top of page

ಹೊಸಹಳ್ಳಿಯಲ್ಲಿ ಶ್ರೀಮಾರಮ್ಮನ ಉತ್ಸವ...


ree

ಮಂಡ್ಯ:ನಗರದಲ್ಲಿರುವ ಹೊಸಹಳ್ಳಿ-ರಾಮನಹಳ್ಳಿ ಗ್ರಾಮಸ್ಥರು ಗ್ರಾಮದೇವತೆ ಹಬ್ಬವಾದ ಶ್ರೀಮಾರಮ್ಮ ಮತ್ತು ಶ್ರೀಬಿಸಿಲುಮಾರಮ್ಮ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.

ಗ್ರಾಮದಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದು, ಸಾಮೂಹಿಕ ತಂಬಟ್ಟಿನ ಆರತಿಯೊಂದಿಗೆ ಪೂಜಾ ಕುಣಿತ, ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ವಿಜೃಂಭಣೆಯೊಂದಿಗೆ ಆಚರಿಸಲಾಯಿತು.

ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇವಾಲಯದಲ್ಲಿ ಸ್ಥಳೀಯ ಗ್ರಾಮಸ್ಥರು ಜಮಾವಣೆ ಗೊಂಡು ಗ್ರಾಮದೇವತೆಗೆ ತಂಪು ತೋರಿದರು.

ಬಳಿಕ ಮಾತನಾಡಿದ ಗ್ರಾಮದ ಮುಖಂಡ ಹೊಸಹಳ್ಳಿ ಶಿವಲಿಂಗೇಗೌಡ,ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದ ಒಳಿತಿಗಾಗಿ ಗ್ರಾಮದೇವತೆ ಶ್ರೀ ಮಾರಮ್ಮ ಮತ್ತು ಶ್ರೀ ಬಿಸಿಲು ಮಾರಮ್ಮ ಉತ್ಸವವು ನಡೆಯುತ್ತಿದೆ, ೨ ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ದೇವರ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದವು ಎಂದು ತಿಳಿಸಿದರು.

ಗ್ರಾಮದಲ್ಲಿ ೩ ವರ್ಷಗಳಿಗೊಮ್ಮೆ ಆಚರಿಸುವ ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬವು ೨-೩ದಿನಗಳ ಕಾಲ ನಡೆಯುತ್ತದೆ, ಗ್ರಾಮದೇವತೆ ಹಬ್ಬಗಳಿಂದ ಒಂದೆಡೆ ಸೇರುತ್ತೇವೆ, ದೂರದಲ್ಲಿರುವ ಸಂಬಂಧಿಗಳಲ್ಲಿ ಭಾವೈಕ್ಯತೆ ಬೆಸೆಯುತ್ತದೆ,ಮನೆ ಮಂದಿಯೊಂದಿಗೆ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತದೆ, ಹೆಣ್ಣುಮಕ್ಕಳು ಬಂದು ಸಂಭ್ರಮಿಸುತ್ತಾರೆ ಎಂದು ತಿಳಿಸಿದರು.

ಹೊಸಹಳ್ಳಿ-ರಾಮನಹಳ್ಳಿ ಗ್ರಾಮಸ್ಥರು ಒಗ್ಗೂಡಿ, ಭಾವೈಕ್ಯತೆಯಿಂದ ಶ್ರೀ ಮಾರಮ್ಮ ದೇವತೆಗೆ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು,ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸಿದೇವು ಎಂದರು.

ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬದಿಂದ ಮಳೆ-ಬೆಳೆ,ಗ್ರಾಮವು ನೆಮ್ಮದಿಯಾಗಿರಿಲಿ ಎನ್ನುವುದು ಪೂರ್ವಿಕರ ನಂಬಿಕೆಯಾಗಿದೆ, ಅಂದಿನಿಂದ ಇಂದಿನವರೆಗೂ ಮುಂದುವರಿಕೊಂಡು ಬಂದಿದೆ ಎಂದು ಹೇಳಿದರು.

ಗ್ರಾಮದ ಯಜಮಾನರಾದ ರಾಮಣ್ಣ,ಸಿದ್ದಪ್ಪ, ಸುರೇಶ್, ನಿಂಗಣ್ಣ, ಪಾಪೇಗೌಡ,ಸ್ಥಳೀಯ ಮುಖಂಡರಾದ ರೇವಣ್ಣ,

ಬಿ.ಬೋರೇಗೌಡ ಇತರರು  ಹಾಜರಿದ್ದರು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page