ ಹಿಂದೂ ನಾಗರಿಕತೆಯಷ್ಟೇ ಉಳಿದುಕೊಳ್ಳುವ ನಿಟ್ಟಿನಲ್ಲಿ ದೇಶ ಸಾಗುತ್ತಿದೆ. ಮುಸ್ಲಿಮರ ವಿರುದ್ಧ ದ್ವೇಷ ಮೂಡಿಸಲಾಗುತ್ತಿದೆಯಾದರೂ, ಅಯೋಧ್ಯೆಯಲ್ಲಿ ತುಂಬಾ ಹಿಂದಿನಿಂದಲೂ ಮುಸ್ಲಿಮರು ಮತ್ತು ಹಿಂದೂಗಳು ಸೌಹಾರ್ದಯುತವಾಗಿ ಬದುಕಿ ಬಾಳುತ್ತಿದ್ದಾರೆ ಎಂಬುದು ಸುಳ್ಳು ಎಂದು ಹೇಳಿದರು.

Related posts

ಭಾರಿ ವಿರೋಧದ ಬೆನ್ನಲ್ಲೇ ರಾಜ್ಯಕ್ಕೆ ಮಧ್ಯಂತರ ಪ್ರವಾಹ ಪರಿಹಾರ ಹಣ ಘೋಷಿಸಿದ ಕೇಂದ್ರ ಸರ್ಕಾರ

Kannadigara Prajanudi

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧ: ಯಡಿಯೂರಪ್ಪ

Kannadigara Prajanudi

ಉಪಚುನಾವಣೆಯಲ್ಲಿ ಎಲ್ಲ 15 ಅನರ್ಹ ಶಾಸಕರಿಗೆ ಟಿಕೆಟ್ ಗ್ಯಾರಂಟಿ – ಬಿ.ಎಸ್. ಯಡಿಯೂರಪ್ಪ

Kannadigara Prajanudi

Leave a Comment