ಕಾನ್ಸ್ಟೇಬಲ್ ಪ್ರೇಮ ಪ್ರಸಂಗ...
- Prajanudi Digital
- May 22
- 2 min read

ಆತ ಪೊಲೀಸ್ ಪೇದೆ ಮಾವನ ಮಗಳನ್ನ ಪ್ರೀತಿಸಿ ಮದಯವೆಯಾಗಿದ್ದ. ಆದರೆ ಪರ ಸ್ತ್ರೀ ಮೋಹಕ್ಕೆ ಬಿದ್ದ ಪಾಪಿ ಪೇದೆ ಪತ್ನಿಯನ್ನ ಗರ್ಭಿಣಿ ಮಾಡಿ ಇದೀಗ ಮಗು ತೆಗೆಸು ನೀನು ನನಗೆ ಬೇಡ ಡೈವರ್ಸ್ ಕೊಡು ಅಂತಿದ್ದಾನೆ. ಪಾಪಿ ಪತಿರಾಯನ ಮೋಸದ ಬಲೆಗೆ ಬಿದ್ದ 5 ತಿಂಗಳ ಗರ್ಭೀಣಿ ಇದೀದ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾಳೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ...
ಪೊಲೀಸ್ ಠಾಣೆಯ ಮುಂದೆ ನ್ಯಾಯಕ್ಕೆ ಗರ್ಭೀಣಿಯ ಮಹಿಳೆಯ ಅಳಲು. ಮತ್ತೊಂದು ಕಡೆ ಪತಿಗೆ ಪರ ಸ್ತ್ರೀ ಯೇ ಬೇಕು ಅನ್ನುವಂತೆ ಗರ್ಭಿಣಿಯನ್ನ ಮನೆಗೆ ಬಿಟ್ಟು ಎಸ್ಕೇಪ್ ಆಗಿರುವ ಪಾಪಿ ಪೇದೆ. ಎಸ್ ಅಂದ ಹಾಗೇ ಈಕೆ ಹೆಸರು ಪವಿತ್ರ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರಾಂಪುರದ ಗ್ರಾಮದ ನಿವಾಸಿ. ಈಕೆಗೆ ಇದೇ ಗ್ರಾಮದ ಪವಿತ್ರಳ ಸೋದರ ಮಾವ ಕೋಲಾರ ಜಿಲ್ಲೆಯಲ್ಲಿ ಡಿಎಆರ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ಕೆಂಡಗಣ್ಣಸ್ವಾಮಿ ಜೊತೆ ಮದುವೆಯಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮೂರು ವರ್ಷಗಳ ಕಾಲ ಮನೆ ಕಟ್ಟುವ ನೆಪವೊಡಿ ಮದುವೆಯನ್ನ ಡಿಲೇ ಮಾಡಿದ ಪೇದೆ ಮೂರು ವರ್ಷಗಳ ಬಳಿಕ ಸೋದರ ಮಾವನ ಮಗಳು ಪವಿತ್ರ ಜೊತೆ ಹಸಮಣೆ ಏರಿದ್ದ. ಬಳಿಕ ಆಕೆಯನ್ನ ಬೆಂಗಳೂರಿಗೆ ಮನೆ ಮಾಡಿ ಕರೆದೊಯ್ದು, ಸಂಸಾರ ಶುರು ಮಾಡಿದ್ದಾಗಲೇ ಗೊತ್ತಗಿದ್ದು ಆತನ ಅಸಲಿ ಬಣ್ಣ. .5 ತಿಂಗಳು ಗರ್ಭಿಣಿಯಾದ ಬಳಿಕ ನೀನು ನನಗೆ ಬೇಡ ಡೈವರ್ಸ್ ಕೊಡು ಅಂಥ ಒತ್ತಡ ಹೇರಲು ಶುರುಮಾಡಿದ್ದಾನೆ. ಮದುವೆಯಾದ 5 ತಿಂಗಳ ಬಳಿಕವೇ ಪತ್ನಿ ಪವಿತ್ರಗೆ ಪತಿಗೆ ಉಡುಪಿ ಮೂಲದ ಯುವತಿ ಜೊತೆ ಅಫೇರ್ ಇರುವುರು ಗೊತ್ತಾಗಿದೆ. ಬಳಿಕ ಆಕೆಗೆ ಕೆಂಡಗಣ್ಣಸ್ವಾಮಿ ಮಾನಸಿಕವಾಗಿ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಇದ್ದರೆ ಮೂವರು ಒಟ್ಟಿಗೆ ಇರೋಣಾ. ಇಲ್ಲವಾದ್ರೆ ಮಗು ತೆಗೆಸಿ ಬೇರೆ ಮದುವೆಯಾಗು ಎಂದು ಪಾಪಿ ಕೆಂಡಗಣ್ಣಸ್ವಾಮಿ ಪೀಡಿಸಿದ್ದಾನೆ.

