ಮನೆ ಬಿಟ್ಟ ಹೋದ ಮಗಳು ಕುಟುಂಬಸ್ಥರು ನೀರು ಪಾಲು...
- Prajanudi Digital
- May 25
- 2 min read

ಮಗಳು ಮನೆಯಿಂದ ಎಸ್ಕೇಪ್...
ತಂದೆ ತಾಯಿ ತಂಗಿ ನೀರು ಪಾಲು...
ಹೆಂಡತಿ ಮಗಳೊಂದಿಗೆ ನೀರಿಗೆ ಜಿಗಿದ ತಂದೆ...
ಸತತ ಕಾರ್ಯಾಚರಣೆ ಬಳಿಕ ಮೂವರ ಮೃತದೇಹ ಪತ್ತೆ...
ಸ್ಥಳದಲ್ಲಿ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ....
ಹೌದು, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಪಟ್ಟಣದ ಬೂದನೂರಿನಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದೇ ಹೋಗಿದೆ. ತನ್ನ ಮಗಳು ಮಾಡಿದ ಮಹಾತಪ್ಪಿಗೆ ಇದೀಗ ಮೂವರ ಬಲಿಯಾಗಿದೆ. ಅಂದಹಾಗೆ ಈ ಫೋಟೋದಲ್ಲಿರುವ ಈ ವ್ಯಕ್ತಿಯ ಹೆಸರು ಮಹದೇವಸ್ವಾಮಿ. ಹೆಚ್ ಡಿ ಕೋಟೆ ಪಟ್ಟಣದಲ್ಲಿ ದಿನಸಿ ಅಂಗಡಿಯನ್ನು ಇಟ್ಕೊಂಡು ಜೀವನ ಸಾಗಿಸ್ತಾ ಇದ್ರು. ಮಹಾದೇವಸ್ವಾಮಿಗೆ ಅರ್ಪಿತಾ ಹಾಗೂ ಹರ್ಷಿತಾ ಅಂತ ಇಬ್ಬರು ಹೆಣ್ಣು ಮಕ್ಕಳು ಇದ್ರು. ಇದೀಗ ಮೊದಲ ಮಗಳು ಅರ್ಪಿತಾ ಕಳೆದ ಎರಡ್ಮೂರು ದಿನದ ಹಿಂದೆ ಪ್ರಿಯಕರನೊಂದಿಗೆ ಓಡಿ ಹೋಗಿದ್ಲು ಅಂತಾ ಮನ ನೊಂದಿದ್ರು. ಮಗಳು ಮಾಡಿದ ತಪ್ಪಿನಿಂದ ತಮ್ಮ ಮರ್ಯಾದೇ ಹೋಯ್ತು ಅಂತಾ ಇಡೀ ಕುಟುಂಬ ಜೀವತ್ತಿದೆ.

ತಂದೆ ತಾಯಿ ಇಬ್ರು ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳನ್ನೂ ಮುದ್ದು ಮುದ್ದಾಗಿ ಸಾಕಿ ಓದಿಸಿ ಬೆಳೆಸಿ ಮುಂದೆ ಮದುವೆ ಮಾಡಿ ತಮ್ಮ ಕಣ್ಣು ತುಂಬಿಕೊಳ್ಳುವ ತವಕದಲ್ಲಿದ್ರು. ಆದ್ರೆ ಹಿರಿಯ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿ ನಿರಾಸೆ ಮೂಡಿಸಿ ಮರ್ಯಾದೆ ಹೋಗುವ ಕೆಲಸ ಮಾಡಿದ್ಳು. ಮಾದೇವಸ್ವಾಮಿ ಮಂಜುಳಾ ದಂಪತಿಯ ಮೊದಲ ಮಗಳು ಅರ್ಪಿತಾ ಹುಡುಗನೊಬ್ಬನನ್ನ ಪ್ರೀತಿ ಮಾಡ್ತದ್ಳಂತೆ. ಈ ಕಾರಣಕ್ಕಾಗಿ ಅರ್ಪಿತಾ ಮನೆ ಬಿಟ್ಟು ಹೋಗಿದ್ಳಂತೆ. ಇದ್ರಿಂದ ಬರಸಿಡಿಲು ಬಡಿದಂತಾಗಿ, ಮರ್ಯಾದೆ ಹೋಯ್ತು ಅಂತಾ ಮನನೊಂದ ಮಹಾದೇವಸ್ವಾಮಿ ಇವತ್ತು ಬೆಳಗ್ಗೆ ತನ್ನ ಮಗಳು ಹರ್ಷಿತಾ ಹಾಗೂ ಪತ್ನಿ ಮಂಜುಳ ಜೊತೆಗೆ ಬೂದನೂರಿನ ಕೆರೆಗೆ ಬಂದಿದ್ದಾರೆ. ಬೈಕ್ನಲ್ಲಿ ಬಂದ ಮಹದೇವಸ್ವಾಮಿ ಕೆರೆಯ ದಡದಲ್ಲಿ ಬೈಕ್ ನಿಲ್ಲಿಸಿ, ಅಲ್ಲೇ ಚಪ್ಪಲಿ ಬಿಟ್ಟಿದ್ದಾರೆ. ನಂಯರ ಮೂವರು ಹಗ್ಗದಲ್ಲಿ ತಮ್ಮ ಕೈಕಾಲುಗಳನ್ನ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ.
