top of page

ಅಭಿಮನ್ಯು ಬಳಿಕ ಅಂಬಾರಿ ಹೊರೋದ್ಯಾರು..??

Updated: Aug 10

ree

2025ರ ವಿಶ್ವ ವಿಖ್ಯಾತ ನಾಡ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೊಂದು ತಿಂಗಳು ಬಾಕಿಯಿದ್ದು. ಆಗಸ್ಟ್ 4ರಂದು ಗಜಪಡೆಗೆ ಚಾಲನೆ ಸಿಗಲಿದೆ. ಈ ಭಾರಿಯು ದಸರಾ ಗಜಪಡೆಯನ್ನ ಕ್ಯಾಪ್ಟನ್ ಅಭಿಮನ್ಯು ಮುನ್ನಡೆಸಲಿದ್ದಾನೆ...

ree

ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಆನೆಗಳ ಆಯ್ಕೆ ಸಿದ್ಧತೆಯಲ್ಲಿ ಅರಣ್ಯ ಇಲಾಖೆ ಮುಂದಾಗಿದೆ. ಇದರ ನಡುವೆ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಚಿನ್ನದ ಅಂಬಾರಿಯನ್ನ ಯಾರು ಹೊರಲಿದ್ದಾನೆ ಎಂಬ ಕುತೂಹಲ ಕೂಡ ಜನರಲ್ಲಿ ಇದೆ. ಕ್ಯಾಪ್ಟನ್ ಅಭಿಮನ್ಯು ಈ ವರ್ಷ 59ವರ್ಷಕ್ಕೆ ಕಾಲಿಡುತ್ತಿದ್ದೂ 60ವರ್ಷ ಮೇಲ್ಪಟ್ಟ ಆನೆಗಳು ಅಂಬಾರಿ ಹೊರಬಾರದು ಎಂಬ ನ್ಯಾಯಾಲಯದ ಆದೇಶ ಕೂಡ ಇರುವ ಕಾರಣ. ಈ ಭಾರಿ ಅಭಿಮನ್ಯು ಕೊನೆಯ ಬಾರಿಗೆ ಅಂಬಾರಿ ಹೊರಲಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ...

ree

ಕ್ಯಾಪ್ಟನ್ ಅಭಿಮನ್ಯು ಇದುವರೆಗೂ ಐದು ಭಾರಿ ಚಿನ್ನದ ಅಂಬಾರಿಯನ್ನ ಹೊತ್ತು ಯಶಸ್ವಿಯಾಗಿ ದಸರಾವನ್ನ ನಿಭಾಯಿಸಿದ್ದಾನೆ. 2020 ಮತ್ತು 2021 ಕೋವಿಡ್ ವೇಳೆ ಕೇವಲ ಅರಮನೆ ಅವರಣಕ್ಕೆ ಸೀಮಿತವಾಗಿದ್ದ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಸಾಗಿದ್ದ. ಬಳಿಕ 2022ರಿಂದ 2024ರವರೆಗೆ ಮೂರು ಭಾರಿ ಬನ್ನಿಮಂಟಪವರೆಗೆ ಅಂಬಾರಿ ಹೊತ್ತು ಸಾಗಿದ್ದಾನೆ. ಈ ಭಾರಿಯು ಕೂಡ ಅಂಬಾರಿಯನ್ನ ಹೊರುವ ಜವಾಬ್ದಾರಿ ಕ್ಯಾಪ್ಟನ್ ಅಭಿಮನ್ಯು ಹೆಗಲಿಗೆ ಬಿದ್ದಿದೆ...

ree

ಕ್ಯಾಪ್ಟನ್ ಅಭಿಮನ್ಯುವಿನನ್ನ 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.ಬಳಿಕ ಮತ್ತಿಗೋಡು ಆನೆ ಶಿಬಿರದಲ್ಲಿ ಅಭಿಮನ್ಯೂವಿನನ್ನ ಪಳಗಿಸಲಾಯಿತು. ಅಭಿಮನ್ಯು 2012ರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಅಂಬಾರಿ ಹೊರುವುದಕ್ಕೂ ಮುನ್ನ ನೌಪತ್ ಆನೆಯಾಗಿ ಹಾಗೂ ಆನೆ ಬಂಡಿ ಎಳೆಯುವ ಕೆಲಸವನ್ನ ನಿಭಾಯಿಸಿದ್ದ. ಕ್ಯಾಪ್ಟನ್ ಅಭಿಮನ್ಯು ಕೇವಲ ದಸರಾ ಮಹೋತ್ಸವದಲ್ಲಿ ಮಾತ್ರವಲ್ಲದೆ ಕಾಡಾನೆ ಸೆರೆ ಕಾರ್ಯಾಚರಣೆ, ಹುಲಿ, ಚಿರತೆ ಕಾರ್ಯಾಚರಣೆಯಲ್ಲೂ ಭಾಗಿಯಾಗುವ ಮೂಲಕ ಕೂಂಬಿಂಗ್ ಸ್ಪೆಷಲಿಸ್ಟ್ ಆಗಿದ್ದಾನೆ.ಹುಲಿ ಆನೆ ಚಿರತೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಇದ್ದಾನೆ ಅಂದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ರೀತಿಯ ಧೈರ್ಯ. ಈಗಿರುವಾಗ ಅಭಿಮನ್ಯುವಿನ ಬಳಿಕ ಅಂಬಾರಿಯನ್ನ ಯಾವ ಆನೆ ಹೊರಲಿದೆ ಎಂಬ ಕುತೂಹಲ ಕೂಡ ಸಾರ್ವಜನಿಕರಲ್ಲಿ ಇದೆ. ಇದರ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಅಂಬಾರಿ ಹೊರುವ ಆನೆ ಆಯ್ಕೆ ಮಾಡುವ ಜವಾಬ್ದಾರಿ ಇದೆ. ಸಧ್ಯ ಈಗ ದಸರಾದಲ್ಲಿ ಭಾಗಿಯಾಗುತ್ತಿರುವ ಆನೆಗಳ ಪೈಕಿ ಧನಂಜಯ, ಮಹೇಂದ್ರ, ಭೀಮ ಆನೆಗಳ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ ಈ ಮೂರು ಆನೆಗಳು ತೂಕ ಮತ್ತು ಎತ್ತರದಲ್ಲೂ ಬಲಿಷ್ಠವಾಗಿವೆ. ಹಿರಿತನದಲ್ಲಿ ಧನಂಜಯ ಆನೆಯನ್ನ ಪರಿಗಣಿಸಿದರೆ, ಧೈರ್ಯ ಮತ್ತು ಅಂಬಾರಿ ಹೊರುವ ದೇಹ ಲಕ್ಷಣ ಮಹೇಂದ್ರನಲ್ಲಿದೆ. ಈಗಾಗಿ ಮುಂದಿನ ದಿನಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಈ ಆನೆಗಳಿಗೆ ಸಿಗುತ್ತಾ ಇಲ್ಲವಾ ಅನ್ನೋದೇ ಕುತೂಹಲವಾಗಿದೆ...

ree

ಒಟ್ಟಾರೆ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೆ ಉತ್ತರ ನೀಡಬೇಕಿದೆ...


ಕ್ಯಾಮರಾಮನ್ ಸಂಜಯ್ ಜೊತೆ ಅನಿಲ್ ರಾಜ್ ಎಸ್ ಎಂ ಸೋಸಲೆ ಪ್ರಜಾನುಡಿ ಮೈಸೂರು...













Bình luận


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page