top of page

Glasgow 2026 Commonwealth Games ನಿಂದ ಕ್ರಿಕೆಟ್ ಔಟ್; ಕೊನೆಗೂ ಈಡೇರಲಿಲ್ಲ ಅಭಿಮಾನಿಗಳ ಕನಸು!

  • Apr 8
  • 2 min read

ಸ್ಕಾಟ್ಲೆಂಡ್ ನ ಗ್ಲಾಸ್‌ಗೊನಲ್ಲಿ 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹಾಕಿ, ಬ್ಯಾಡ್ಮಿಂಟನ್‌, ಕುಸ್ತಿ, ಶೂಟಿಂಗ್, ಟೇಬಲ್ ಟೆನ್ನಿಸ್, ಸ್ಕ್ವಾಷ್‌, ಟ್ರಥ್ಲಾನ್‌ ಹಾಗೂ ಕ್ರಿಕೆಟ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.


ree










ಲಂಡನ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎನ್ನುವ ಕ್ರಿಕೆಟ್ ಅಭಿಮಾನಿಗಳ ಕನಸು ಕನಸಾಗಿಯೇ ಉಳಿಯಲಿದ್ದು, 2026ರ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳನ್ನು ಕೈ ಬಿಡಲಾಗಿದೆ

ಹೌದು.. ಸ್ಕಾಟ್ಲೆಂಡ್ ನ ಗ್ಲಾಸ್‌ಗೊನಲ್ಲಿ 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹಾಕಿ, ಬ್ಯಾಡ್ಮಿಂಟನ್‌, ಕುಸ್ತಿ, ಶೂಟಿಂಗ್, ಟೇಬಲ್ ಟೆನ್ನಿಸ್, ಸ್ಕ್ವಾಷ್‌, ಟ್ರಥ್ಲಾನ್‌ ಹಾಗೂ ಕ್ರಿಕೆಟ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಕ್ರೀಡಾಕೂಟವನ್ನು ಬಜೆಟ್ ಸ್ನೇಹಿಯಾಗಿಸುವ ಉದ್ದೇಶದಿಂದ ಈ ಆಟಗಳನ್ನು ಕೈಬಿಡಲಾಗಿದೆ. 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಕ್ರೀಡಾ ನಗರಿಯ ಅಭಿವೃದ್ಧಿಗಾಗಿ 100 ದಶಲಕ್ಷ ಪೌಂಡ್‌ಗಳನ್ನು ಖರ್ಚು ಮಾಡುವುದಾಗಿ ಸ್ಕಾಟ್‌ಲೆಂಡ್ ಹೇಳಿದೆ.

ಅಂತೆಯೇ ಇಡೀ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ಕೇಂದ್ರಗಳನ್ನಷ್ಟೇ ಬಳಸಲಾಗುತ್ತಿದ್ದು, 2022ರ ಬರ್ಮಿಂಗ್‌ಹ್ಯಾಮ್‌ ಆವೃತ್ತಿಗೆ ಹೋಲಿಸಿದಲ್ಲಿ 2026ರಲ್ಲಿ ಕ್ರೀಡೆಗಳ ಸಂಖ್ಯೆಗಳು ಗಣನೀಯವಾಗಿ ಕುಸಿಯಲಿವೆ ಎಂದು ಹೇಳಲಾಗಿದೆ. ಹಾಲಿ ಕ್ರೀಡಾಕೂಟದಲ್ಲಿ ಕೇವಲ10 ಕ್ರೀಡೆಗಳಷ್ಟೇ ಇರಲಿದೆ. ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಹಲವು ಆಟಗಳು ಇರಬೇಕು.

ಮೊದಲ ಟೆಸ್ಟ್ ಪಂದ್ಯ ಗೆದ್ದ ಮದ: ಭಾರತದ ನಕ್ಷೆಯನ್ನು ತಪ್ಪಾಗಿ ಪೋಸ್ಟ್ ಮಾಡಿದ ನ್ಯೂಜಿಲೆಂಡ್ ಕ್ರಿಕೆಟ್; ಅಭಿಮಾನಿಗಳು ಗರಂ


