top of page

ಆಸ್ಟ್ರೇಲಿಯಾ ಸರಣಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಅಶ್ವಿನ್ ಭವಿಷ್ಯ ನಿರ್ಧಾರ?

  • Apr 8
  • 2 min read

ಬಿಸಿಸಿಐ ನ ಮೂಲಗಳೇ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಮುಂಬರುವ WTC ವೇಳೆಗೆ ತಂಡಕ್ಕೆ ಹೊಸರೂಪುರೇಷೆ ನೀಡುವ ಚಿಂತನೆಯಲ್ಲಿ ತೊಡಗಿದೆ.


ree









ತವರು ನೆಲದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಅಂತರದಿಂದ ಪರಾಭವಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ (BCCI) ತಂಡದ ಕೆಲವು ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಶೀಘ್ರವೇ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಬಿಸಿಸಿಐ ನ ಮೂಲಗಳೇ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಮುಂಬರುವ WTC ವೇಳೆಗೆ ತಂಡಕ್ಕೆ ಹೊಸರೂಪುರೇಷೆ ನೀಡುವ ಚಿಂತನೆಯಲ್ಲಿ ತೊಡಗಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡದ ಹಿರಿಯ ಆಟಗಾರರಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ನಿವೃತ್ತಿಯ ಹಂತದಲ್ಲಿರುವ ಈ ಆಟಗಾರರ ಪೈಕಿ ಕನಿಷ್ಟ ಇಬ್ಬರಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಕೊನೆಯ ಟೆಸ್ಟ್ ಸರಣಿಯಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಈ ಮಾಹಿತಿಯನ್ನಾಧರಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, ನೋಡಿ, ನಾವು ಅಷ್ಟು ದೂರದವರೆಗೆ ಯೋಚನೆ ಮಾಡಬಹುದೆಂದು ನನಗೆ ತೋರುತ್ತಿಲ್ಲ, ನಮ್ಮ ಮುಂದಿನ ಗುರಿ ಏನಿದ್ದರೂ ಅದು ಆಸ್ಟ್ರೇಲಿಯಾ ವಿರುದ್ಧದ ಸರಣಿಯಷ್ಟೇ ಎಂದು ಹೇಳಿದ್ದಾರೆ.

ಅವರ ನಾಯಕತ್ವದಲ್ಲಿ ಸೀಮಿತ ಸಮಯ ಉಳಿದಿದ್ದು, ಭಾರತದ ಟೆಸ್ಟ್ ಭವಿಷ್ಯದ ಬಗ್ಗೆ ಅವರ ಆಲೋಚನೆಗಳನ್ನು ಕೇಳಿದಾಗ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, "ನಾನು ಆಸ್ಟ್ರೇಲಿಯಾ ಸರಣಿಯ ಆಚೆಗೆ ನೋಡುವುದಿಲ್ಲ. ಆಸ್ಟ್ರೇಲಿಯಾ ಸರಣಿ ನಮಗೆ ಈಗ ಬಹಳ ಮುಖ್ಯವಾಗಿದೆ. ಸರಣಿ ನಂತರ ಏನಾಗುತ್ತದೆ ಎಂದು ಯೋಚಿಸುವ ಬದಲು ನಾವು ಪ್ರಯತ್ನಿಸುತ್ತೇವೆ ಮತ್ತು ಗಮನಹರಿಸುತ್ತೇವೆ" ಎಂದಷ್ಟೇ ಹೇಳಿದ್ದಾರೆ.

ಹಿರಿಯ ಆಟಗಾರರು ಹೆಚ್ಚಿರುವ ತಂಡದ ಮುಂದಿನ ದಾರಿಯ ಬಗ್ಗೆ ಬಿಸಿಸಿಐ ಪ್ರಮುಖರು ಮತ್ತು ತಂಡದ ಆಯ್ಕೆ ವಿಭಾಗದ ​​ಅಧ್ಯಕ್ಷ ಅಜಿತ್ ಅಗರ್ಕರ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ನಡುವೆ ಅನೌಪಚಾರಿಕ ಚರ್ಚೆ ನಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.


