BREAKING : ಗುಂಡು ಹಾರಿಸಿ ಸ್ಯಾಂಡಲ್'ವುಡ್ ನಿರ್ದೇಶಕನ ಕೊಲೆಗೆ ಯತ್ನ, ನಟ ತಾಂಡವ ರಾಮ್ ಅರೆಸ್ಟ್.!
- Apr 8
- 1 min read
ಬೆಂಗಳೂರು : 'ಸ್ಯಾಂಡಲ್ ವುಡ್ ನಿರ್ದೇಶಕ, 'ಮುಗಿಲ್ ಪೇಟೆ' ಸಿನಿಮಾ ನಿರ್ದೇಶಕನ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ನಟ ತಾಂಡವ ರಾಮ್ ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಚಂದ್ರಾ ಲೇಔಟ್ನಲ್ಲಿ ನಡೆದಿದೆ.

ನಟ ತಾಂಡವ ರಾಮ್ ಎಂಬುವವರು ‘ಮುಗಿಲ್ ಪೇಟೆ' ಸಿನಿಮಾ ನಿರ್ದೇಶಕ ಭರತ್ ಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲೈಸನ್ಸ್ ಗನ್ ತೋರಿಸಿ ಬೆದರಿಕೆ ಹಾಕಿ ಗುಂಡು ಕೂಡ ಹಾರಿಸಿದ ಘಟನೆ ನಡೆದಿದೆ.
ನಿರ್ದೇಶಕ ಭರತ್ ಅವರು ತಾಂಡವ ರಾಮ್ ಅವರನ್ನು ಹೀರೋ ಆಗಿ ಹಾಕಿಕೊಂಡು ಹೊಸ ಸಿನಿಮಾ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಿದ್ದರಂತೆ. ಈ ಕಾರಣಕ್ಕೆ ಗಲಾಟೆ ಮಾಡಿ ಕೊಲೆ ಯತ್ನವೂ ನಡೆದಿದೆ ಎಂದು ಆರೋಪಿಸಲಾಗಿದೆ.
ಜೋಡಿ ಹಕ್ಕಿ. ಭೂಮಿಗೆ ಬಂದ ಭಗವಂತ ಸೇರಿ ಹಲವು ಧಾರಾವಾಹಿಯಲ್ಲಿ ನಟಿಸಿದ್ದ ತಾಂಡವ ರಾಮ್ ಭರತ್ ಕೊಲೆಗೆ ಯತ್ನ ನಡೆಸಿದ್ದು, ತಾಂಡವ ರಾಮ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿರ್ದೇಶಕ ಭರತ್ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

Comments