ಬೆಂಗಳೂರಿನ ಕರಗ ರೀತಿಯಲ್ಲೇ ಪ್ರಖ್ಯಾತಿ ಹೊಂದಿರುವ ಮೈಸೂರು ಕರಗ ಮಹೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಈ ಭಾರಿಯ ಮೈಸೂರು ಕರಗ ಮಹೋತ್ಸವ ಏಪ್ರಿಲ್ 29ರಿಂದ ಮೇ 4ರವರೆಗೆ ನಡೆಯಲಿದೆ.ನಜರ್ ಬಾದ್ ಇಟ್ಟಿಗೆಗೂಡಿನಲ್ಲಿರುವ ಶ್ರೀ ಮಾರಮ್ಮ ದೇವಸ್ಥಾನದ ಕರಗ ಮಹೋತ್ಸವಕ್ಕೆ ಶತಮಾನದ ಇತಿಹಾಸವಿದೆ. ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗವು ಆವರಿಸಿ ನಿತ್ಯ ಹತ್ತಾರು ಮಂದಿ ಸಾವನ್ನಪ್ಪಲು ಪ್ರಾರಂಭಿಸಿದರು.
ನಜರ್ ಬಾದ್ ಇಟ್ಟಿಗೆಗೂಡಿನಲ್ಲಿರುವ ಶ್ರೀ ಮಾರಮ್ಮ ದೇವಸ್ಥಾನದ ಕರಗ ಮಹೋತ್ಸವಕ್ಕೆ ಶತಮಾನದ ಇತಿಹಾಸವಿದೆ. ಶತಮಾನಗಳ ಹಿಂದೆ ಊರನ್ನು ಸಾಂಕ್ರಾಮಿಕ ರೋಗವು ಆವರಿಸಿ ನಿತ್ಯ ಹತ್ತಾರು ಮಂದಿ ಸಾವನ್ನಪ್ಪಲು ಪ್ರಾರಂಭಿಸಿದರು.ಮೈಸೂರು ಕರಗ ಮಹೋತ್ಸವಕ್ಕೆ ತಿಂಗಳುಗಳಿರುವಾಗಲೇ ಯುಗಾದಿಯ ಅಮಾವಾಸ್ಯೆ ನಂತರ ಶ್ರೀ ಮಾರಿಯಮ್ಮ ದೇವಿಗೆ ಊರಿನ ಸಕಲರು ಅರಿಶಿನ, ನೀರಿನ ಅಭಿಷೇಕ ನೆರವೇರಿಸಿ ದೇವಿಗೆ ತಂಪೆರೆದು ಸಂಜೆ ದೇವಿಯ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಸಾಂಪ್ರದಾಯಿಕ ವಿಭೂತಿ ಪೂಜೆ ನೆರವೇರಿಸಿ ಎಲ್ಲರಿಗೂ ವಿಭೂತಿ ಪ್ರಸಾದ ವಿನಿಯೋಗದೊಂದಿಗೆ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ.ಕರಗವು ಇಟ್ಟಿಗೆಗೂಡಿನ ಎಲ್ಲಾ ಬಿದಿಗಳಲ್ಲೂ ಸಂಚರಿಸಿ ಪೂಜೆ ಸ್ವೀಕರಿಸಲು ಬಂದಾಗ ಸಾರ್ವಜನಿಕರು ತಮ್ಮ ಮನೆಯಲ್ಲಿ ಕೂರಿಸಿ ದೇವಿಗೆ ಹಾಲು, ಮಜ್ಜಿಗೆ, ಪಾನಕ, ಕೋಸಂಬರಿ ಹೀಗೆ ನಾನಾ ವಿದದ ಪ್ರಸಾದಗಳನ್ನು ನೈವೇದ್ಯ ಮಾಡಿ ಪೂಜಿಸುತ್ತಾರೆ.ಹರಕೆ ಇರುವ ಎಲ್ಲರ ಮನೆಯಲ್ಲೂ ಕರಗ ಇಳಿಸಲಾಗುತ್ತದೆ.
Comments