ಮನೆಯಲ್ಲಿ ಮೂವರು ಕೂಡ ಬೆಳಗಿನ ಹೋದವರು ಇನ್ನೂ ವಾಪಸ್ ಬರಲಿಲ್ಲ ಅಂತ ಅಕ್ಕಪಕ್ಕದವರು ಜೊತೆಗೆ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಯಾವಾಗ ಕೆರೆಯ ಸಮೀಪ ಮಹದೇವಸ್ವಾಮಿ ಅವರ ಬೈಕ್ ನಿಂತಿತ್ತು ಆಗ ಮತ್ತಷ್ಟು ಆತಂಕಗೊಂಡ್ರು. ಅದಾಗಲೇ ಕೆರೆಗೆ ಹಾರಿರುವ ವಿಚಾರ ಗೊತ್ತಾಗಿದೆ. ಕೆರೆಯ ಮೇಲ್ಭಾಗದಲ್ಲಿ ಬೈಕ್ ನಿಲ್ಲಿಸಿ ಅಲ್ಲಿಯೇ ಚಪ್ಪಲಿಯನ್ನು ಬಿಟ್ಟು ಮೂವರು ಕೂಡ ಒಬ್ಬರನ್ನೊಬ್ಬರನ್ನ ಹಿಡ್ಕೊಂಡು ಕೆರೆಗೆ ಹಾರಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಚ್ ಡಿ ಕೋಟೆ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸತತ ಕಾರ್ಯಾಚರಣೆ ಮೂಲಕ ಮೂವರ ಮೃತ ದೇಹವನ್ನು ಕೂಡ ಹೊರ ತೆಗೆಯಲಾಗಿದೆ.
ಇನ್ನೂ, ಸಾವಿಗೂ ಮುನ್ನ ಮೃತ ಮಹದೇವಸ್ವಾಮಿ ನಾಲ್ಕು ಪುಟಗಳ ಡೆತ್ ನೋಟ್ ಬರೆದಿದ್ದು ಮಗಳು ಮಾಡಿದ ತಪ್ಪಿಗಾಗಿ ನಾವು ಮರ್ಯಾದೆಗೆ ಹಂಚಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದೇವೆ ಅಂತ ಡೆತ್ ನೋಟನ್ನ ಬರೆದಿದ್ದಾರೆ ಎನ್ನಲಾಗಿದೆ. ಮೂವರ ಮೃತ ದೇಹಗಳನ್ನ ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ.
ಒಟ್ಟಾರೆ, ಮನೆಯಲ್ಲಿ ಯಾರಿಗೂ ಏನೂ ಹೇಳದೆ ಮಗಳು ಮಾಡಿದ ಆ ಒಂದು ತಪ್ಪಿನಿಂದ ಇಡೀ ಕುಟುಂಬವೇ ಬಲಿಯಾಗಿ ಹೋಗಿದೆ. ನಿಜಕ್ಕೂ ಮಗಳು ಮಾಡಿದ ಪ್ರೀತಿಗಾಗಿ ಇಡೀ ಕುಟುಂಬ ಇದೀಗ ತಲೆ ಕೊಟ್ಟಿದೆ. ಏನು ಅರಿಯದ ತಂಗಿ ಅರ್ಪಿತ ತಾಯಿ ಹಾಗೂ ತಂದೆ ಜೀವ ಕಳೆದುಕೊಂಡಿದ್ದು, ಮಾತ್ರ ನಿಜಕ್ಕೂ ದುರ್ದೈವದ ಸಂಗತಿ.
Comments