top of page

ಚಳಿಗಾಲದಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ? ಅಮ್ಮಂದಿರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್!

ಚಳಿಗಾಲ ಶುರುವಾದರೆ ಸಾಕು ಮಕ್ಕಳಿಗೆ ಶೀತ, ನೆಗಡಿ, ಜ್ವರದ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಈ ಸಂದರ್ಭದಲ್ಲಿ ನವಜಾತ ಶಿಶುಗಳನ್ನು ಬೆಚ್ಚಗಿಡುವುದು, ಸೂಕ್ಷ್ಮವಾಗಿ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಹವಾಮಾನ ಬದಲಾವಣೆಯು ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.


ree









ಚಳಿಗಾಲ ಶುರುವಾದರೆ ಸಾಕು ಮಕ್ಕಳಿಗೆ ಶೀತ, ನೆಗಡಿ, ಜ್ವರದ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಈ ಸಂದರ್ಭದಲ್ಲಿ ನವಜಾತ ಶಿಶುಗಳನ್ನು ಬೆಚ್ಚಗಿಡುವುದು, ಸೂಕ್ಷ್ಮವಾಗಿ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಹವಾಮಾನ ಬದಲಾವಣೆಯು ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ ಚಳಿಗಾಲದಲ್ಲಿ ಮಗುವಿಗೆ ಹೆಚ್ಚಾಗಿ ನೆಗಡಿ, ಶೀತ, ಕೆಮ್ಮು ಮುಂತಾದ ಕಾಯಿಲೆಗಳು ಬಹುಬೇಗನೆ ಕಾಡುತ್ತದೆ.

ಇದಲ್ಲದೆ ಆಗತಾನೆ ಹುಟ್ಟಿದ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ, ನವಜಾತ ಶಿಶುಗಳನ್ನು ಮೂರು ತಿಂಗಳ ಚಳಿಗಾಲದಲ್ಲಿ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.

ಈ ಸಮಯದಲ್ಲಿ ನವಜಾತ ಶಿಶುವನ್ನು ತಾಯಿಯಾದವಳು ಬಹಳ ಸೂಕ್ಷ್ಮವಾಗಿ ಅರೈಕೆ ಮಾಡಬೇಕು. ತಾಯಂದಿರು ತಮ್ಮ ಮಕ್ಕಳ ಸರಿಯಾದ ಆರೈಕೆ ಮಾಡಿದರೆ ಮಕ್ಕಳು ಸರಿಯಾದ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.


ನವಜಾತ ಶಿಶುಗಳ ಆರೈಕೆ ಹೀಗಿರಲಿ...

ಬೆಚ್ಚಗಿನ ಉಡುಪುಗಳುಚಳಿಗಾಲದಲ್ಲಿ ಮಗುವಿನ ರಕ್ಷಣೆ ಮಾಡಲು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಅಗತ್ಯವಾಗುತ್ತದೆ. ಯಾವಾಗಲೂ ಹಲವು ಪದರವಾಗಿರುವ ಬಟ್ಟೆಗಳನ್ನು ಧರಿಸಿ. ಪ್ಯಾಂಟ್, ತುಂಬುತೋಳಿನ ಶರ್ಟ್, ಸಾಕ್ಸ್, ಟೋಪಿ, ಮೇಲೆ ಒಂದು ಜಾಕೆಟ್ ಇವೆಲ್ಲವನ್ನು ಮಗುವಿಗೆ ಚಳಿಗಾಲದಲ್ಲಿ ತೊಡಿಸಿ. ಮುಖ್ಯವಾಗಿ ಮಗುವಿನ ತಲೆ ಭಾಗವನ್ನು ಟೋಪಿಯಿಂದ ಮುಚ್ಚಿರುವಂತೆ ನೋಡಿಕೊಳ್ಳಿ.


ಮಗು ಇರುವ ಪ್ರದೇಶ ಬೆಚ್ಚಗಿರುವಂತೆ ನೋಡಿಕೊಳ್ಳಿಮನೆಯ ವಾತಾವರಣ ಅತ್ಯಂತ ತಣ್ಣಗಿದ್ದರೆ ಅದು ಮಗುವಿಗೆ ಶೀತ, ಕೆಮ್ಮು ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ನವಜಾತ ಶಿಶುಗಳನ್ನು 23 ರಿಂದ 25 ಡಿಗ್ರಿ ಸೆಲ್ಸಿಯಸ್ ಇರುವ ಕೋಣೆಯಲ್ಲಿ ಇರುವಂತೆ ನೋಡಿಕಳ್ಳಿ. ಇದಕ್ಕಾಗಿ ಹೀಟರ್ ಅಥವಾ ಥರ್ಮೋಸ್ಟಾಟ್ ಅನ್ನು ಬಳಸಬಹುದು.

ನೈರ್ಮಲ್ಯ ಕಾಪಾಡಿನವಜಾತ ಶಿಶುಗಳಿಗೆ ಧೂಳಿನಿಂದಲೂ ಶೀತ, ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮಗು ಮಲಗುವ ರೂಮ್ ನನ್ನು ಸ್ವಚ್ಚವಾಗಿಡಿ. ಚಳಿಗಾಲದಲ್ಲಿ ಗಾಳಿಯಲ್ಲಿ ಮಕ್ಕಳನ್ನು ಹೆಚ್ಚಾಗಿ ಹೊರಗಡೆ ಕರೆದುಕೊಂಡು ಹೋಗಬೇಡಿ. ರೂಮ್ ಕೂಡ ಅದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಿ.

