top of page

Champions Trophy 2025: ಫೋನ್, ಪಾಸ್‌ಪೋರ್ಟ್ ಅಷ್ಟೇ ಅಲ್ಲ ಈ ಬಾರಿ ಟ್ರೋಫಿಯನ್ನೇ ಮರೆತು ಬಂದ ರೋಹಿತ್ ಶರ್ಮಾ!

  • Apr 8
  • 1 min read

ಮರೆವಿನ ಸ್ವಭಾವದವರಾಗಿರುವ ರೋಹಿತ್ ಕೆಲವೊಮ್ಮೆ ತನ್ನ ಪಾಸ್‌ಪೋರ್ಟ್ ಮತ್ತು ಫೋನ್‌ ಅನ್ನು ತಂಡದ ಬಸ್ ಮತ್ತು ಹೋಟೆಲ್‌ಗಳಲ್ಲಿಯೇ ಬಿಟ್ಟು ಹೊರಡುತ್ತಾರೆ. ಆದರೆ, ತಂಡ ಗೆದ್ದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಮರೆಯುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ.

ree

ರೋಹಿತ್ ಶರ್ಮಾ ತಮ್ಮ ಪಾಸ್‌ಪೋರ್ಟ್, ಫೋನ್‌ ಮತ್ತು ಇತರ ವಸ್ತುಗಳನ್ನು ಆಗ್ಗಾಗ್ಗೆ ಮರೆತು ಬರುತ್ತಿರುತ್ತಾರೆ. ಆದರೆ, ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮ ಕೋಣೆಯಲ್ಲಿಯೇ ಟ್ರೋಫಿಯನ್ನು ಮರೆತಿದ್ದು ವರದಿಯಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ರೋಹಿತ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಅವರ ನಿವೃತ್ತಿ ಸೇರಿದಂತೆ ಕೆಲವು ಕುತೂಹಲಕಾರಿ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಆದರೆ, ಪತ್ರಿಕಾಗೋಷ್ಠಿ ಮುಗಿದ ನಂತರ, ರೋಹಿತ್ ತಮ್ಮೊಂದಿಗೆ ಟ್ರೋಫಿಯನ್ನು ತರಲು ಮರೆತರು. ಸಹಾಯಕ ಸಿಬ್ಬಂದಿಯ ಸದಸ್ಯರೊಬ್ಬರು ಟ್ರೋಫಿಯನ್ನು ಎತ್ತಿಕೊಂಡರು ಮತ್ತು ತಾವು ಬಿಟ್ಟುಹೋಗುತ್ತಿರುವ ಕುರಿತು ರೋಹಿತ್‌ಗೆ ನೆನಪಿಸಿದ್ದಾರೆ.

ಮರೆವಿನ ಸ್ವಭಾವದವರಾಗಿರುವ ರೋಹಿತ್ ಕೆಲವೊಮ್ಮೆ ತನ್ನ ಪಾಸ್‌ಪೋರ್ಟ್ ಮತ್ತು ಫೋನ್‌ ಅನ್ನು ತಂಡದ ಬಸ್ ಮತ್ತು ಹೋಟೆಲ್‌ಗಳಲ್ಲಿಯೇ ಬಿಟ್ಟು ಹೊರಡುತ್ತಾರೆ. ಆದರೆ, ತಂಡ ಗೆದ್ದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಮರೆಯುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ.

ಭಾರತದ ಮುಂದಿನ ಪ್ರಮುಖ ಏಕದಿನ ಪಂದ್ಯಾವಳಿ 2027ರ ಏಕದಿನ ವಿಶ್ವಕಪ್ ಆಗಿರುವುದರಿಂದ, ರೋಹಿತ್ ನಿವೃತ್ತಿ ಘೋಷಿಸಬಹುದು ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ದಯವಿಟ್ಟು ಈ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ. ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಇಲ್ಲ, ಏನು ನಡೆಯುತ್ತಿದೆಯೋ ಅದು ಹಾಗೆಯೇ ಮುಂದುವರಿಯುತ್ತದೆ' ಎಂದು ರೋಹಿತ್ ಹೇಳಿದ್ದಾರೆ.

ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡುವ ನಿರ್ಧಾರವನ್ನು ನಿರ್ದಿಷ್ಟ ಗುರಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಯಿತು ಎಂದು ರೋಹಿತ್ ಹೇಳಿದರು.

ಮೊದಲ 10 ಓವರ್‌ಗಳಲ್ಲಿ 49 ರನ್ ಗಳಿಸಿ ಅಂತಿಮವಾಗಿ 83 ಎಸೆತಗಳಲ್ಲಿ 76 ರನ್ ಗಳಿಸಿ ರೋಹಿತ್ ಔಟಾದರು. ಈ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು.

ನಾನು ವಿಭಿನ್ನವಾಗಿ ಏನನ್ನೂ ಮಾಡಿಲ್ಲ. ಕಳೆದ 3-4 ಪಂದ್ಯಗಳಲ್ಲಿ ಮಾಡಿದಂತೆಯೇ ಮಾಡಿದ್ದೇನೆ. ಪವರ್ ಪ್ಲೇನಲ್ಲಿ ರನ್ ಗಳಿಸುವುದು ಎಷ್ಟು ಮುಖ್ಯ ಎಂದು ನನಗೆ ತಿಳಿದಿದೆ. ಏಕೆಂದರೆ, 10 ಓವರ್‌ಗಳ ನಂತರ, ಸ್ಪಿನ್ನರ್‌ಗಳು ಬಂದಾಗ ತುಂಬಾ ಕಷ್ಟವಾಗುತ್ತದೆ. ದುಬೈ ಪಿಚ್‌ನ ಸ್ವರೂಪವೂ ತಾನು ಬ್ಯಾಟಿಂಗ್‌ಗೆ ಅಗತ್ಯವಾದ ವಿಧಾನವನ್ನು ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page