• Home
  • ಧರ್ಮ
  • ಶರಣ ಸಂಸ್ಕೃತಿ ಉತ್ಸವ :12ನೇ ಶತಮಾನ ಇಡೀ ಮಾನವ ಕುಲಕ್ಕೆ ಮರ್ಯಾದೆ ತುಂಬಿದ ಶತಮಾನ – ಡಾ.ಶಿವಮೂರ್ತಿ ಮುರುಘಾಶರಣರು
ಧರ್ಮ ನಮ್ಮ ವಿಶೇಷ

ಶರಣ ಸಂಸ್ಕೃತಿ ಉತ್ಸವ :12ನೇ ಶತಮಾನ ಇಡೀ ಮಾನವ ಕುಲಕ್ಕೆ ಮರ್ಯಾದೆ ತುಂಬಿದ ಶತಮಾನ – ಡಾ.ಶಿವಮೂರ್ತಿ ಮುರುಘಾಶರಣರು

ಚಿತ್ರದುರ್ಗ: ಕರ್ನಾಟಕ ಇತಿಹಾಸದಲ್ಲಿ 12ನೇ ಶತಮಾನ ಇಡೀ ಮಾನವ ಕುಲಕ್ಕೆ ಮರ್ಯಾದೆ ತುಂಬಿದ ಶತಮಾನ ಎಂದು ಡಾ.ಶಿವಮೂರ್ತಿ ಮುರುಘಾಶರಣರು ನುಡಿದರು.

ಅವರು ಶ್ರೀಮಠದ ಅನುಭವ ಮಂಟಪದಲ್ಲಿ ಸಾಹಸಿಗರ ಸಮವೇಶ ಮುರುಘಾಶ್ರೀ ಮತ್ತು ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದರು.

ನಮ್ಮಂತವರಿಗೆ ಸವಾಲಿನ ವಿಷಯವೆಂದರೆ ಪರಂಪರೆಯ ಜೊತೆಯಲ್ಲಿ ಸಾಗುವುದು.  ಮುರುಘಾ ಪರಂಪರೆ ಎಂದರೆ ಶರಣ ಪರಂಪರೆ.  ಮುರುಘಾ ಪರಂಪರೆಯು ಆದರ್ಶದ, ಪರಿವರ್ತನೆ ಇದೆ.  ತೋಂಟದ ಸಿದ್ದಲಿಂಗ ಶ್ರೀಗಳು ಬರುವವರೆಗೆ ಶೂನ್ಯ ಆವರಿಸಿರುತ್ತದೆ. ಇವರು ಬಂದ ಮೇಲೆ ಬಸವತತ್ತ್ವವನ್ನು ಹೆಚ್ಚಾಗಿ ಪ್ರಚಾರ ಮಾಡಿದರು.  ಇವರ ನಂತರ ಮುರುಗೇ ಶಾಂತವೀರ ಶ್ರೀಗಳು ತತ್ತ್ವ ಸಿದ್ದಾಂತವನ್ನು ಪ್ರಚಾರ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ಗದಗ-ಡಂಬಳ ಶ್ರೀ ತೋಂಟದಾರ್ಯ ಮಠದ ಶ್ರೀ.ಜಗದ್ಗುರು ಡಾ.ತೋಂಟದ ಸಿದ್ಧರಾಮಮಹಾಸ್ವಾಮಿಗಳು ದಿವ್ಯ ಸಮ್ಮುಖವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಧಾರವಾಡÀದ ಶ್ರೀ ಮುರುಘಾಮಠದ ಶ್ರೀ ನಿ.ಪ್ರ.ಸ್ವ. ಮಲ್ಲಿಕಾರ್ಜುನ ಸ್ವಾಮಿಗಳು, ಬೆಂಗಳೂರಿನ ಕವಿಗಳು ಮತ್ತು ಚಿಂತಕರಾದ ಡಾ. ಸಿದ್ದಲಿಂಗಯ್ಯ, ಲಂಡನ್ ಬಸವ ಇಂಟರ್ ನ್ಯಾಷನಲ್ ಫೌಂಡೇಶನ್‍ನ ಶ್ರೀ ಎಸ್ ಮಹಾದೇವಯ್ಯ, ಚಿತ್ರದುರ್ಗದ ವಾಣಿಜ್ಯೋದ್ಯಮಿಗಳಾದ ಶ್ರೀ ಜೆ.ಎಂ. ಜಯಕುಮಾರ್ ಹಾಗೂ ಚಿತ್ರದುರ್ಗದ ಸಾಮಾಜಿಕ ಹೋರಾಟಗಾರರಾದ ಶ್ರೀ ಮುರುಘರಾಜೇಂದ್ರ ಒಡೆಯರ್‍ರವರಿಗೆ ಮುರುಘಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುರುಘಾಶ್ರೀ ಪ್ರಶಸ್ತಿಯು 25000 ಸಾವಿರ ನಗದು ಹಾಗು ಪ್ರಶಸ್ತಿಯ ಫಲಕಗಳನ್ನು ಒಳಗೊಂಡಿತ್ತು. ಮಂಡ್ಯದ ಡ್ರೋನ್ ಖ್ಯಾತಿಯ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್‍ರವರಿಗೆ ಭರಮಣ್ಣನಾಯಕ ಶೌರ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಭರಮಣ್ಣನಾಯಕ ಶೌರ್ಯ ಪ್ರಶಸ್ತಿಯು 25000 ಸಾವಿರ ನಗದು ಹಾಗು ಪ್ರಶಸ್ತಿಯ ಫಲಕಗಳನ್ನು ಒಳಗೊಂಡಿತ್ತು.

Related posts

ಶರಣ ಸಂಸ್ಕೃತಿ ಉತ್ಸವ : ಜಮುರಾ ಕಪ್ ಉದ್ಘಾಟನಾ ಸಮಾರಂಭ

Kannadigara Prajanudi

ನಿಮಿಗಿಷ್ಟವಾದ ಹಣ್ಣುಗಳನ್ನು ಕೊಳ್ಳಲು ಮಾರ್ಕೆಟಿಗೆ ಹೋಗ್ಬೇಡಿ! ಹಾಗಾದರೆ…

Kannadigara Prajanudi

ಸಾಣೇಹಳ್ಳಿಯಲ್ಲಿ ಮತ್ತೆ ಕಲ್ಯಾಣ ರಾಜ್ಯಮಟ್ಟದ ಜಿಲ್ಲಾ ಸಂಘಟಕರ ಸಮಾಲೋಚನಾ ಸಭೆ

Kannadigara Prajanudi

Leave a Comment