ಜತೆಗೆ ನಿರ್ವಹಣೆ ಮತ್ತು ಹಣಕಾಸು ವೆಚ್ಚವನ್ನೂ ತಗ್ಗಿಸಬೇಕಾಗಿದೆ. ಹೀಗಾಗಿ ಅಥ್ಲೆಟಿಕ್ಸ್‌ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ (ಟ್ರ್ಯಾಕ್‌ ಮತ್ತು ಫೀಲ್ಡ್‌), ಈಜು, ಪ್ಯಾರಾ ಈಜು, ಆರ್ಟಿಸ್ಟಿಕ್ ಜಿನ್ಮಾಸ್ಟಿಕ್‌, ಟ್ರ್ಯಾಕ್‌ ಸೈಕ್ಲಿಂಗ್‌ ಹಾಗೂ ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್‌, ನೆಟ್‌ಬಾಲ್‌, ವ್ಹೈಟ್‌ ಲಿಫ್ಟಿಂಗ್‌ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್‌, ಬಾಕ್ಸಿಂಗ್, ಜುಡೊ, ಬೌಲ್ಸ್‌ ಹಾಗೂ ಪ್ಯಾರಾ ಬೌಲ್ಸ್‌, 3X3 ಬಾಸ್ಕೆಟ್‌ಬಾಲ್‌, 3X3 ಗಾಲಿಕುರ್ಚಿ ಬಾಸ್ಕೆಟ್‌ಬಾಲ್‌’ ಇರಲಿದೆ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಹೇಳಿದೆ.

ಈ ಹಿಂದೆ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ಶೂಟಿಂಗ್ ಅನ್ನು ಕೈಬಿಡಲಾಗಿತ್ತು. ಅದು ಈ ಬಾರಿಯೂ ಮುಂದುವರಿದಿದೆ. ಇದರೊಂದಿಗೆ ಇತರ ಪ್ರಮುಖ ಕ್ರೀಡೆಗಳನ್ನು ಕೈಬಿಟ್ಟಿರುವುದು ಭಾರತದ ಪದಕ ಬೇಟೆಗೆ ತೊಡಕಾಗ‌ಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಂದಹಾಗೆ ಜುಲೈ 23ರಿಂದ ಆಗಸ್ಟ್‌ 2ರವರೆಗೆ ಕಾಮನ್‌ವೆಲ್ತ್‌ ಗೇಮ್ಸ್‌ ನಡೆಯಲಿದೆ. ಗ್ಲಾಸ್‌ಗೋಗೆ 12ನೇ ವರ್ಷದ ನಂತರ ಆತಿಥ್ಯ ವಹಿಸುವ ಅವಕಾಶ ಲಭಿಸಿದ್ದು, ಪ್ಯಾರಾ ಅಥ್ಲೀಟ್‌ 2002ರ ಮ್ಯಾಂಚೆಸ್ಟರ್‌ ಆವೃತ್ತಿಯಿಂದ ಆರಂಭಗೊಂಡಿದ್ದು, ಇದು 2026ರ ಆವೃತ್ತಿಯಲ್ಲೂ ಮುಂದುವರಿಯಲಿದೆ. 2014 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಅನ್ನು ಗ್ಲಾಸ್‌ಗೊದಿಂದ 100 ಕಿ.ಮೀ. ದೂರದಲ್ಲಿ ಆಯೋಜಿಸಲಾಗಿತ್ತು.

ಹಲವು ಕ್ರೀಡೆಗಳ ಕಡೆಗಣನೆ

ಇದು 2010ರಲ್ಲಿ ದೆಹಲಿಯಲ್ಲಿ ನಡೆದ ಕ್ರೀಡಾಕೂಟದ ನಂತರ ನಡೆದೇ ಇಲ್ಲ. 2014ರಲ್ಲಿ ಹಾಕಿಯನ್ನು ಕೈಬಿಡಲಾಗಿತ್ತು. ಆದರೆ ಈವರೆಗಿನ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಮೂರು ಬೆಳ್ಳಿ ಹಾಗೂ 2 ಕಂಚಿನ ಪದ ಗೆದ್ದಿತ್ತು. ಬ್ಯಾಡ್ಮಿಂಟನ್‌ ಈವರೆಗೂ 10 ಜಿನ್ನ ಸೇರಿದಂತೆ 31 ಪದಕಗಳನ್ನು ಪಡೆದಿದೆ. ಇನ್ನು ಶೂಟಿಂಗ್‌ನಲ್ಲಿ ಈವರೆಗೂ 135 ಪದಕಗಳನ್ನು ಪಡೆದಿದೆ. ಇದರಲ್ಲಿ 63 ಚಿನ್ನದ ಪದಕ ಒಳಗೊಂಡಿದೆ. ಭಾರತಕ್ಕೆ ಕುಸ್ತಿಯಲ್ಲಿ 114 ಪದಕ ಭಾರತಕ್ಕೆ ಲಭಿಸಿದೆ. ಕ್ರಿಕೆಟ್‌ನಲ್ಲಿ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸಿದೆ.

Komentar


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page