||ಸ್ಥಳೀಯ ಚುನಾವಣೆ ತಯಾರಿಗಾಗಿ ಜೂನ್ ತಿಂಗಳಿಂದ ರಾಜ್ಯ ಪ್ರವಾಸ ಮಾಡುತ್ತೇವೆ ಎಂದ ನಿಖಿಲ್|||| ಬೇಸಿಗೆ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ನಿಖಿಲ್ ಕುಮಾರಸ್ವಾಮಿ ಮನವಿ||
- Prajanudi Digital
- May 13
- 1 min read

ಮಂಡ್ಯ:ಜೂನ್ ತಿಂಗಳಿಂದ ರಾಜ್ಯಾದ್ಯಂತ ಪ್ರವಾಸದ ಬಗ್ಗೆ ಚರ್ಚಿಸಿದ್ದೇವೆ, ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಾಯತ್ವದಲ್ಲಿ ಪಕ್ಷ ಸಂಘಟನೆ ಮತ್ತು ಸ್ಥಳೀಯ ಚುನಾವಣೆಗಳ ತಯಾರಿಗಾಗಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು;
ಕುಮಾರಣ್ಣ ಅವರು ಆರೋಗ್ಯ ವಾಗಿದ್ದು,ಯಾರು ಆತಂಕ ಪಡುವುದು ಬೇಡ.
ಮೇ 14ರಂದು ಕ್ಯಾಬಿನೆಟ್ ಸಭೆಯಲ್ಲಿ ಭಾಗಿಯಾಗುತ್ತಾರೆ. ಅವರ ತಂದೆ ತಾಯಿಯ ಕೆಲಸ ಕಾರ್ಯ ಶ್ರೀರಕ್ಷೆಯಾಗಿ ಆರೋಗ್ಯವಾಗಿದ್ದರೆ.ನಾಡಿನ ಜನತೆಯ ಪ್ರೀತಿ, ಪ್ರಾರ್ಥನೆಗೆ ಕುಮಾರಸ್ವಾಮಿ ಚೆನ್ನಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚನ್ನಪಟ್ಟಣದಲ್ಲಿ ಕುಮಾರಣ್ಣ ಸೈಟ್ ಕೊಡೋದಾಗಿ ಜನರಿಂದ 5 ಸಾವಿರ ಕಟ್ಟಿಸಿಕೊಂಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು
ರಾಜ್ಯದ ಉಪ ಮುಖ್ಯಮಂತ್ರಿಗಳು ನಮ್ಮ ಬಗ್ಗೆ ದೂರುವ ಕೆಲಸ ಮಾಡಿದ್ದಾರೆ.ರಾಮನಗರ ಜಿಲ್ಲೆಯಲ್ಲಿ ದೇವೇಗೌಡರ ಹಾಗೂ ಕುಮಾರಣ್ಣ ಅವರು ಅಭಿವೃದ್ಧಿಗೆ ಶ್ರಮಿಸಿದ ಬಗ್ಗೆ ಜಿಲ್ಲೆಯ ಜನರು ಗಮನಿಸಿದ್ದಾರೆ.
ರಾಜಕೀಯವಾಗಿ ಮಾತನಾಡಲಿ. ಐದು ಸಾವಿರ ಯಾವಾಗ ಕಟ್ಟಿಸಿಕೊಂಡಿದ್ರು? ಇದರ ಬಗ್ಗೆ ಗೊತ್ತಿಲ್ಲ ಎಂದರು.
ಪಾಕ್ ಗೆ ತಕ್ಕ ಉತ್ತರ ಕೊಟ್ಟ ಭಾರತೀಯ ಸೇನೆ
ಭಾರತ-ಪಾಕಿಸ್ತಾನ ಯುದ್ದ ಕದನ ವಿರಾಮ ವಿಚಾರಕ್ಕೆ ಮಾತನಾಡಿದ ಅವರು; ಯಾರು ಯಾರ ಮಾತನ್ನ ಕೇಳುವ ಪ್ರಶ್ನೆ ಇಲ್ಲ.ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ನೋಡಿದ್ದೇವೆ. ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸುವ ಕೆಲಸ ಮಾಡಿದ್ದಾರೆ. ಅಪರೆಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕ್ ಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು.
ಮಕ್ಕಳ ಭವಿಷ್ಯ ರೂಪಿಸಲು ಬೇಸಿಗೆ ಶಿಬಿರ
ಇದಕ್ಕೂ ಮುನ್ನ ಮಂಡ್ಯದ
ಸರ್.ಎಂ.ವಿಶ್ವೇಶ್ವರಯ್ಯ ಒಳಾಂ ಗಣ ಕ್ರೀಡಾಂಗಣದಲ್ಲಿ ಏರ್ಪಡಿಸ ಲಾಗಿದ್ದ "ಬೇಸಿಗೆ ಶಿಬಿರ" ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮೊದಲನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಭೆಯಲ್ಲಿ ಮಾತನಾಡಿದ ಅವರು,ಮಕ್ಕಳು ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಉದ್ದೇಶದಿಂದ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಬೇಸಿಗೆ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅವರು ಮನವಿ ಮಾಡಿದರು.
ಇದೆ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಭಾರತದ.
ವೀರಯೋಧರಿಗೆ ನಮನಗಳು ಸಲ್ಲಿಸಲಾಯಿತು.ತಾಯ್ನಾಡಿನ ನೆಲದ ರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದ ವೀರಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನ ಸದಾ ಸ್ಮರಣೀಯ ಎಂದು ಮಕ್ಕಳಿಗೆ ತಿಳಿಸಿದರು.
ನಂತರ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ.ಕೆ.ಅನ್ನದಾನಿ, ಮನ್ ಮುಲ್ ಮಾಜಿ ಅಧ್ಯಕ್ಷ
ಬಿ.ಆರ್.ರಾಮಚಂದ್ರ,ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್,ದಿಶಾ ಸಮಿತಿ ಸದಸ್ಯ ಸಾತನೂರು ಜಯರಾಮ್ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Comments