ಚಂದ್ರವನದಲ್ಲಿ 150ನೇ ಬೆಳದಿಂಗಳ ದೀಪಾರತಿ ಕಾರ್ಯಕ್ರಮ...
- Prajanudi Digital
- May 14
- 1 min read

ಶ್ರೀರಂಗಪಟ್ಟಣ:ಚಂದ್ರವನ ಆಶ್ರಮದಲ್ಲಿ 150ನೇ ಬೆಳದಿಂಗಳ ದೀಪಾರತಿ ಮತ್ತು ಬಸವ ಜಯಂತಿ ಧಾರ್ಮಿಕ ಕಾರ್ಯಕ್ರಮ ಆಶ್ರಮದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಜರುಗಿತು.
ಭಕ್ತರನ್ನುದ್ದೇಶಿಸಿ ಮಾತನಾಡಿದ ತ್ರಿನೇತ್ರ ಶ್ರೀಗಳು,ಬಸವಣ್ಣ ಎಂದರೆ ಒಂದು ಪಂಥಕ್ಕೆ ಸೀಮಿತವಲ್ಲ ಒಂದೇ ಪಂಥದಲ್ಲಿ ಬಸವಣ್ಣ ಇದ್ದಿದ್ದರೆ ಕ್ರಾಂತಿ ಸೃಷ್ಟಿಯಾಗುತ್ತಿರ ಲಿಲ್ಲ.ಹಾಗಾಗಿ ಬಸವಣ್ಣ ವಿಶ್ವಮಾನವ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.ನಾವು ಆಡುವ ಮಾತುಗಳು ಸಂಬಂಧಗಳನ್ನು ಉಳಿಸಿ ಕೊಳ್ಳಬೇಕು,ನಮ್ಮ ಮಾತು ಮತ್ತೊಬ್ಬರ ಮನಸಿಗೆ ನೋವನ್ನುಂಟು ಮಾಡಬಾರದು. ನಮ್ಮ ಮಾತಿನಲ್ಲಿ ಪರಿಶುದ್ಧತೆ ಇರಬೇಕು.ನಮ್ಮ ಮಾತು ಬಾಂಧವ್ಯ ಬೆಸುಗೆಯಾಗಿರಬೇಕು ಎಂದು ವಿಶ್ವಗುರು ಬಸವಣ್ಣನವರು ಸಂದೇಶವನ್ನು ನೀಡಿದ್ದರು.
ಆದರೆ ಇಂದಿನ ದಿನಮಾನಗಳಲ್ಲಿ ಇದೆಲ್ಲವನ್ನು ಎಷ್ಟು ಜನ ಪಾಲಿಸುತ್ತಿದ್ದಾರೆ ಎಂದು ನಾವು ಯೋಚಿಸಬೇಕಾಗಿದೆ. ಹನ್ನೇರಡನೇ ಶತಮಾನದಲ್ಲಿ ಎಲ್ಲಾ ಜಾತಿ ಹಾಗೂ ಎಲ್ಲಾ ವರ್ಗಗಳಿಗೂ ಸಮಾನತೆಯ ಪ್ರತೀಕವಾಗಿ ಅನುಭವ ಮಂಟಪವನ್ನು ನಿರ್ಮಿಸಿದ ಹೆಗ್ಗಳಿಕೆ ಎಂದರೆ ನಾವೆಲ್ಲರೂ ಎದೆತಟ್ಟಿ ಹೇಳಬೇಕು ಅದು ವಿಶ್ವಗುರು ಬಸವಣ್ಣ ಮಾತ್ರ ಎಂದು.
ಬಸವ ಜಯಂತಿಯಂದು ಬಸವಣ್ಣ ನವರ ಭಾವಚಿತ್ರಕ್ಕೆ ಪೂಜಿಸಿದರೆ
ಫಲವಿಲ್ಲ ಬಸವಣ್ಣನವರ ಆದರ್ಶದೊಂದಿಗೆ ಬದುಕನ್ನು ಕಟ್ಟಿಕೊಂಡರೆ ಮಾತ್ರ ಜೀವನದಲ್ಲಿ ಸಾರ್ತಕತೆಯನ್ನು ಕಾಣಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿಯನ್ ಎನ್.ಎಸ್. ಮಹದೇವ ಪ್ರಸಾದ್ ರವರು ಮಾತನಾಡಿ 150ನೇ ಬೆಳದಿಂಗಳ ದೀಪಾರತಿ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲಾ ರೋಟರಿಯವರು ಭಾಗ ವಹಿಸಿರುವುದು ನಮ್ಮ ಅದೃಷ್ಟ ಹಾಗೂ ಕ್ಷೇತ್ರ ಪಾಲಕ ಶ್ರೀ ಕಾಶೀ ಚಂದ್ರಮೌಳೇಶ್ವರ ಸ್ವಾಮಿ ಆಶೀರ್ವಾದ ಎಂದರು.
ತಿನೇತ್ರ ಶ್ರೀಗಳು ಈ ಕಾರ್ಯಕ್ರಮ ದಲ್ಲಿ ಜಾತಿ, ಮತ, ಮಂಥ ಯಾವುದೇ ಭೇದವಿಲ್ಲದೇ ಎಲ್ಲರಿಗೂ ಒಳಿತಾಗಲಿ ಎಂದು ವಿಶೇಷವಾಗಿ ಸೈನಿಕರಿಗೆ ದೇಶ ಸೇವೆಗಾಗಿ ಇನ್ನಷ್ಟು ಆ ಭಗವಂತ ಶಕ್ತಿಯನ್ನು ಕರುಣಿಸಲಿ ಎಂದು ಸಂಕಲ್ಪ ಮಾಡುತ್ತಿರುವುದು ನಮಗೆ ಬಹಳ ಸಂತೋಷವಾಗುತ್ತಿದೆ ಎಂದರು.
ನಂತರ ರೊಟರಿಯನ್ ಡಾ. ಎಲಿಜಬೆತ್ ಚೆರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮೈಸೂರು ಜಿಲ್ಲಾ ಹಾಲು ಇತ್ಪಾದಕರ ಸಂಘದ ಅಧ್ಯಕ್ಷರಾದ ಆರ್.ಚಲುವರಾಜು. ಪ್ರೇಮಕುಮಾರಿ ಜಿ., ಉಮೇಶ್ ಎಂ.ಎಸ್.,ಬೆಂಗಳೂರಿನ ಕೈಗಾರಿಕಾ ಉದ್ಯಮಿಗಳಾದ ಕಲಾಶ್ರೀ, ಎಸ್.ಆರ್. ರೇಣುಕಾ ಸ್ವಾಮಿ, ಚಂದ್ರವನ ಆಶ್ರಮದ ಆಡಳಿತ ಅಧಿಕಾರಿಗಳಾದ ಚಿಕ್ಕತಿಮ್ಮಯ್ಯ, ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್, ವಿದ್ವಾನ್ ಕೆ.ಗಂಗಣ್ಣ ಹಾಗೂ ಮುರಗೋಡಿನ ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿ ಮಠದ ಟ್ರಸ್ಟಿಗಳಾದ ವೀರ‘ದ್ರಪ್ಪ ಬಿ.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments