• Home
  • ಮುಖ್ಯಾಂಶಗಳು
  • ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ವಿಮಾನದಲ್ಲಿ ಸಿಕ್ತು ಆತ್ಮೀಯ ಸ್ವಾಗತ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ವಿಮಾನದಲ್ಲಿ ಸಿಕ್ತು ಆತ್ಮೀಯ ಸ್ವಾಗತ

ನವದೆಹಲಿ: ಮೊದಲಿನಿಂದಲೂ ತಮ್ಮ ಸರಳ ವ್ಯಕ್ತಿತ್ವದಿಂದ ಖ್ಯಾತಿ ಪಡೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮುಖ್ಯಸ್ಥ ಕೆ.ಶಿವನ್​ ಅವರು ಈ ಬಾರಿಯ ಚಂದ್ರಯಾನ-2 ಉಡಾವಣೆಯ ಬಳಿಕವಂತೂ ದೇಶದ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಶಿವನ್​ ಹಾಗೂ ಅವರ ತಂಡ ಪ್ರತಿಮನೆಯಲ್ಲೂ ಸುದ್ದಿ ಮಾಡಿದೆ. ಸದ್ಯಕ್ಕಂತೂ ಕೆ.ಶಿವನ್​ ಯಾವುದೇ ಸಿಲೆಬ್ರಿಟಿಗಳಿಂತ ಕಡಿಮೆಯಿಲ್ಲ.

ಕೆ.ಶಿವನ್​ ಅವರು ಜನರ ಹೃದಯವನ್ನು ಎಷ್ಟರ ಮಟ್ಟಿಗೆ ಗೆದ್ದಿದ್ದಾರೆ ಎಂಬುದಕ್ಕೆ ಸದ್ಯ ಒಂದು ವಿಡಿಯೋ ಸಾಕ್ಷಿಯಾಗಿದೆ. ಇದು ವಿಮಾನದಲ್ಲಿ ಚಿತ್ರೀಕರಿಸಲಾದ ವಿಡಿಯೋ. ಲೇಖಕರಾದ ಶೆಫಾಲಿ ವೈದ್ಯ ಎಂಬುವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಕೆ.ಶಿವನ್​ ಅವರ ವಿಡಿಯೋವೊಂದನ್ನು ಶೇರ್​ ಮಾಡಿದ್ದು ಕ್ಯಾಪ್ಷನ್​ ಕೊಟ್ಟಿದ್ದಾರೆ. ವಿಮಾನದಲ್ಲಿ ಕೆ.ಶಿವನ್​ ಅವರನ್ನು ಒಬ್ಬ ಪ್ರಭಾವಿ ನಾಯಕನನ್ನು ಸ್ವಾಗತಿಸುವ ರೀತಿಯಲ್ಲಿ ಸ್ವಾಗತಿಸುವುದನ್ನು ನೋಡಿ ಹೃದಯ ತುಂಬಿಬಂತು ಎಂದು ಬರೆದುಕೊಂಡಿದ್ದಾರೆ.

90 ಸೆಕೆಂಡ್​ಗಳ ವಿಡಿಯೋ ಇದಾಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆಯೆಂದರೆ, ಕೆ.ಶಿವನ್​ ಅವರು ಇಂಡಿಗೋ ವಿಮಾನದಲ್ಲಿ ಇದ್ದರು. ಅವರನ್ನು ನೋಡಿದ ಕೂಡಲೇ ವಿಮಾನ ಸಿಬ್ಬಂದಿಗೆ ಕೆ.ಶಿವನ್​ ಅವರೇ ಎಂದು ಕೂಡಲೇ ಗುರುತು ಸಿಕ್ಕಿದೆ. ಅಷ್ಟಕ್ಕೆ ಸುಮ್ಮನಾಗದ ಅವರು ಸೆಲ್ಫಿ ಕೇಳಿದ್ದಾರೆ. ಶಿವನ್​ ಕೂಡ ಅದಕ್ಕೆ ಒಪ್ಪಿ ಸೆಲ್ಫಿಗೆ ಪೋಸ್​ ಕೊಟ್ಟಿದ್ದಾರೆ. ಉಳಿದ ಪ್ರಯಾಣಿಕರೂ ಸಹ ಕೆ.ಶಿವನ್​ ಜತೆ ಆತ್ಮೀಯತೆಯಿಂದ ಮಾತನಾಡಿ, ಅವರೂ ಸೆಲ್ಫಿ ತೆಗೆದುಕೊಂಡಿದ್ದಾರೆ. ಅವರು ಹೋಗಿ ತಮ್ಮ ಸೀಟ್​ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ವಿಮಾನದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ.

ಈ ವೇಳೆ ಶಿವನ್ ಮುಗ್ಧವಾಗಿ ನಗುತ್ತ, ಎಲ್ಲರೆಡೆಗೆ ಕೈ ಬೀಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋಕ್ಕೆ ಅನೇಕ ಮೆಚ್ಚುಗೆಯ ಕಾಮೆಂಟ್​ಗಳು ಬಂದಿದ್ದಲ್ಲದೆ, ಸಿಕ್ಕಾಪಟೆ ವೈರಲ್​ ಆಗಿದೆ.
ಎಷ್ಟು ಸರಳ ವ್ಯಕ್ತಿತ್ವ ಎಂದು ಕೆ.ಶಿವನ್​ ಅವರನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಹಾಗೇ ಇನ್ನೊಬ್ಬರು, ನಾವು ಈಗ ನಮ್ಮ ನಿಜವಾದ ನಾಯಕರನ್ನು ಗುರುತಿಸಲು ಪ್ರಾರಂಭಿಸಿದ್ದೇವೆ ಎಂದು ಬರೆದಿದ್ದಾರೆ.

ಚಂದ್ರಯಾನ-2 ಕೊನೇ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಾಗ ಕೆ.ಶಿವನ್​ ಭಾವುಕರಾಗಿದ್ದರು. ಅಂದು ಪ್ರಧಾನಿ ನರೇಂದ್ರ ಮೋದಿಯವರು ಶಿವನ್​ ಅವರನ್ನು ತಬ್ಬಿಕೊಂಡು ಸಾಂತ್ವನ ಮಾಡಿದ್ದ ವಿಡಿಯೋ ಭಾರಿ ವೈರಲ್​ ಆಗಿತ್ತು.

Related posts

ಯೂಟ್ಯೂಬ್​ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಪ್ರಭಾವಿತನಾಗಿ ಬ್ಯಾಂಕ್​ ದರೋಡೆಗೆ ಯತ್ನಿಸಿ ಜೈಲು ಸೇರಿದವನ ಕತೆಯಿದು!

Kannadigara Prajanudi

ಕಾವೇರಿ ಕೂಗು’; ಸದ್ಗುರು ನೇತೃತ್ವದ ಇಶಾ ಫೌಂಡೇಷನ್ ಗೆ ಹೈಕೋರ್ಟ್ ನೋಟಿಸ್

vivaanwebservices@gmail.com

ಡಿಜಿಟಲ್‌ ಪಾವತಿಯಲ್ಲಿ ಗಮನಾರ್ಹ ಹೆಚ್ಚಳ

Kannadigara Prajanudi

Leave a Comment