ಇನ್ನೂ ಸಂಬಂಧಿಯ ತಿಥಿ ಕಾರ್ಯ ಅಂಥ ಪತ್ನಿ ಪವಿತ್ರಳಾನ್ನ ತವರು ಮನೆಗೆ ತಂದು ಬಿಟ್ಟು ಹೋದ ಪೇದೆ ಕೆಂಡಗಣ್ಣಸ್ವಾಮಿ ಎಸ್ಕೇಪ್ ಆಗಿದ್ದಾನೆ. ಬೆಂಗಳೂರಿಗೆ ಹೋದ ಬಳಿಕ ವರಸೆ ಬದಲಾಯಿಸಿ ಪಾಪಿ ಕೆಂಡಗಣ್ಣಸ್ವಾಮಿ ಗ್ರಾಮಸ್ಥರ ನಡೆಸಿದ ರಾಜಿ ಪಂಚಾಯಿತಿಗೆ ಬಗ್ಗದೆ ನನಗೆ ಈಕೆ ಬೇಡ ಮಗು ತೆಗೆಸಿ ನಾನು ಆಕೆಗೆ ಪರಿಹಾರ ಕೊಡುತ್ತೇನೆ ಎಂದಿದ್ದಾನಂತೆ. ಇದರಿಂದ ಬೇಸತ್ತಿರುವ ಪೋಷಕರು ಹಾಗೂ ಸಂತ್ರಸ್ಥ ಮಹಿಳೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಈ ಸಂಬಂಧ ಪಾಪಿ ಪೇದೆ ವಿರುದ್ಧ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಒಟ್ಟಾರೆ ಪಾಪಿ ಪತಿ ಕೆಂಡಗಣ್ಣ ವಿರುದ್ಧ ಗರ್ಭಪಾತಕ್ಕೆ ಒತ್ತಾಯ, ಮಾನಸಿಕ ಕಿರುಕುಳ, ವರದಕ್ಷಣೆ ಕಿರುಕುಳ ಸೇರಿದಂತೆ ವಿವಿದ ಪ್ರಕರಣ ದಾಖಲಾಗಿದೆ. ಇನ್ನಾದ್ರು ಪೊಲೀಸ್ ಇಲಾಖೆ ತಮ್ಮ ಸಿಬ್ಬಂದಿಯ ವಿರುದ್ದವೇ ದಾಖಲಾಗಿರುವ ಕೇಸ್ ನಲ್ಲಿ ಪೊಲೀಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ನೊಂದ ಮಹಿಳೆಗೆ ನ್ಯಾಯ ಕೊಡಿಸುತ್ತಾರೆ ಕಾದು ನೋಡಬೇಕಿದೆ...
ಕ್ಯಾಮರಾಮ್ಯಾನ್ ಸಂಜಯ್ ಜೊತೆ ಅನಿಲ್ ರಾಜ್ ಎಸ್ ಎಂ ಸೋಸಲೆ ಪ್ರಜಾನುಡಿ ಮೈಸೂರು.
Comments