ಗಡಿಪಾರುಗೊಂಡ 112 ಮಂದಿ ಭಾರತೀಯರನ್ನು ಹೊತ್ತ ಅಮೆರಿಕಾ ಮೂರನೇ ವಿಮಾನ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮನ
- Mar 15
- 1 min read
ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ ಗಡಿಪಾರು ಮಾಡಲಾದವರನ್ನು ಕರೆತರುತ್ತಿರುವ ಮೂರನೇ ವಿಮಾನ ಇದಾಗಿದೆ.

ಚಂಡೀಗಢ: 112 ಮಂದಿ ಭಾರತೀಯರನ್ನು ಹೊತ್ತ ಅಮೆರಿಕ ವಾಯುಪಡೆಯ ವಿಶೇಷ ವಿಮಾನ ಸಿ17 ಗ್ಲೋಬ್‌ಮಾಸ್ಟರ್ III ನಿನ್ನೆ ಭಾನುವಾರ ತಡರಾತ್ರಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ ಗಡಿಪಾರು ಮಾಡಲಾದವರನ್ನು ಕರೆತರುತ್ತಿರುವ ಮೂರನೇ ವಿಮಾನ ಇದಾಗಿದೆ. ವಿಮಾನವು ರಾತ್ರಿ 10:03 ಕ್ಕೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಿಂದ ಬಂದ ವಿಮಾನವು ಇಂದು ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರಲ್ಲಿ 112 ಮಂದಿ ಗಡಿಪಾರು ಆದವರಿದ್ದರು ಎಂದು ಮೂಲಗಳು ತಿಳಿಸಿವೆ.

Comments