top of page

ದೌರ್ಜನ್ಯ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ; ಇದು ಮುಕ್ತಾಯವಲ್ಲ- ಹೊಸ ಅಧ್ಯಾಯ: ನಿಖಿಲ್ ಕುಮಾರಸ್ವಾಮಿ

  • Apr 8
  • 1 min read

ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್​ಐಆರ್​ ಹಾಕಿ, ತನಿಖೆ ಮಾಡಿಸಿ'' ಎಂದು ಆಗ್ರಹಿಸಿದರು.

ree









ಭದ್ರಾವತಿ: ದಮ್ಮು, ತಾಕತ್ತು ಇದ್ರೆ ಶಾಸಕ ಬಿ ಕೆ ಸಂಗಮೇಶ್ ಅವರ ಮಗನ ಮೇಲೆ ಎಫ್ಐಆರ್ ದಾಖಲು ಮಾಡಲಿ. ಶಾಸಕರ ಮಗನ ಧ್ವನಿಯನ್ನು ಎಫ್ಎಸ್ಎಲ್ ಪರೀಕ್ಷೆ ಮಾಡಿಸಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ವಿರುದ್ದ ಇಂದು ಭದ್ರಾವತಿ ಜೆಡಿಎಸ್ ತಾಲೂಕು ಘಟಕ ಹಾಗೂ ಬಿಜೆಪಿ ಘಟಕ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ''ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್​ಐಆರ್​ ಹಾಕಿ, ತನಿಖೆ ಮಾಡಿಸಿ'' ಎಂದು ಆಗ್ರಹಿಸಿದರು

ಈ ಪ್ರತಿಭಟನೆ ಇಲ್ಲಿಗೆ ಮುಕ್ತಾಯ ಆಗಲ್ಲ, ಇಲ್ಲಿಂದ ಹೊಸ ಅಧ್ಯಾಯ ಶುರುವಾಗಲಿದೆ. ಭದ್ರಾವತಿಯ ನಾಗರೀಕರು ಜಾಗೃತರಾಗಿರಬೇಕು ನಿಮ್ಮ ಜೊತೆ ನಾವಿರುತ್ತೇವೆ" ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಶಾಸಕರ ಪುತ್ರನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಹಸೀಲ್ದಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಮನವಿ ಸಲ್ಲಿಸಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರ ದೌರ್ಜನ್ಯ ಬಹಳ ದಿನ ನಡೆಯಲ್ಲ. ಅಭಿವೃದ್ದಿಗೆ ಮಿಸಲಿಡಬೇಕಾದ ಸಮಯವನ್ನು ಇಸ್ಪೀಟ್ ದಂಧೆ ಮತ್ತು ಮಾದಕ ವಸ್ತುಗಳ ಪೂರೈಕೆಗೆ ಶಾಸಕರು ಸಮಯ ಮೀಸಲಿಟ್ಟಿದ್ದಾರೆ ಎಂದು ಶಾಸಕ ಸಂಗಮೇಶ್ ವಿರುದ್ಧ ನಿಖಿಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಮ್ಮಪ್ಪ ಎರಡು ಸಲ ಸಿಎಂ ಆಗಿದ್ದರೂ ಸಹ ಇದುವರೆಗೂ ಅಧಿಕಾರಿಗಳಿಗೆ ಒಂದು ಕೆಲಸವನ್ನು ಮಾಡಿ ಎಂದು ನಾನು ಫೋನ್ ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಪಾರದರ್ಶಕವಾಗಿ‌ ನಡೆದುಕೊಳ್ಳಬೇಕು'' ಎಂದು ನಿಖಿಲ್​​ ಹೇಳಿದರು.

ಪೊಲೀಸ್ ನವರಿಗೆ ಕೈ ಮುಗಿದು ಕೇಳುತ್ತೇನೆ, ಪಾರದರ್ಶಕವಾಗಿ ಕೆಲಸ ಮಾಡಿ. ಇಡೀ ರಾಜ್ಯಾಧ್ಯಂತ ಶಾಸಕರ ದುರಂಹಕಾರ ಗೊತ್ತಾಗಿದೆ. ರಾಜ್ಯದ ಜನರಿಗೆ ಮಾಧ್ಯಮದವರು ವಾಸ್ತವ ತಿಳಿಸಿದ್ದಾರೆ. ಅಪ್ಪಾಜಿ ಗೌಡರನ್ನ ನಾವು ನೆನಪಿಸಿಕೊಳ್ಳಬೇಕು ಆಸ್ತಿ ಮಾಡದೆ ಜನರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page