Yatnal: ಬಸವ ಕಲ್ಯಾಣ ಮಸೀದಿ ನಮಗೆ ಕೊಡಬೇಕು, ನಾವು ಅಲ್ಲಿ ಅನುಭವ ಮಂಟಪ ಕಟ್ಟುತ್ತೀವಿ! ವಕ್ಫ್ ನೋಟಿಸ್‌ಗೆ ಯತ್ನಾಳ್ ತಿರುಗೇಟು
- Apr 8
- 2 min read
ಹುಬ್ಬಳ್ಳಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ (By Election) ರಂಗು ಜೋರಾಗಿದೆ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Yatnal) ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿರೋದು 90 ಪರ್ಸೆಂಟ್ ಸರ್ಕಾರ, ನಾನು ನಿನ್ನೆಯಿಂದ ಬೊಮ್ಮಾಯಿ (Bommayi) ಕ್ಷೇತ್ರದಲ್ಲಿ ಪ್ರಚಾರ ಮಾಡ್ತಾ ಇದೀನಿ.

ಬೊಮ್ಮಾಯಿ ನನಗೆ ಕರೆ ಮಾಡಿದ್ರು, ಹೀಗಾಗಿ ಭರತ್ ಬೊಮ್ಮಾಯಿ (Bharat Bommayi) ಪರ ಪ್ರಚಾರಕ್ಕೆ ಹೋಗಿದ್ದೆ, ಬಸವರಾಜ್ ಬೊಮ್ಮಾಯಿ ಬಹಳ ಕೆಲಸ ಮಾಡಿದ್ದಾರೆ ಎಂದರು.
ಬೊಮ್ಮಾಯಿ 13 ಸಾವಿರ ಮನೆಗಳನ್ನು ಕೊಟ್ಟಿದ್ದಾರೆ
ಬೊಮ್ಮಾಯಿ ಅವರು 13 ಸಾವಿರ ಮನೆಗಳನ್ನು ಕೊಟ್ಟಿದ್ದಾರೆ, ಕಾಂಗ್ರೆಸ್ ನವರು ಬೊಮ್ಮಾಯಿ ಏನ ಮಾಡಿದಾರೆ ಅಂತಾ ಕೇಳ್ತಾರೆ. ಜನ ಬೊಮ್ಮಾಯಿ ಏನ್ ಮಾಡಿದ್ದಾರೆ ಎಂದು ಕೇಳ್ತಾರೆ, ಭರತ್ ಬೊಮ್ಮಾಯಿ 50 ಸಾವಿರ ಮತಗಳಿಂದ ಗೆಲ್ತಾರೆ. ಡಿಸಿಎಂ ಕನಕಪುರಲ್ಲಿ ಏನ್ ಮಾಡಿದ್ದಾರೆ?, ಸಿದ್ದರಾಮಯ್ಯ ಯಾಕೆ ಸೋತ್ರು?, ಸಿದ್ದರಾಮಯ್ಯ ಮಗ ಕ್ಷೇತ್ರಕ್ಕೆ ಹೋದಾಗ ಜನ ಯಾಕೆ ವಿರೋಧ ಮಾಡಿದ್ರು?, ಜಮೀರ್ ಬೊಮ್ಮಾಯಿ ಒಂದು ಮನೆ ಕೊಟ್ಟಿಲ್ಲ ಅಂತಾರೆ. ಜನ ಕೂಗಿ ಹೇಳ್ತಾರೆ ಬೊಮ್ಮಾಯಿ ಮನೆ ಕೊಟ್ಟಿದ್ದಾರೆಂದು ಎಂದರು.
