top of page

ಸ್ನೇಹ ಅಂತ ಒಳಗೊಳ್ಗೆ ಸ್ಕೆಚ್ ಹಾಕಿದ್ರಾ..?


ಆತ ರೌಡಿ ಶೀಟರ್, ಏರಿಯಾದಲ್ಲಿ ಹವಾ ಸೃಷ್ಟಿ ಮಾಡಿ ಓಡಾಡಿಕೊಂಡು ಇದ್ದ. ಆದರೆ ಜೊತೆಗಿದ್ದ ಸ್ನೇಹಿತನೇ ಟೀಮ್ ಕಟ್ಟಿಕೊಂಡು ಸ್ಕೆಚ್ ಹಾಕಿ ಮರ್ಡರ್ ಮಾಡಿದ್ದಾನೆ. ರೌಡಿ ಶೀಟರ್‌ನ ಕೊಲೆ‌ ಹಿಂದೆ ಹಣಕಾಸಿನ ವಿಚಾರ, ಹುಡುಗಿ ವಿಚಾರ ಎರಡೂ ತಳುಕು ಹಾಕಿಕೊಂಡಿದೆ. ಆದರೆ ರೌಡಿ ಶೀಟರ್ ಬರ್ಬರ ಕೊಲೆಯ ಸಿಸಿ.ಟಿವಿ ದೃಶ್ಯಗಳು ಮಾತ್ರ ಮೈಸೂರಿಗರನ್ನು ಬೆಚ್ಚಿ ಬೀಳಿಸಿವೆ‌. ಅಷ್ಟಕ್ಕೂ ಆ ರೌಡಿ ಶೀಟರ್ ಯಾರು, ಆತನ ಹಿನ್ನೆಲೆ ಏನು, ಕೊಲೆ ಮಾಡಿದ್ಯಾರು
ಆತ ರೌಡಿ ಶೀಟರ್, ಏರಿಯಾದಲ್ಲಿ ಹವಾ ಸೃಷ್ಟಿ ಮಾಡಿ ಓಡಾಡಿಕೊಂಡು ಇದ್ದ. ಆದರೆ ಜೊತೆಗಿದ್ದ ಸ್ನೇಹಿತನೇ ಟೀಮ್ ಕಟ್ಟಿಕೊಂಡು ಸ್ಕೆಚ್ ಹಾಕಿ ಮರ್ಡರ್ ಮಾಡಿದ್ದಾನೆ. ರೌಡಿ ಶೀಟರ್‌ನ ಕೊಲೆ‌ ಹಿಂದೆ ಹಣಕಾಸಿನ ವಿಚಾರ, ಹುಡುಗಿ ವಿಚಾರ ಎರಡೂ ತಳುಕು ಹಾಕಿಕೊಂಡಿದೆ. ಆದರೆ ರೌಡಿ ಶೀಟರ್ ಬರ್ಬರ ಕೊಲೆಯ ಸಿಸಿ.ಟಿವಿ ದೃಶ್ಯಗಳು ಮಾತ್ರ ಮೈಸೂರಿಗರನ್ನು ಬೆಚ್ಚಿ ಬೀಳಿಸಿವೆ‌. ಅಷ್ಟಕ್ಕೂ ಆ ರೌಡಿ ಶೀಟರ್ ಯಾರು, ಆತನ ಹಿನ್ನೆಲೆ ಏನು, ಕೊಲೆ ಮಾಡಿದ್ಯಾರು

