ಪಾಕಿಸ್ತಾನ ಒಳಗೆ ನುಗ್ಗಿ ಒಡೆಯಬೇಕು :ಸಚಿವ ಸಂತೋಷ್ ಲಾಡ್...
- Prajanudi Digital
- Apr 30
- 1 min read

ಮಂಗಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾಕೆ ಕೂಗುತ್ತಿದ್ದಾರೆ ಎಂಬುದಕ್ಕೆ ನೂರಾರು ಕಾರಣಗಳಿವೆ. ಅವರ ಮೇಲೂ ಆಗಿರುವ ಅತ್ಯಾಚಾರಗಳೇನು ಕಡಿಮೆಯೇ ನಾವು ಇದನ್ನು ಕೂಡ ನೋಡಬೇಕು ತಾನೇ. ಇಂತಹ ಘಟನೆಗಳು ಕರ್ನಾಟದಲ್ಲಿ ಮಾತ್ರವಲ್ಲ ದೇಶದ ನಾನಾ ಭಾಗಗಳಲ್ಲೂ ನಡೆದಿವೆ. ಅದು ಯಾಕೆ ನಡೆಯುತ್ತಿದೆ ಎಂಬುದಕ್ಕೆ ನಾನು ಹೊಣೆಗಾರನಲ್ಲ. ಆಗಾಗಿ ಅದಕ್ಕೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ, ಈಗಂತ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರನ್ನ ನಾನು ಬೆಂಬಲಿಸುವುದಿಲ್ಲ. ನನ್ನ ಮನೆಯವರೇ ಆ ಕೂಗು ಕೂಗಿದ್ದರು ಅವರ ಮೇಲೆ ಕ್ರಮ ಆಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ಪ್ರಧಾನಿ ಗಯಾಬ್ ಎಂಬ ಟ್ವಿಟ್ ವಾಪಾಸ್ ಪಡೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಆ ವಿಚಾರ ನನಗೆ ಗೊತ್ತಿಲ್ಲ ಯಾರು ಯಾಕೆ ಮಾಡಿದರು ಯಾಕೆ ವಾಪಾಸ್ ತೆಗೆದುಕೊಂಡರು ಅನ್ನೋದು ಗೊತ್ತಿಲ್ಲ ಎಂದು ತಿಳಿಸಿದರು.

Comments