ರಾಜ್ಯದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನ ವಾಪಸ್ ಕಳುಹಿಸುವ ವಿಚಾರ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ. ಕೇಂದ್ರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನ ನಾವು ಪಾಲಿಸುತ್ತೇವೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತು ಯುದ್ಧದ ಪರ ಇಲ್ಲ. ಯುದ್ಧದ ಬದಲು ಭದ್ರತೆಯನ್ನ ಬಿಗಿ ಮಾಡಿಕೊಳ್ಳಬೇಕಿದೆ. ನಾವು ಯಾವತ್ತು ಶಾಂತಿಯ ಪರ. ಯುದ್ಧದ ಬಗ್ಗೆ ಯೋಚನೆ ಬೇಡ. ಭದ್ರತೆಯನ್ನ ಬಿಗಿ ಮಾಡಿ.ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರಿ ಭಾಷಣನಾ. ಈಗ ಏನೇ ಕ್ರಮಕೈಗೊಂಡರು ಹೋದ 26 ಜೀವ ವಾಪಸ್ ತರಲು ಸಾಧ್ಯನಾ. ಪುಲ್ವಾಮ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು, ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯ ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದೆ, ನನ್ನ ಮಾತು ನಿಜವಾಗಿದೆ.ಸರ್ವ ಪಕ್ಷ ಸಭೆಗೆ ಪ್ರಧಾನಿ ಹೋಗದ ವಿಚಾರ. ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ. ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ, ಸಭೆ ಮುಖ್ಯಾನಾ. ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದ್ಯಾ?ಚಾಮರಾಜನಗರಕ್ಕೆ ಹೋದ ವಿಚಾರ. ನಾನು ಮೊದಲ ಬಾರಿ ಚಾಮರಾಜನಗರಕ್ಕೆ ಹೋದಾಗಲೇ ಚಾಮರಾಜನಗರ ಮೇಲಿನ ಮೌಡ್ಯ ಕಳೆಚಿ ಬಿತ್ತು. ಇದುವರೆಗೆ ನಾನು 20 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಈಗ ಚಾಮರಾಜನಗರ ವಿಚಾರದಲ್ಲಿ ಯಾವ ಮೌಡ್ಯವೂ ಇಲ್ಲ.ಮೈಸೂರು: ಪೆಹಲ್ಗಾಂ ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಇಲ್ಲದ ವಿಚಾರ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂತೋಷ್ ಲಾಡ್ ಗೆ ಈ ಬಗ್ಗೆ ಮಾಹಿತಿ ಇದೆ. ನಾನು ಸಂತೋಷ್ ಲಾಡ್ ಜೊತೆ ಈ ವರೆಗೂ ಮಾತಾಡಿಲ್ಲ. ಸಂತೋಷ್ ಲಾಡ್ ನ ನಾನೇ ಕಳುಹಿಸಿದ್ದು. ಅವ್ರು ಕೆಲ ಕನ್ನಡಿಗರನ್ನ ಕರೆದುಕೊಂಡು ಬಂದಿದ್ದಾರೆ.ಮೈಸೂರು: ಸಿಎಂ ಆರೋಗ್ಯ ವಿಚಾರ. ನಾನು ಈಗ ಆರೋಗ್ಯವಾಗಿದ್ದೇನೆ 90% ನಷ್ಟು ನೋವು ಇಲ್ಲ. ಇನ್ನೂ ಸ್ವಲ್ಪ ನೋವಿದೆ, ಆಗಾಗ ರೆಸ್ಟ್ ಮಾಡುತ್ತೇನೆ. ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ
Comments