ಸಾಂಸ್ಕೃತಿಕ ನಗರಿಯಲ್ಲಿ ಮಿಡ್‌ನೈಟ್ ಮರ್ಡರ್ ಆಗಿದೆ. 5 ಜನರ ತಂಡ ರೌಡಿಶೀಟರ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವ ದೃಶ್ಯಗಳು ಮೈಸೂರಿಗರನ್ನು ಬೆಚ್ಚಿ ಬೀಳಿಸಿವೆ. ಒಂದು ನಿಮಿಷದಲ್ಲಿ ಮನಬಂದಂತೆ ಕೊಚ್ ಇ ಕೊಲೆ ಮಾಡಿದ ಆಗಂತುಕರು ಶವದ ಮುಂದೆ ಸಂಭ್ರಮಿಸಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ಮಿಡ್‌ನೈಟ್ ಮರ್ಡರ್ ಆಗಿದೆ. 5 ಜನರ ತಂಡ ರೌಡಿಶೀಟರ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವ ದೃಶ್ಯಗಳು ಮೈಸೂರಿಗರನ್ನು ಬೆಚ್ಚಿ ಬೀಳಿಸಿವೆ. ಒಂದು ನಿಮಿಷದಲ್ಲಿ ಮನಬಂದಂತೆ ಕೊಚ್ ಇ ಕೊಲೆ ಮಾಡಿದ ಆಗಂತುಕರು ಶವದ ಮುಂದೆ ಸಂಭ್ರಮಿಸಿದ್ದಾರೆ.

ಕಾರ್ತಿಕ್ ಮೈಸೂರು ತಾಲೂಕು ವರುಣ ಗ್ರಾಮದ ಸಮೀಪವಿದ್ದ ಹೋಟೆಲ್ ಯತೀನ್ ನಲ್ಲಿ ಕಳೆದ 5 ದಿನಗಳಿಂದ ಆಯಾಗಿದ್ದ. ನಿನ್ನೆ ಹೊರಗೆ ಹೋಗಿದ್ದ ಆಸಾಮಿ ಮಧ್ಯರಾತ್ರಿ 1.40ಕ್ಕೆ ಸರಿಯಾಗಿ ಹೋಟೆಲ್ ಮುಂದೆ ಬಂದಾಗ ಡೆಡ್ಲಿ ಅಟ್ಯಾಕ್ ನಡೆದಿದೆ. ಸಾರಿ ಕೇಳುವ ನೆಪದಲ್ಲಿ ಬಂದ ಕೊಲೆಗಾರರ ಗ್ಯಾಂಗ್ ಒಬ್ಬನೇ ಇದ್ದದ್ದನ್ನ ಕಂಡು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಅಂದ ಹಾಗೆ ಕೊಲೆಯಾದ ಕಾರ್ತಿಕ್ ಗೆ ಈಗಿನ್ನೂ 33 ವರ್ಷ. ಮೈಸೂರಿನ ಕ್ಯಾತಾಮಾರನಹಳ್ಳಿ ನಿವಾಸಿಯಾದ ಈತ ಹಲವು ಕೇಸ್ ಗಳಲ್ಲಿ ಭಾಗಿಯಾಗಿದ್ದ. ಈ ಕಾರಣಕ್ಕಾಗಿಯೇ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಜೊತೆಗೆ ಈತನನ್ನು ಏರಿಯಾದಿಂದ ಗಡಿಪಾರು ಕೂಡ ಮಾಡಲಾಗಿತ್ತು. ಈತನ ಜೊತೆಗಿದ್ದ ಮೈಸೂರಿನ ಗಾಯತ್ರಿಪುರಂ ನಿವಾಸಿ ಪ್ರವೀಣ್ ಜೊತೆಗೆ ಒಂದೂವರೆ ವರ್ಷದ ಹಿಂದೆ ಹಣಕಾಸಿನ ವಿಚಾರ ಹಾಗೂ ಹುಡುಗಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಲಕ್ಷ್ಮಿ ಎಂಬುವಳ ಜೊತೆ ಈ ಪ್ರವೀಣ ಸಹವಾಸ ಮಾಡಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಕೊಲೆಯಾದ ರೌಡಿಶೀಟರ್ ಮತ್ತೆ ಈ ಪ್ರವೀಣ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.


