IPL 2025: ರಜತ್ ಪಾಟೀದಾರ್‌ಗೆ RCB ನಾಯಕತ್ವ; ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದೇನು?
- Apr 8
- 1 min read
ಕೊಹ್ಲಿಯೇ ನಾಯಕನಾಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ನಿರ್ಧಾರವು ಸ್ವಲ್ಪ ಅಚ್ಚರಿಯನ್ನುಂಟುಮಾಡಿತು ಎಂದು ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಆರ್‌ಸಿಬಿ ರಜತ್ ಪಾಟಿದಾರ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ನೇಮಿಸಿದೆ. ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ಅವರೇ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹಲವರು ಊಹಿಸಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಆರ್‌ಸಿಬಿ ಪಾಟೀದಾರ್ ಅವರನ್ನು ನಾಯಕನನ್ನಾಗಿ ಘೋಷಿಸಿತು.
ಕೊಹ್ಲಿಯೇ ನಾಯಕನಾಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ನಿರ್ಧಾರವು ಸ್ವಲ್ಪ ಅಚ್ಚರಿಯನ್ನುಂಟುಮಾಡಿತು ಎಂದು ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಕೈಫ್, ರಜತ್ ಪಾಟೀದಾರ್ ಅವರ ನೇಮಕದಲ್ಲಿ ವಿರಾಟ್ ಕೊಹ್ಲಿ ಅವರೇ ದೊಡ್ಡ ಪಾತ್ರವನ್ನು ವಹಿಸಿರಬಹುದು ಎಂದಿದ್ದಾರೆ.
'ಫಾಫ್ ಡುಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದಾಗಿನಿಂದ ವಿರಾಟ್ ಕೊಹ್ಲಿಯೇ ನಾಯಕನಾಗುತ್ತಾರೆ ಎಂದು ಭಾವಿಸಿದ್ದೆವು. ನಾಯಕನಲ್ಲದಿದ್ದರೂ ವಿರಾಟ್ ಕೊಹ್ಲಿ ಆರ್‌ಸಿಬಿಯ ನಿರ್ಧಾರಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತಾರೆ. ರಜತ್ ಪಾಟೀದಾರ್ ನಾಯಕನಾಗಿದ್ದರೂ ಕೂಡ ಆ ನಿರ್ಧಾರದಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಂಡಕ್ಕೆ ನಿರ್ದೇಶನ ಮತ್ತು ಆಟಗಾರರ ಆಯ್ಕೆಗಳು ಹೆಚ್ಚಾಗಿ ವಿರಾಟ್ ಅವರಿಂದ ಪ್ರಭಾವಿತವಾಗಿರುತ್ತದೆ' ಎಂದು ಕೈಫ್ ಎಕ್ಸ್‌ನಲ್ಲಿ ಬರೆದಿದ್ದಾರೆ.
'ಆ ಫ್ರಾಂಚೈಸಿ 18 ವರ್ಷಗಳಲ್ಲಿ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ. ಆದರೆ, ಇನ್ನೂ ಕೊಹ್ಲಿ ಅವರೊಂದಿಗೆ ಹಲವು ವರ್ಷಗಳಿಂದ ಇದ್ದಾರೆ. ಟ್ರೋಫಿ ಇಲ್ಲದೆಯೂ, ಅವರು ಸಾಕಷ್ಟು ಪ್ರಭಾವ ಮತ್ತು ಗೌರವ ಮತ್ತು ಬ್ರಾಂಡ್ ಮೌಲ್ಯವನ್ನು ನಿರ್ಮಿಸಿದ್ದಾರೆ' ಎಂದಿದ್ದಾರೆ.

Comments