ಹಿಟ್ಟು ಇಕ್ಕಿದವಳನ್ನೆ ಹಿಡ್ಕೊಂಡು ಹೋದ ಅನ್ನೋ ಮಾತು ಈತನಿಗೆ ಅಕ್ಷರಶಃ ಅನ್ವಯವಾಗಿಬಿಡುತ್ತೆ...
- Prajanudi Digital
- May 24
- 2 min read
ಸ್ನೇಹಿತ ಅಂತಾ ಮನೆಗೆ ಬಿಟ್ಕೊಂಡ್ರೆ ಸ್ನೇಹಿತರ ಪತ್ನಿಯರನ್ನೇ ಬಲೆಗೆ ಬಿಳಿಕೊಳ್ತಿದ್ದ ಈ ಅಸಾಮಿ. ಇದೀಗ ಆತ ಅನೈತಿಕ ಸಂಬಂಧ ಹೊದ್ದಿದಾಕೆ ಹಾಕಿದ ಸ್ಕೇಚ್ ಗೆ ಮಸಣ ಸೇರಿದ್ದಾನೆ. ಪ್ರೇಂಡ್ ಶೀಪ್ ನಲ್ಲಿ ಮಾಡಬಾರದನ್ನ ಮಾಡ್ತಿದ್ದವ ಇದೀಗ ಆಕೆ ಮಾಡಿದ್ದ ಆ ಒಂದು ಪೋನ್ ಕಾಲ್ ನಂಬಿ ಹೋಗಿ ಸಾವಿವ ಮನೆ ಕದ ತಟ್ಟಿದ್ದಾನೆ.
ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ...
ಪ್ರೇಂಡ್ಶಿಪ್ ಅಂತಾ ಮನೆ ಹೋಗ್ತಿದ್ದ. ಹೋದವ ಪ್ರೇಂಡ್ಸ್ ಹೆಂಡ್ತಿರನ್ನ ಬುಟ್ಟಿಗೆ ಹಾಕೊಂಡು ಮಜಾ ಮಾಡ್ತೀದ್ದ. ಇದೀಗ ಇಬ್ಬರೂ ಜೊತೆಗಿದ್ದ ಸ್ನೇಹಿತರೇ ಹೆಣ್ಣಿನ ಮೂಲಕ ಹಾಕಿದ್ದ ಸ್ಕೇಚ್ ಗೆ ಸಾವಿನ ಮನೆ ಸೇರಿದ್ದಾನೆ. ಎಸ್ ಅಂದಹಾಗೆ ಈ ಪೋಟೋದಲ್ಲಿರೋ ಇತ ಸಂಪತ್. ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ. ಈಕೆ ಸಂಗೀತ. ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ಬಿ.ಎಂ.ಕಿರಣ್ ಪತ್ನಿ. ನೋಡೋಕೆ ಸುಂದರವಾಗಿರೋ ಈ ಸಂಗೀತ ಜೊತೆಗೆ ಈ ಸಂಪತ್ ವೀಣೆ ನುಡಿಸೋಕೆ ಹೋಗಿ ಬಾರದ ಲೋಕಕ್ಕೆ ಹೋಗಿದ್ದಾನೆ. ಇದೇ ಮೇ 10ರಂದು ನಾಪತ್ತೆಯಾಗಿದ್ದ ಸೋಮವಾರಪೇಟೆಯ ನಿವಾಸಿ ಸಂಪತ್ ನಾಯರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ಕೊಲೆಯಾದ ಸಂಪತ್ ಸ್ನೇಹಿತರೇ ಎಂಬುದು ಗಮನಾರ್ಹ.