ree

ಅದಾದ ಬಳಿಕ ಮೈಸೂರಿನಲ್ಲಿದ್ದ ಈ ಪ್ರವೀಣ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದ. ಈಗ ನಾಲ್ಕು ದಿನಗಳಿಂದ ರೂಮ್ ನಲ್ಲಿ ಲವರ್ ಜೊತೆ ಒಬ್ಬನೇ ಇದ್ದಾನೆ ಅನ್ನೋ ವಿಚಾರವನ್ನ ಈ ಗ್ಯಾಂಗ್ ತಿಳಿದುಕೊಂಡಿತ್ತು. ತಡರಾತ್ರಿ ಫೋನ್ ಮಾಡಿ ಸಾರಿ ಕೇಳುವ ನೆಪದಲ್ಲಿ ಮೃತ ರೌಡಿಶೀಟರ್ ನನ್ನ 1 ಗಂಟೆ 40 ನಿಮಿಷದಲ್ಲಿ ಹೊರಗೆ ಕರೆಸಿದ್ರು ಹೊರಗೆ ಬಂದ ಬಳಿಕ ಒಂದು ಬೈಕ್ ಒಂದು ಕಾರ್ ನಲ್ಲಿ ಬಂದ ಗ್ಯಾಂಗ್ ಏಕಏಕಿ ಲಾಂಗು ಮತ್ತೆ ಮಚ್ಚುಗಳಿಂದ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಲೆ ಮಾಡಿರುವ ದೃಶ್ಯ ಹೋಟೆಲ್ ನಲ್ಲಿ ಹಾಕಲಾಗಿದ್ದ ಸಿಸಟಿವಿಯಲ್ಲಿ ಸೆರೆಯಾಗಿದೆ...

ಇನ್ನು ಮಗನಿಗೆ ರಾತ್ರಿ 10.45ರಲ್ಲಿ ಫೋನ್ ಮಾಡಿ ಊಟ ಮಾಡಿಕೊಂಡು ಹೋಗಲು ಹೇಳಿದ್ದ ತಾಯಿ, ಚಪಾತಿ ಮಾಡಿ ಬಡಿಸಿದ್ದರು. ಕಾರ್ತಿಕ್ ರಾತ್ರಿ 11.30ಕ್ಕೆ ಬಂದು ಊಟ ಮಾಡಿಕೊಂಡು ಹೋದ. ನಂತರ ರಾತ್ರಿ 1.30ಕ್ಕೆ ಆತನ ಜೊತೆಗಿದ್ದ ಹುಡುಗಿಯಿಂದ ಪೋನ್ ಬಂದಿದ್ದು, ತಾಯಿ ತೆಗೆದಿರಲಿಲ್ಲ. ನಂತರ ಬೆಳಿಗ್ಗೆ ಆತನ ಸ್ನೇಹಿತರು ಮನೆ ಮುಂದೆ ಬಂದು ಕೂಗಾಡಿದಾಗ ವಿಷಯ ಗೊತ್ತಾಗಿದ್ದು, ಲಕ್ಷ್ಮಿ ಎಂಬುವಳ ಮೂಲಕ ಪ್ರವೀಣ್‌ನಿಂದ ಈ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾಳೆ.

ಒಟ್ಟಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಗ್ಯಾಂಗ್ ಸ್ಟಾರ್ ಆಗಬೇಕು ಎಂದು ಹೊರಟವ ಮಸಣ ಸೇರಿದ್ದಾನೆ. ಹಣಕಾಸು ಮತ್ತು ಹೆಣ್ಣಿನ ವಿಚಾರಕ್ಕೆ ಸ್ಕೆಚ್ ಹಾಕಿದ್ದ ಆಗಂತುಕರು ಎಸ್ಕೇಪ್ ಆಗಿದ್ದಾರೆ. ವರಣ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ತಂಡ ರಚನೆ ಮಾಡಿದ್ದೂ ನಾಪತ್ತೆಯಾಗಿರುವ ಆರೋಪಿಗಳಿಗೆ ಬಲೆ ಬೀಸಿದ್ದಾರೆ.





Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page