ಹೊಸಹಳ್ಳಿ ಶ್ರೀ ಮಾರಮ್ಮ ಹಬ್ಬ:ನೀರು ಎರಚಿಕೊಂಡು ಸಂಭ್ರಮಿಸಿದ ಅತ್ತಿಗೆ-ನಾದಿನಿಯರು...
- Prajanudi Digital
- May 14
- 1 min read

ಮಂಡ್ಯ:ನಗರದ ಹೊಸಹಳ್ಳಿ ರಾಮನಹಳ್ಳಿ ಶ್ರೀ ಬಿಸಿಲು ಮಾರಮ್ಮ ದೇವಾಲಯದಲ್ಲಿ ಸ್ಥಳೀಯ ಗ್ರಾಮಸ್ಥರು ಶ್ರೀಮಾರಮ್ಮ ಹಾಗೂ ಬಿಸಿಲು ಮಾರಮ್ಮ ಹಬ್ಬ ಪ್ರಯುಕ್ತ ಅಕ್ಕಿತೊಳೆಯುವುದು, ಅತ್ತಿಗೆ-ನಾದಿನಿ,ಅಕ್ಕ-ತಂಗಿಯರು ನೀರು ಎರಚಿಕೊಂಡು ಕುಣಿದು ಸಂಭ್ರಮಿಸಿದರು.
ಬಳಿಕ ಮಾತನಾಡಿದ ಗ್ರಾಮದ ಮುಖಂಡ ಹಾಗೂ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ,ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದ ಒಳಿತಿಗಾಗಿ ಗ್ರಾಮದೇವತೆ ಶ್ರೀ ಮಾರಮ್ಮ ಮತ್ತು ಶ್ರೀ ಬಿಸಿಲು ಮಾರಮ್ಮ ಉತ್ಸವವು ನಡೆಯುತ್ತಿದೆ, ೨ ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ದೇವರ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆಯುತ್ತವೆ ಎಂದರು.
ಗ್ರಾಮದಲ್ಲಿ ೩ ವರ್ಷಗಳಿಗೊಮ್ಮೆ ಆಚರಿಸುವ ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬವು ೨-೩ದಿನಗಳ ಕಾಲ ನಡೆಯುತ್ತದೆ,ಗ್ರಾಮದೇವತೆ ಹಬ್ಬಗಳಿಂದ ಒಂದೆಡೆ ಸೇರುತ್ತೇವೆ, ದೂರದಲ್ಲಿರುವ ಸಂಬಂಧಿಗಳಲ್ಲಿ ಭಾವೈಕ್ಯತೆ ಬೆಸೆಯುತ್ತದೆ,ಮನೆ ಮಂದಿಯೊಂದಿಗೆ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತದೆ, ಹೆಣ್ಣುಮಕ್ಕಳು ಬಂದು ಸಂಭ್ರಮಿಸು ತ್ತಾರೆ ಎಂದು ತಿಳಿಸಿದರು.
ಮೇ.೧೩ರಂದು ದೇವಾಲಯದ ಆವರಣದಲ್ಲಿ ತಂಬಿಟ್ಟಿನ ಬುಟ್ಟಿಯಲ್ಲಿ ಅಕ್ಕಿ ತಂದು ತೊಳೆದು ಒಣಹಾಕುತ್ತಾರೆ,ಆಗ ಅತ್ತಿಗೆ-ನಾದಿನಿ,ಅಕ್ಕ-ತಂಗಿಯರು, ಹೆಣ್ಣುಮಕ್ಕಳು ನೀರು ಎರಚುವ ಉತ್ಸವದಲ್ಲಿ ಸಂಭ್ರಮಿಸುತ್ತಾರೆ, ಬಳಿಕ ಅಕ್ಕಿಯನ್ನು ಮನೆಗೆ ಕೊಂಡೊಯ್ಯುತ್ತಾರೆ.ಸಂಜೆ ಪೂಜಾ ಕುಣಿತ ನಡೆಯುತ್ತದೆ ಎಂದು ತಿಳಿಸಿದರು.
ಮೇ.೧೪ರಂದು ಹೊಸಹಳ್ಳಿ ರಾಮನಹಳ್ಳಿ ಗ್ರಾಮಸ್ಥರು ಒಗ್ಗೂಡಿ, ಭಾವೈಕ್ಯತೆಯಿಂದ ಶ್ರೀ ಮಾರಮ್ಮ ದೇವತೆಗೆ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು,ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸುತ್ತೇವೆ ಎಂದರು.
ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬದಿಂದ ಮಳೆ-ಬೆಳೆ,ಗ್ರಾಮವು ನೆಮ್ಮದಿಯಾಗಿರಿಲಿ ಎನ್ನುವುದು ಪೂರ್ವಿಕರ ನಂಬಿಕೆಯಾಗಿದೆ, ಅಂದಿನಿಂದ ಇಂದಿನವರೆಗೂ ಮುಂದುವರಿಕೊಂಡು ಬಂದಿದೆ ಎಂದು ಹೇಳಿದರು.
ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ರಾಮಣ್ಣ, ಸಿದ್ದಪ್ಪ, ಸುರೇಶ್, ನಿಂಗಣ್ಣ, ಪಾಪೇಗೌಡ,ಸ್ಥಳೀಯ ಮುಖಂಡರಾದ ರೇವಣ್ಣ,
ಬಿ.ಬೋರೇಗೌಡ ಇತರರು ಹಾಜರಿದ್ದರು.

Comments