ಕಿರಣ್, ಗಣಪತಿ, ಸಂಪತ್ ನಾಯರ್ ಸ್ನೇಹಿತರಾಗಿದ್ದು, ಮೂವರು, ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು ಎನ್ನಲಾಗಿದೆ. ಪದೇ ಪದೇ ಸಂಪತ್ ಕಿರಣ್ ಮನೆಗೆ ಹೊಗ್ತಿದ್ದ ಹೀಗಾಗಿ ಕಿರಣ್ ಪತ್ನಿ ಸಂಗೀತಾಳ ಜೊತೆ ಸಲುಗೆ ಬೆಳೆಸಿಕೊಂಡಿದ್ದ, ಆರಂಭದಲ್ಲಿ ಇಬ್ಬರ ನಡುವೆ ಇದ್ದ ಸಲುಗೆ ಅನೈತಿಕ ಸಂಬಂಧವಾಗಿ ಮಾರ್ಪಟ್ಟಿತ್ತು. ಅದಷ್ಟೇ ಅಲ್ದೆ ಈ ಸಂಪತ್ ಸಂಗೀತಾಳ ಜೊತೆಗೆ ಇದ್ದ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಇದ್ದ ಅನೈತಿಕ ಸಂಬಂಧ ಸಂಗೀತಾಳ ಪತಿ ಕಿರಣ್ ಗೆ ಗೊತ್ತಾಗಿ ಗಲಾಟೆ ಮಾಡಿದ್ದ. ಗಲಾಟೆ ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ರು.
ಇನ್ನೂ, ಸಂಗೀತಾಳ ಖಾಸಗಿ ಕ್ಷಣಗಳ ವಿಡಿಯೋ ವಿಡಿಯೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ, ಇದ್ರಿಂದ ಆರೋಪಿ ಕಿರಣ್, ಸಂಗೀತ, ಇದಲ್ಲದೆ ಮತ್ತೊಬ್ಬ ಆರೋಪಿ ಪಿ.ಎಂ. ಗಣಪತಿ ಮೂವರು ಸೇರಿ ಸಂಚು ರೂಪಿಸಿದ್ದರು. ಪಿ.ಎಂ.ಗಣಪತಿ ಕುಟುಂಬದಲ್ಲೂ ಈ ಮೃತ ಸಂಪತ್ ತನ್ನ ಕೀಳು ಬುದ್ದಿ ತೋರಿಸಿದ್ದನಂತೆ. ಹೀಗಾಗಿ ಮೂವರು ಈ ಸಂಪತ್ ಕಥೆ ಮುಗಿಸೋಕೆ ಪ್ಲಾನ್ ರೂಪಿಸಿದ್ದರು.
ಅದಕ್ಕಾಗಿ ಮೇ 9ರಂದು ಸಂಪತ್ ನಾಯರ್‌ನನ್ನ ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು. ಡೌಟ್ ಬರುತ್ತೆ ಅಂತಾ ಈ ಸಂಪತ್ ಸ್ನೇಹಿತ ಕಾರು ಪಡೆದು ಸಂಗೀತಾಳ ಮನೆಗೆ ಬಂದಿದ್ದ. ಸಂಪತ್ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನ ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು ಆರೋಪಿ ಸಂಗೀತಾಳನ್ನ ಸೋಮವಾರ ಪೇಟೆಯಲ್ಲಿ ಬಂಧಿಸಲಾಗಿದೆ.
ಒಟ್ಟಿನಲ್ಲಿ ಮೃತ ಸಂಪತ್ ಇಟ್ಕೊಂಡಿದ್ದ ಅನೈತಿಕ ಸಂಬಂಧವೇ ಆತನಿಗೆ ಮುಳುವಾಗಿದೆ. ಸ್ನೇಹಿತ ಅಂತಾ ಮನೆಗೆ ಬಿಟ್ಕೊಂಡ್ರೆ ತನ್ನ ಕೀಳು ಬುದ್ದಿ ತೋರಿಸಿದವ ಮಸಣ ಸೇರಿದ್ರೆ, ಇತ್ತ ಸಂಪತ್ ಕೊಂದ ಸ್ನೇಹಿತರು ಜೈಲು ಸೇರಿದ್ದಾರೆ.

Comments