ಮೈಸೂರಿನ ಲೇಡಿ ಕೊರಿಯರ್ ಅನು...
- Prajanudi Digital
- May 14
- 1 min read

ಹಸಿವು, ಬಡತನ ಜೀವನ ನಿರ್ವಹಣೆ ಜವಾಬ್ದಾರಿ ಮನುಷ್ಯನನ್ನ ಯಾವ ದಾರಿಗೆ ಬೇಕಾದರು ತಳ್ಳುತ್ತದೆ. ಈಗಿರುವಾಗ ಬಡತನವನ್ನ ಮೆಟ್ಟಿ ನಿಂತು ತಮ್ಮ ಮುಂದೆ ಇರುವ ಸವಾಲುಗಳನ್ನ ಎದುರಿಸಲು ಮೈಸೂರಿನಲ್ಲಿ ಮಹಿಳೆಯೊಬ್ಬಳು ಕೊರಿಯರ್ ವೃತ್ತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಬೆನ್ನ ಹಿಂದೆ ಕೊರಿಯರ್ ಬ್ಯಾಗ್, ಮುಂದೆ 2ವರ್ಷದ ಮಗು ಇರಿಸಿಕೊಂಡು ಈಗೆ ಮೈಸೂರಿನ ಹಲವು ಕಡೆ ಮನೆ ಮನೆಗೆ ತೆರಳಿ ಕೊರಿಯರ್ ಹಾಕುತ್ತಿರುವ ಮಹಿಳೆಯೇ ಅನು ಮೈಸೂರಿನ ಸುಣ್ಣದಕೇರಿ ನಿವಾಸಿ.
ಎಸ್ ಎಸ್ ಎಲ್ ಸಿ ವರೆಗೂ ವಿದ್ಯಾಭ್ಯಾಸ ಮಾಡಿರುವ ಅನು ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿಯ ಆರೈಕೆಗೆ ಖಾಸಗಿ ಬ್ಯಾಂಕ್ ಸೇರಿದಂತೆ ಹಲವೆಡೆ ಕೈ ಸಾಲ ಮಾಡಿದ್ದರು. ಈಗಿದ್ರು ಕೂಡ ತಮ್ಮ ತಾಯಿಯನ್ನ ಬದುಕಿಸಲಿಕ್ಕೆ ಸಾಧ್ಯವಾಗಲಿಲ್ಲ. ಈಗೆ ತಾಯಿಯ ಆರೋಗ್ಯಕೋಸ್ಕರ ಮಾಡಿದ್ದ ಸಾಲ ತೀರಿಸಲು ಕೊರಿಯರ್ ವೃತ್ತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಅನುರವರಿಗೆ ಎರಡು ವರ್ಷದ ಮಗು ಇರುವ ಕಾರಣ ಎಲ್ಲಿಯೂ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗಿರುವಾಗ ಮೈಸೂರಿನ ಕೊರಿಯರ್ ಸಂಸ್ಥೆಯೊಂದು ಅನುರವರಿಗೆ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು. ಈಗ ಅನುರವರು ಮೈಸೂರಿನ ಮಂಡಿ ಮೊಹಲ್ಲಾದ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಕೊರಿಯರ್ ನೀಡುತ್ತಿದ್ದಾರೆ. ಅನುರವರ ಈ ಸ್ವಾವಲಂಬನೆ ಜೀವನಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ತಾಯಿಗೋಸ್ಕರ ಮಾಡಿದ್ದ ಸಾಲ ತೀರಿಸಲು ಈ ಕೆಲಸ ಮಾಡುತ್ತಿದ್ದೇನೆ. ನನ್ನ ಮಗನನ್ನು ಜೊತೆಗೆ ಕರೆದುಕೊಂಡು ಹೋಗಲು ಕೊರಿಯರ್ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ನಾನು ಈ ಕೆಲಸ ಮಾಡಿಟ್ಟಿರೋದು ಖುಷಿ ತಂದು ಕೊಟ್ಟಿದೆ. ಎಲ್ಲರು ಕೂಡ ನಮಗೆ ಸಹಕಾರ ನೀಡುತ್ತಿದ್ದಾರೆ. ನನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಆತನಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡೋದು ನನ್ನ ಜವಾಬ್ದಾರಿ ಅಂತಾರೆ ಕೊರಿಯರ್ ಮಹಿಳೆ ಅನು.
ಅನು ಅನ್ನುವಂತಹ ಹೆಣ್ಣು ಮಗಳು ತನ್ನ ಮಗುವನ್ನು ಜೊತೇಲಿ ಕಟ್ಟಿಕೊಂಡು ಪ್ರತಿನಿತ್ಯ ಮನೆ ಮನೆಗೆ ತೆರಳಿ ಕೊರಿಯರ್ ಹಾಕುತ್ತಾರೆ. ಈಕೆಯ ಸ್ವಾವಲಂಭನೆ ಬದುಕು ಇತರರಿಗೆ ಮಾದರಿ. ಇಂತಹ ಹೆಣ್ಣು ಮಕ್ಕಳಿಗೆ ನಾವು ಸಹಕಾರ ನೀಡಬೇಕು. ಎಲ್ಲಾ ಇದ್ದು ಏನು ಸಾಧನೆ ಮಾಡಲಿಕ್ಕೆ ಆಗದ ಈ ಸಮಾಜದಲ್ಲಿ ಅನು ಅಂತಹ ಹೆಣ್ಣು ಮಕ್ಕಳ ಜೊತೆ ಸಮಾಜ ಬೆಂಗಾವಲಾಗಿ ನಿಲ್ಲಬೇಕಿದೆ ಅಂತಾರೆ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್.
ಒಟ್ಟಾರೆ ಹೇಳೋದಾದರೆ ಮಳೆ ಗಾಳಿ ಬಿಸಿಲು ಎನ್ನದೆ ಬೆನ್ನ ಹಿಂದೆ ಭಾರ ಹೊತ್ತು ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂತ ಮನೆ ಮನೆಗೆ ತೆರಳಿ ಕೊರಿಯರ್ ಹಾಕುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಅನುರವರಿಗೆ ನಮ್ಮದೊಂದು ಸಲ್ಯೂಟ್.
Comments