"ನಿಸ್ಸಂಶಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ತಂಡ ನವೆಂಬರ್ 10 ರಂದು ಆಸ್ಟ್ರೇಲಿಯಾಕ್ಕೆ ಹೊರಡುವುದರಿಂದ ಈ ಚರ್ಚೆ ಅನೌಪಚಾರಿಕ ಸ್ವರೂಪದ್ದಾಗಿರಬಹುದು. ಆದರೆ ಇದು ಒಂದು ದೊಡ್ಡ ಸೋಲನ್ನು ಹೊಂದಿದೆ. ಆಸ್ಟ್ರೇಲಿಯಾ ಸರಣಿ ಶೀಘ್ರವೇ ನಡೆಯಲಿದ್ದು, ತಂಡವನ್ನು ಈಗಾಗಲೇ ಘೋಷಿಸಿರುವುದರಿಂದ, ತಕ್ಷಣಕ್ಕೆ ಯಾವ ಬದಲಾವಣೆಯೂ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

"ಆದರೆ ಭಾರತ ಇಂಗ್ಲೆಂಡ್‌ನಲ್ಲಿ WTC ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ, ನಂತರದ 5 ಟೆಸ್ಟ್‌ಗಳ ಸರಣಿಗಾಗಿ ಎಲ್ಲಾ ನಾಲ್ವರು ಸೂಪರ್ ಸೀನಿಯರ್‌ ಗಳು ಬ್ರಿಟನ್ ಗೆ ತೆರಳುವ ಸಾಧ್ಯತೆ ಇರುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. ಯಾವುದೇ ಸಂದರ್ಭದಲ್ಲಿ, ನಾಲ್ವರಿಗೂ ಅಂತಿಮ ಟೆಸ್ಟ್ ಸರಣಿ ತವರು ನೆಲದಲ್ಲಿಯೇ ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

2011ರಲ್ಲಿ ಏಕಾಏಕಿ ಹಳೆಯ ತಂಡ ಹೊರಗೆ ಉಳಿಯುವಂತಾದ ಸಂದರ್ಭ ಪುನರಾವರ್ತನೆಯಾಗದಂತೆ ಈ ಬಾರಿ ಬಿಸಿಸಿಐ ಎಚ್ಚರಿಕೆ ವಹಿಸಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಆಯ್ಕೆದಾರರು, ವಿಶೇಷವಾಗಿ ಅಧ್ಯಕ್ಷ ಅಗರ್ಕರ್ ಮತ್ತು ಮುಖ್ಯ ಕೋಚ್ ಗಂಭೀರ್, ಹಿರಿಯ ಕ್ರಿಕೆಟಿಗರೊಂದಿಗೆ ಮುಂದಿನ ಯೋಜನೆಯ ಬಗ್ಗೆ ಮಾತನಾಡಬೇಕಾಗುತ್ತದೆ.

WTC ಫೈನಲ್‌ಗೆ ಅರ್ಹತೆ ಪಡೆಯಲು ಭಾರತವು ಯಾವುದೇ ಇತರ ಲೆಕ್ಕಾಚಾರಗಳನ್ನು ಅವಲಂಬಿಸದಿರಲು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 4-0 ಫಲಿತಾಂಶ ಅಗತ್ಯವಿರುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಇದು ಈಗ ಅಸಾಧ್ಯವೆಂದು ತೋರುತ್ತದೆ. ಆದರೆ ಇತರ ತಂಡಗಳು ಉತ್ತಮ ಪ್ರದರ್ಶನ ನೀಡದಿದ್ದರೆ ಬಾರ್ಡರ್ ಗವಾಸ್ಕರ್-ಟ್ರೋಫಿಯನ್ನು ಕಳೆದುಕೊಂಡ ನಂತರ ಭಾರತಕ್ಕೆ ಅರ್ಹತೆಯಲು ಇನ್ನೂ ಅವಕಾಶಗಳಿರಬಹುದು. ಆದರೆ ಒಮ್ಮೆ ಆಸ್ಟ್ರೇಲಿಯಾ ಸರಣಿ ಮುಗಿದ ನಂತರ ಮತ್ತು ಭಾರತ ಅರ್ಹತೆ ಪಡೆಯದಿದ್ದರೆ- ಮುಂದಿನ ವರ್ಷ ಜೂನ್ 20 ರಿಂದ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್ ಸರಣಿಗಳೊಂದಿಗೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದು ಆಯ್ಕೆ ಸಮಿತಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಾಗಿರುವ ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ ಅವರಂತಹ ಆಟಗಾರರಿಗೆ ಅವಕಾಶಗಳನ್ನು ನೀಡುವ ಮೂಲಕ ದೀರ್ಘಾವಧಿಯ ಭವಿಷ್ಯದೆಡೆಗೆ ನೋಡಲು ಒತ್ತಡ ಹೆಚ್ಚು ಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

留言


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page