ಸ್ತನಪಾನವನ್ನು ನಿಲ್ಲಿಸದಿರಿಮಗುವಿಗೆ ಕನಿಷ್ಠ 6 ತಿಂಗಳವರೆಗೆ ಸ್ತನಪಾನ ನೀಡುವುದನ್ನು ನಿಲ್ಲಿಸಬಾರದು. ಸ್ತನಪಾನ ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಹೀಗಾಗಿ ಮಕ್ಕಳ ರಕ್ಷಣೆಗೆ ಸ್ತನಪಾನ ಅತಿಮುಖ್ಯವಾಗಿದೆ. ಈ ವಿಷಯವನ್ನು ತಾಯಿಯು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.


ಮಕ್ಕಳಿಗೆ ಅಗತ್ಯ ಲಸಿಕೆ ಹಾಕಿಸಿಹುಟ್ಟಿದ ಮೂರು ತಿಂಗಳವರೆಗೆ ಮಕ್ಕಳಿಗೆ ಪ್ರತಿ ತಿಂಗಳು ಲಸಿಕೆ ಹಾಕಿಸಬೇಕು. ವೈದ್ಯರು ನೀಡುವ ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಅನುಸರಿಸಿ. ಇದು ಮಗು ಬೆಳವಣಿಗೆಯ ಆರೋಗ್ಯ ಹಾಗೂ ಸುರಕ್ಷತೆಯನ್ನು ತಿಳಿಸುತ್ತದೆ. ನಿಮ್ಮ ಮಗು ಶೀತ ಅಥವಾ ಇತರೆ ಅನಾರೋಗ್ಯದಿಂದ ಬಳಲುತ್ತಿದ್ದರು ಲಸಿಕೆ ತಪ್ಪಿಸಬೇಡಿ ವೈದ್ಯರ ಸಲಹೆ ಪಡೆಯಿರಿ.

ಮಗುವಿಗೆ ಎಣ್ಣೆ ಮಸಾಜ್ಚಳಿಗಾಲದಲ್ಲಿ ಚರ್ಮವು ಒಣಗಿ ಹೋಗುತ್ತೆ ಹಾಗಾಗಿ ಮಕ್ಕಳಿಗೆ ಎಣ್ಣೆ ಮಸಾಜ್ ಅತಿ ಮುಖ್ಯವಾಗಿದೆ. ಬೇಬಿ ಆಯಿಲ್ ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಬಾದಾಮಿ ಎಣ್ಣೆ ಯಾವುದಾದರು ಒಂದು ಸರಿ ಅರ್ಧ ಗಂಟೆ ಕಾಲ ಮಗುವಿಗೆ ಮಸಾಜ್ ಮಾಡಿ. ಇದ್ರಿಂದ ಮಗುವಿನ ದೇಹದಲ್ಲಿ ರಕ್ತದ ಹರಿವು ಸರಾಗವಾಗಿರುತ್ತೆ. ಮಸಾಜ್ ಮಾಡುವಾಗ ಕೊಠಡಿಯನ್ನು ಸ್ವಚ್ಚವಾಗಿಡಿ.

ಮಾಯಿಶ್ಚರೈಸರ್ ಅತ್ಯಗತ್ಯಮಗುವಿನ ಚರ್ಮವು ತುಂಬಾ ಮೃದುವಾಗಿರುತ್ತದೆ. ಹೀಗಾಗಿ ಶುಷ್ಕತೆ ಮತ್ತು ತುರಿಕೆಗೆ ಸಾಕಷ್ಟು ಒಳಗಾಗುತ್ತದೆ. ಆದ್ದರಿಂದ ನಿತ್ಯ ಮಗುವಿನ ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್ ಬಳಸಿ. ಚಳಿಗಾಲದಲ್ಲಿ 2 ಬಾರಿ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಿ. ಮಕ್ಕಳಿಗೆ ನೈಸರ್ಗಿಕ ಪದಾರ್ಥಗಳಿಂದ ಮಾಡಿದ ಕ್ರೀಮ್ ಬಳಕೆ ಉತ್ತಮ. ಹೆಚ್ಚು ರಾಸಾಯನಿಕ ಪದಾರ್ಥಗಳ ಬಳಕೆ ಮಕ್ಕಳ ಚರ್ಮಕ್ಕೆ ಒಳ್ಳೆಯದಲ್ಲ.


ಅಸ್ವಸ್ಥತೆಯ ಚಿಹ್ನೆಗಳ ಗುರ್ತಿಸಿಮಕ್ಕಳ ದೇಹ ಬಿಸಿಯಾಗಿರುವುದು ಹಾಗೂ ತಣ್ಣಗಾಗುವುದನ್ನು ಗಮನಿಸಿ. ಮಗುವಿಗೆ ಶೀತವಾದಾಗದ ನಡುಕ, ಚರ್ಮ ಒಡೆಯುವುದು, ಕೈ ಹಾಗೂ ಪಾದ ತಣ್ಣಗಾಗಿರುವುದು, ನಿಧಾನಗಟಿ ಉಸಿರಾಟ, ಆಲಸ್ಯದಿಂದಿರುವ ಚಿಹ್ನೆಗಳು ಕಂಡು ಬರುತ್ತದೆ. ಮೈಬಿಸಿಯಾಗಿದ್ದಾಗ ಚರ್ಮ ಕೆಂಪಗಾಗುವುದು ಹಾಗೂ ಬೆವರು ಚಿಹ್ನೆಗಳು ಕಂಡು ಬರುತ್ತದೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page