• Home
  • ಮುಖ್ಯಾಂಶಗಳು
  • ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್​ ಮಾಡಿದ್ದ ಚಂದನ್ ಶೆಟ್ಟಿ; ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ದಾಖಲು
ಮುಖ್ಯಾಂಶಗಳು

ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್​ ಮಾಡಿದ್ದ ಚಂದನ್ ಶೆಟ್ಟಿ; ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ದಾಖಲು

ಮೈಸೂರು : ಯುವ ದಸರಾ ಕಾರ್ಯಕ್ರಮದ ಸಾರ್ವಜನಿಕ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿದ ರಾಪರ್​ ಚಂದನ್​ಶೆಟ್ಟಿ ಹಾಗೂ ನಿವೇದಿತಾ ಗೌಡ ವಿರುದ್ಧ ಮೂರು ದೂರುಗಳು ದಾಖಲಾಗಿವೆ.

ನಗರದ ಲಕ್ಷ್ಮೀಪುರಂ ಠಾಣೆಯಲ್ಲಿ ಇಬ್ಬರ ವಿರುದ್ಧ ಮೈಸೂರು ಯುವ ಕಾಂಗ್ರೆಸ್​, ಕರ್ನಾಟಕ ಪ್ರಜಾಪಾರ್ಟಿ ಹಾಗೂ ಸಾಮಾಜಿಕ ಹೋರಾಟಗಾರ ಗಂಗರಾಜು ಎಂಬುವವರು ಕೇಸು ದಾಖಲಿಸಿದ್ದಾರೆ.
ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ನಿವೇದಿತಾರಿಂದ

ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲಾಗಿವೆ.ಇಬ್ಬರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದು ಇನ್ನಷ್ಟು ದೂರುಗಳು ದಾಖಲಾಗುವ ಸಂಭವ ಇದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಗಾಯಕ ಚಂದನ್​ ಶೆಟ್ಟಿ ಅವರು ನಿವೇದಿತಾ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿಕೊಂಡು ಉಂಗುರ ತೊಡಿಸಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Related posts

ತಂಬಾಕು ಸೇವನೆ ಬಿಟ್ಟುಬಿಡಿ; ಮನ್ ಕಿ ಬಾತ್’ ನಲ್ಲಿ ಮೋದಿ ಸಲಹೆ

Kannadigara Prajanudi

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ

Kannadigara Prajanudi

ಓಪನ್ ಬಸ್ನಲ್ಲಿ ‘ಮೈಸೂರು’ ದಸರಾ ನೋಡಿ

Kannadigara Prajanudi

Leave a Comment