'ತಾಯಿ-ಮಗಳು ಶ್ರೀನಗರಕ್ಕೆ ತೆರಳಲು ಕಾಶ್ಮೀರಿ ಚಾಲಕನ ಸಹಾಯ: ಉಗ್ರರು ಸೇನಾ ಸಮವಸ್ತ್ರ ಧರಿಸಿದ್ದರಿಂದ ಮಿಲಿಟರಿ ಕವಾಯತು ಎಂದುಕೊಂಡಿದ್ದೆವು'
- Prajanudi Digital
- Apr 24
- 1 min read

ಬೆಂಗಳೂರು: ಕಣಿವೆ ರಾಜ್ಯದಲ್ಲಿ ನಡೆದ ನರಮೇಧದಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಹಲವು ಕರ್ನಾಟಕದ ಜನರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಗುಲ್ಮಾರ್ಗ್‌ನಲ್ಲಿ ಸಿಲುಕಿಕೊಂಡಿದ್ದ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವೆಲ್ಲರೂ ಪಹಲ್ಗಾಮ್‌ಗೆ ಹೊರಡಲು ಸಿದ್ಧರಾಗಿದ್ದಾಗ, ಸಂಬಂಧಿಕರೊಬ್ಬರು ನನಗೆ ಕರೆ ಮಾಡಿ ಅಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ನೀಡಿದರು, ಈ ವೇಳೆ ನಾವು ನಮ್ಮ ಚಾಲಕನನ್ನು ಮಾತ್ರ ಸಂಪರ್ಕಿಸಲು ಸಾಧ್ಯವಾಯಿತು, ಅವರು ಕೆಲವೇ ಗಂಟೆಗಳಲ್ಲಿ ಗುಲ್ಮಾರ್ಗ್‌ನಲ್ಲಿರುವ ನಮ್ಮ ಹೋಟೆಲ್‌ನಿಂದ ಶ್ರೀನಗರದಲ್ಲಿರುವ ಅವರ ನಿವಾಸಕ್ಕೆ ನಮ್ಮನ್ನು ಕರೆದೊಯ್ಯುವ ಮೂಲಕ ನಮ್ಮ ಸುರಕ್ಷಿತವಾಗಿರಿಸಿದರು" ಎಂದು ಅಂತರರಾಷ್ಟ್ರೀಯ ಬ್ಯಾಂಕಿನಲ್ಲಿ ಕೆಲಸ ಮಾಡುವ ಬೆಂಗಳೂರಿನ ಪ್ರವಾಸಿ ಪೂಜಾ ಮಾನೆ ವಿವರಿಸಿದ್ದಾರೆ.
ಪೂಜಾ ಅವರಂತೆಯೇ, ಮಂಗಳವಾರ ಮಧ್ಯಾಹ್ನ ನದಿಯ ದಡದಲ್ಲಿರುವ ಅನಂತ್‌ನಾಗ್ ಜಿಲ್ಲೆಯ ಸಣ್ಣ ಪಟ್ಟಣವಾದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ವರದಿಯಾದ ನಂತರ ಸುಮಾರು 200 ಕನ್ನಡಿಗರು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದರು.
Comments