90% ಸರ್ಕಾರ ಇದೆ
ಗ್ಯಾರಂಟಿ ಹೆಸರಲ್ಲಿ ಹಗಲು ದರೋಡೆ ನಡೆದಿದೆ, ಇವತ್ತು 90 ಪರ್ಸೆಂಟ್ ಸರ್ಕಾರ ಇದೆ, 40 ಪರ್ಸೆಂಟ್ ಇದೆ ಎಂದು ಹೇಳಿದ್ರು, ಇವಾಗ ಮಾತಾಡೋಕೆ ನಾಚಿಕೆ ಇದೆಯಾ ಇವರಿಗೆ, ಕಾಂಗ್ರೆಸ್ ಗೆ ವಿರೋಧ ಮಾಡೋರು ಟಾರ್ಗೆಟ್ ಆಗಿದ್ದಾರೆ, ನನ್ನ ಮೇಲೆ 38 ಕೇಸ್ ಇವೆ. ಜಮೀರ್ ಅಹಮ್ಮದ್ ಮೇಲೆ ಮೊದಲು ಪ್ರಾಸಿಕ್ಯೂಷನ್ ಕೊಡಬೇಕು "ಅಲ್ಲಾ" ಎಲ್ಲಿ ಬರ್ತಾನೆ ಇಲ್ಲಿ?, ಜಮೀರ್ ಬಾಯಿಗೆ ಬಂದಂತೆ ಮಾತಾಡ್ತಿದ್ದಾನೆ ಎಂದರು.
ಬಸವಕಲ್ಯಾಣ ಮಸೀದಿ ಕೆಡವಿ ಅನುಭವ ಕಟ್ಟುತ್ತೇವೆ
ರೈತನಿಗೆ ಎನ್‌ಒಸಿ (NOC) ಕೊಡೋಕೆ ಒಂದು ತಿಂಗಳು ಬೇಕು, ರಾತ್ರೋ ರಾತ್ರಿ 13 ಸಾವಿರ ಎಕರೆ ವಕ್ಫ್ ಆಗಿದೆ, ಬಸವ ಕಲ್ಯಾಣದ ಮಸೀದಿ ನಮಗೆ ಕೊಡಬೇಕು, ನಾವು ಮಸೀದಿ ತಗೆದು ಹಾಕಿ ಅನುಭವ ಮಂಟಪ ಕಟ್ಟತ್ತೀವಿ, ಬಸವಕಲ್ಯಾಣ ಚಲೋ ಮಾಡ್ತೀವಿ. ಕೆಲವರು ಕಾವಿ ಹಾಕೋಂಡು ಸನಾತನ ಧರ್ಮ ಬೈತಾರೆ. ಇವರೆಲ್ಲ ಏಜೆಂಟರು ಎಂದು ಯತ್ನಾಳ್ ಕಿಡಿಕಾರಿದರು. ಇಡೀ ದೇಶವೇ ಹಿಂದೂ ರಾಷ್ಟ್ರ ಆಗಬೇಕು, ಇದಕ್ಕೇನು ಎಂಬಿ ಪಾಟೀಲ್ ರ ಏನ್ ಮಾಡ್ತಾರೆ, ಅವರು ಇಸ್ಲಾಂ ರಾಷ್ಟ್ರ ಮಾಡಬೇಕು ಅಂತಾರೆ, ನಾವು ಹಿಂದೂ ರಾಷ್ಟ್ರ ಮಾಡಬೇಕು ಅಂತೇವೆ. ನಮ್ಮ ಹೋರಾಟದಿಂದ ಎಂಬಿ ಪಾಟೀಲ್, ಸಿದ್ದರಾಮಯ್ಯ ನಡುಗಿದ್ದಾರೆ ಎಂದರು.
ವಕ್ಫ್ ಆಸ್ತಿ ಬೆಳೆಯೋಕೆ ಇದೇನು ಗಿಡಾನ?
