ಸಾಹಿತ್ಯ/ಸಂಸ್ಕೃತಿ ಸ್ಥಳೀಯ

ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ – ನಿರ್ದೇಶಕ ಬಿ.ಸುರೇಶ್ ವಿಷಾಧ

ಶಿವಮೊಗ್ಗ: ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ವಿಷಾಧಿಸಿದರು.

ಅವರು ಇಂದು ಮಹಾನಗರಪಾಲಿಕೆ, ಬೆಳ್ಳಿ ಮಂಡಲ, ಸಿಹಿಮೊಗೆ ಶಿವಮೊಗ್ಗ, ಚಿತ್ರಸಮಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ದಸರಾ ಚಲನಚಿತ್ರ್ಯೋತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶೇಷ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಒಂದು ಸಿನೆಮಾದ ಯಶಸ್ಸಿಗೆ ದೃಶ್ಯ ಮಾಧ್ಯಮ ಭಾಷೆ ಕೂಡ ಬಹಳ ಮುಖ್ಯ. ಆದರೆ ದೃಶ್ಯ ಭಾಷೆಯನ್ನು ಕಲಿಸುವ ಶಾಲೆಗಳೇ ಇಂದು ವಿರಳವಾಗಿವೆ. ಇಡೀ ಭಾರತದಲ್ಲಿ ಕೇವಲ 6 ಶಿಕ್ಷಣ ಸಂಸ್ಥೆಗಳು ಇವೆ. ಆದರೆ ವಿದೇಶದಲ್ಲಿ ಇದಕ್ಕೆ ಹೆಚ್ಚು ಮನ್ನಣೆ ಕೊಡುತ್ತಾರೆ. ಭಾರತದ ಸಿನೆಮಾ ರಂಗದಲ್ಲಿ ದೃಶ್ಯಭಾಷೆಯ ಕೊರತೆ ಎದ್ದು ಕಾಣುತ್ತಿದ್ದು, ಕಲಿಸುವ ಶಿಕ್ಷಕರ ಕೊರತೆಯೂ ಇದೆ. ಭಾರತೀಯ ಸಿನೆಮಾ ರಂಗ ಮತ್ತು ಸರ್ಕಾರ ಈ ಬಗ್ಗೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಈ ವಿಭಾಗದಲ್ಲಿ ಹೆಚ್ಚಿನ ಅವಕಾಶಗಳಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು. ಸಿನೆಮಾ ಕ್ಷೇತ್ರವೇ ಒಂದು ವಿಶಿಷ್ಟ ಕ್ಷೇತ್ರವಾಗಿದೆ. ಸಾಹಿತ್ಯ, ಸಂಗೀತ, ಹಾಡು, ಛಾಯಾಗ್ರಹಣ ಇವೆಲ್ಲವೂ ಹೇರಳವಾಗಿ ನಮ್ಮಲ್ಲಿ ಕಲಿಸಲಾಗುತ್ತಿದೆ. ಹಾಗಾಗಿ ದೃಶ್ಯಭಾಷೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಯುವಕರು ಬಹಳ ಅದ್ಬುತವಾಗಿ ದೃಶ್ಯವನ್ನು ಒಳಗೊಂಡಂತೆ ಟಿಕ್‍ಟಾಕ್ ಮೂಲಕ ತಮ್ಮ ಬುದ್ದಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಆದರೆ ಇದು ಒಂದು ವ್ಯವಸ್ಥಿತ ದಾರಿಯತ್ತ ಸಾಗಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸದ್ಯದಲ್ಲೇ ಘೋಷಣೆಯಾಗಲಿರುವ ಅಂಬೆಗಾಲು ಕಿರುಚಿತ್ರ ಸ್ಪರ್ಧೇಯ ಪೂರ್ವಭಾವಿಯಾಗಿ ಚರ್ಚಿಸಲಾಯಿತು. ಕಿರುಚಿತ್ರ ತಯಾರಕರು, ಚಲನಚಿತ್ರಗಳಲ್ಲಿ ಆಸಕ್ತಿ ಇರುವವರು ಇದರಲ್ಲಿ ಭಾಗವಹಿಸಿದ್ದು ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಆ.ಚಿ.ಪ್ರಕಾಶ್, ವೈದ್ಯ, ವಿಜಯಕುಮಾರ್, ದಸರಾ ಸಮಿತಿ ಅಧ್ಯಕ್ಷೆ ಆರ್.ಸಿ.ನಾಯ್ಕ ಇದ್ದರು.

 

 

 

 

Related posts

ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

Kannadigara Prajanudi

ಕೋಹಳ್ಳಿ ಗ್ರಾಮ ಪಂಚಾಯತಿಗೆ ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಭೇಟಿ

Kannadigara Prajanudi

ದುರ್ಗಿಗುಡಿ ಹಳೆಯ ವಿದ್ಯಾರ್ಥಿಗಳಿಂದ ಶಾಲಾ ಅವರಣದಲ್ಲಿ ಸರಸ್ವತಿ ವಿಗ್ರಹ ಅನಾವರಣ

Kannadigara Prajanudi

Leave a Comment