top of page

Earthquake: 24 ಗಂಟೆಗಳಲ್ಲಿ ಭಾರತ, ಕ್ಯೂಬಾ ಸೇರಿದಂತೆ ಹಲವೆಡೆ ಭಾರೀ ಭೂಕಂಪನ!

  • Apr 8
  • 1 min read

ree









ಕಳೆದ ದಿನ ಭಾನುವಾರ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಭೂಕಂಪನಗಳು ಸಂಭವಿಸಿವೆ. ಭಾರತದ ರಾಜಸ್ಥಾನ ಸೇರಿದಂತೆ ತಜಕಿಸ್ತಾನ, ಇಂಡೋನೇಷ್ಯಾ ಮತ್ತು ಕ್ಯೂಬಾದಲ್ಲಿ ತೀವ್ರತರವಾದ ಭೂಕಂಪ ಸಂಭವಿಸಿದೆ. ಇದರಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ. ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಭೂಕಂಪನವಾಗಿದೆ ಇದರ ಸಂಪೂರ್ಣ ವರದಿ ಇಲ್ಲಿದೆ...


ಕಳೆದ ದಿನ ಪೂರ್ವ ಕ್ಯೂಬಾದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿಯ ಪ್ರಕಾರ ಭೂಕಂಪನ ಬಾರ್ಟೋಲೋಮ್ ಮಾಸೊದಿಂದ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿದೆ. ಸ್ಯಾಂಟಿಯಾಗೊ ಡಿ ಕ್ಯೂಬಾದಂತಹ ಪ್ರಮುಖ ನಗರಗಳನ್ನು ಒಳಗೊಂಡಂತೆ ಪೂರ್ವ ಕ್ಯೂಬಾದಾದ್ಯಂತ ಕಂಪನಗಳಾಗಿದೆ. ಈ ಅವಧಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ವರದಿಗಳು ಆಗಿಲ್ಲ.

ಇತ್ತೀಚೆಗಷ್ಟೇ ಕ್ಯೂಬಾದಲ್ಲಿ ಭೂಕಂಪನ ಸಂಭವಿಸಿತ್ತು. ಒಂದರ ಹಿಂದೆ ಒಂದರಂತೆ ಭೂಕಂಪನವಾಗುತ್ತಿರುವುದಕ್ಕೆ ಸ್ಥಳೀಯರು ಜೀವವನ್ನೇ ಅಂಗಗೈಯಲ್ಲಿ ಹಿಡಿದುಕೊಂಡು ಜೀವಿಸುವಂತಾಗಿದೆ. ಬುಧವಾರ ರಫೇಲ್ ಚಂಡಮಾರುತ ಪಶ್ಚಿಮ ಕ್ಯೂಬಾದಲ್ಲಿ ಭೂಕುಸಿತವನ್ನು ಉಂಟುಮಾಡಿದೆ. ಬಲವಾದ ಗಾಳಿ ಬೀಸಿದ್ದರಿಂದ ಅನೇಕ ಮನೆಗಳು ನಾಶವಾಗಿವೆ. ವಿದ್ಯುತ್ ಕಡಿತಗೊಂಡು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತ ಬಂದು ಹಲವು ದಿನ ಕಳೆದರೂ ಹಲವು ಪ್ರದೇಶಗಳಲ್ಲಿ ಇನ್ನೂ ಕೂಡ ವಿದ್ಯುತ್ ಇಲ್ಲ.

ಇನ್ನೂ ಅಕ್ಟೋಬರ್‌ನಲ್ಲಿ ಕ್ಯೂಬಾ ಹಲವಾರು ದಿನಗಳ ಕಾಲ ಇಂಧನ ಬಿಕ್ಕಟ್ಟಿನಿಂದ ಗಂಭೀರ ಸವಾಲುಗಳನ್ನು ಎದುರಿಸಿತು. ಇದರ ನಂತರ ಮತ್ತೊಂದು ಪ್ರಬಲವಾದ ಚಂಡಮಾರುತ ದ್ವೀಪದ ಪೂರ್ವ ಪ್ರದೇಶದ ಮೇಲೆ ಪರಿಣಾಮ ಬೀರಿ ಕನಿಷ್ಠ ಆರು ಸಾವುಗಳು ಸಂಭವಿಸಿದವು. ಈ ಘಟನೆಗಳು ಈಗಾಗಲೇ ದೈನಂದಿನ ಜೀವನದೊಂದಿಗೆ ಹೋರಾಡುತ್ತಿರುವ ಅನೇಕ ಕ್ಯೂಬನ್ನರಿಗೆ ತೊಂದರೆಗಳನ್ನು ಹೆಚ್ಚಿಸಿವೆ.

ಇಂಡೋನೇಷ್ಯಾದಲ್ಲಿ ಭೂಕಂಪನ

ಇನ್ನೂ ಇಂಡೋನೇಷ್ಯಾದ ಪೂರ್ವ ದಕ್ಷಿಣ ಪಪುವಾ ಪ್ರಾಂತ್ಯದಲ್ಲಿ ಭಾನುವಾರ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕ್ಯೂಬಾದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಪ್ರಕಾರ, ಭೂಕಂಪ ಭಾನುವಾರ (2120 GMT ಶನಿವಾರ) ಮುಂಜಾನೆ 4:20ಕ್ಕೆ (ಜಕಾರ್ತಾ ಸಮಯ) ಸಂಭವಿಸಿದ್ದು, ಇದರ ಕೇಂದ್ರಬಿಂದು ಅಸ್ಮತ್ ರೀಜೆನ್ಸಿಯ ವಾಯುವ್ಯಕ್ಕೆ 69 ಕಿಮೀ ಮತ್ತು 10 ಕಿಮೀ ಆಳದಲ್ಲಿದೆ. ಭೂಕಂಪದಿಂದ ದೊಡ್ಡ ಅಲೆಗಳು ಏಳುವ ಸಾಧ್ಯತೆ ಇಲ್ಲದಿರುವುದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ವರದಿ ತಿಳಿಸಿದೆ.

ಭಾರತದಲ್ಲೂ ಭೂಕಂಪ

ಭಾನುವಾರ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೌಂಟ್ ಅಬುದಲ್ಲಿ ಭೂಕಂಪ ಸಂಭವಿಸಿದೆ. ಬೆಳಗ್ಗೆ 7.52ಕ್ಕೆ ಭೂಕಂಪನದ ಅನುಭವವಾಗಿದೆ. ಮೌಂಟ್ ಅಬು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

ತಜಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ

ತಜಕಿಸ್ತಾನದಲ್ಲೂ ಭಾನುವಾರ ಭೂಕಂಪನ ಸಂಭವಿಸಿದೆ. ತಜಕಿಸ್ತಾನದಲ್ಲಿ 4.6ರಷ್ಟು ತೀವ್ರತೆ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಇದು ರಾತ್ರಿ 7:48 ಕ್ಕೆ (SIT) 145 ಕಿಮೀ ಆಳದಲ್ಲಿ ಸಂಭವಿಸಿದೆ, ಅದರ ಕೇಂದ್ರಬಿಂದು ಅಕ್ಷಾಂಶ 37.48 N ಮತ್ತು ರೇಖಾಂಶ 72.39 Eದಲ್ಲಿದೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page