ರಾಜ್ಯದಲ್ಲಿ ವಕ್ಫ್ ಆಸ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಇದೇನು ಬೆಳೆಯೋದಕ್ಕೆ ಗಿಡವಾ? ಎಂದು ಅವರು ಪ್ರಶ್ನಿಸಿದರು. 2019 ರಲ್ಲಿ ಇಡೀ ದೇಶದಲ್ಲಿ 5 ಲಕ್ಷ 81 ಸಾವಿರ ಎಕರೆ ವಕ್ಫ್ ಆಸ್ತಿ ಇದೆ ಎಂದು ಹೇಳಿದ್ರು
ಇದೀಗ ಕಾನೂನು ಮಂತ್ರಿಗಳು ಹೇಳ್ತಾರೆ ಒಂಬತ್ತುವರೆ ಲಕ್ಷ ಎಕರೆ ಅಂತ, ಕಾನೂನು ತಿದ್ದುಪಡಿ ಮಾಡುವ ಮುಂಚೆ ಸಿದ್ಧರಾಮಯ್ಯ ಹಾಗೂ ಜಮೀರ್ ರಾಜ್ಯದಲ್ಲಿ ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ, ಅದಕ್ಕೆ ಅವಕಾಶ ನೀಡಲ್ಲ, ಯಾವುದೇ ಪರುಸ್ಥಿತಿಯಲ್ಲೂ ನಾವು ಈ ತಿದ್ದುಪಡಿ ಮಾಡೇ ಮಾಡುತ್ತೇವೆ ಎಂದರು.
ಡಿಕೆಶಿ ಒಬ್ಬ ದೊಡ್ಡ ನಾಟಕ ಕಂಪನಿ
JPC ನಾಟಕ ಕಂಪನಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರನೇ ಒಬ್ಬ ನಾಟಕ ಕಂಪನಿ, ತಿಹಾರ ಜೈಲಿಗೆ ಹೋದಾಗ ಅನಾರೋಗ್ಯ ವಿಚಾರವಾಗಿ ನಾಟಕವಾಡಿದ್ದ, ಈಗ ಎಗರಾಡಿ ಭಾಷಣ ಮಾಡುತ್ತಿದ್ದಾನೆ, JPC ಅಧ್ಯಕ್ಷರು ಸರ್ಕಾರವನ್ನ ಯಾವುದೇ ರೀತಿ ದುರುಪಯೋಗ ಮಾಡಿಲ್ಲ, ಬೇಕಾಬಿಟ್ಟಿಯಾಗಿ ನೋಟೀಸ್ ಕೊಡ್ತಾರೆ, ದೇವಸ್ಥಾನಗಳನ್ನೇ ವಕ್ಫ್ ಆಸ್ತಿ ಅಂತಾರೆ ನಾಚಿಕೆ ಆಗಬೇಕು ಎಂದರು.
ಕರ್ನಾಟಕವನ್ನು ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ
ಹಾವೇರಿ ರೈತನ ವಿಚಾರದಲ್ಲಿ ಟ್ವಿಸ್ಟ್ ಮಾಡಿದ್ದಾರೆ, ಎಲ್ಲವೂ ಶೀಘ್ರವೇ ಹೊರಬರಲಿದೆ, ಈವರೆಗೂ ಯಾರಿಗೆ ನೀಡಿರುವ ನೋಟೀಸ್ ವಾಪಸ್ ಪಡೆದಿದ್ದಾರೆ. ಕರ್ನಾಟಕವನ್ನ ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ, ನಾವು ಉಪಚುನಾವಣೆ ಉದ್ದೇಶದಿಂದ ಹೋರಾಟ ಮಾಡುತ್ತಿಲ್ಲ. ಚುನಾವಣೆಯಲ್ಲಿ ನಾವು ಸೋತರೂ ಚಿಂತೆ ಇಲ್ಲ, ಗೆದ್ದರೆ ನಾವೇನು ಅಧಿಕಾರಕ್ಕೆ ಬರಲ್ಲ. ಹೀಗಾಗಿ ಚುನಾವಣೆಯೇ ನಮಗೆ ಹೋರಾಟಕ್ಕೆ ಕಾರಣವಲ್ಲ. ವಕ್ಫ್ ವಿಚಾರವಾಗಿ ನಮ್ಮ ಹೋರಾಟ ನಿರಂತರವಾಗಿರುತ್ತೆ ಎಂದರು.
(ವರದಿ: ಶಿವರಾಮ ಅಸುಂಡಿ, ನ್ಯೂಸ್18 ಕನ್ನಡ, ಹುಬ್ಬಳ್ಳಿ)

Comments