top of page

ನಿಯತ್ತಾಗಿರುವ ರಾಜಕಾರಣಿಗಳನ್ನು ಹೇಗೆ 'ಹನಿ-ಟ್ರ್ಯಾಪ್' ಮಾಡಬಹುದು? ಶಾಸಕ ಹರೀಶ್ ಗೌಡ ಪ್ರಶ್ನೆ

  • Apr 8
  • 1 min read

ನಾನು ಸರಿಯಾಗಿ ಇದ್ರೆ ಯಾರು ಏನೂ ಮಾಡುವುದಕ್ಕೆ ಆಗಲ್ಲ. ನಾವು ಮಾತನಾಡುವ, ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿಯಿರಬೇಕು. ನಾವು ಸರಿ ಇದ್ದಾಗ ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ. ಸದನದಲ್ಲಿ ಬರೀ ಇದೇ ಆಗಿದೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ

ree

ಮೈಸೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುವ ಬೆನ್ನಲ್ಲೇ, ಮೈಸೂರಿನಲ್ಲಿ ಹುಣಸೂರು ಜೆಡಿಎಸ್ ಶಾಸಕ‌ ಹರೀಶ್ ಗೌಡ ಗಂಭೀರ ಆರೋಪ ಪ್ರತಿಕ್ರಿಯಿಸಿದ್ದಾರೆ.

ಪ್ರಾಮಾಣಿಕತೆಯಿಂದ ಇರುವ ರಾಜಕಾರಣಿಗಳನ್ನು ಹೇಗೆ 'ಹನಿ-ಟ್ರ್ಯಾಪ್' ಮಾಡಬಹುದು ಎಂದು ಪ್ರಶ್ನಿಸಿದರು. ನಾನು ಸರಿಯಾಗಿ ಇದ್ರೆ ಯಾರು ಏನೂ ಮಾಡುವುದಕ್ಕೆ ಆಗಲ್ಲ. ನಾವು ಮಾತನಾಡುವ, ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿಯಿರಬೇಕು. ನಾವು ಸರಿ ಇದ್ದಾಗ ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ. ಸದನದಲ್ಲಿ ಬರೀ ಇದೇ ಆಗಿದೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸದನದಲ್ಲಿ ರೈತರ ಪರ ಸರ್ಕಾರ ಧ್ವನಿ ಎತ್ತಿಲ್ಲ. ಹನಿ ಟ್ರ್ಯಾಪ್ ಆಗಲಿ, ಯಾವುದೇ ಟ್ರ್ಯಾಪ್ ಆಗಲಿ ನಾವು ಸರಿ ಇದ್ರೆ ಏನು ಆಗಲ್ಲ' ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಮತ್ತು ಶಾಸಕ ಮತ್ತು ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರ ಪುತ್ರ ಗೌಡ, ಮಹಿಳೆಯರ ಬಗ್ಗೆ ನಮ್ಮ ಮನೋಭಾವ ಮತ್ತು ಅಭಿಪ್ರಾಯ ಸರಿಯಾಗಿದ್ದರೆ, ಯಾವುದೇ ಅಪರಾಧ ನಡೆಯುವುದಿಲ್ಲ ಎಂದು ಹೇಳಿದರು.

"ಹನಿ-ಟ್ರ್ಯಾಪ್ ವಿಷಯ ವಿಧಾನಸಭೆಯಲ್ಲಿ ಚರ್ಚೆಗೆ ಬರಬಾರದಿತ್ತು. ಸಮಸ್ಯೆ ಇದ್ದವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕಿತ್ತು, ಅವರು ಅದನ್ನು ಪರಿಹರಿಸುತ್ತಿದ್ದರು. ಇದು ಯುವ ಶಾಸಕರಿಗೆ ಯಾವ ಸಂದೇಶವನ್ನು ನೀಡುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ಮೈಸೂರು ಡಿಸಿಸಿ ಬ್ಯಾಂಕ್ ದಿವಾಳಿಯಾಗಿದೆ ಮತ್ತು ಕೇವಲ ಅನುಕೂಲಕರ ರೈತರು ಮಾತ್ರ ಸಾಲ ಪಡೆಯುತ್ತಿದ್ದಾರೆ ಎಂದು ಹರೀಶ್ ಗೌಡ ಹೇಳಿದರು. "ರೈತರು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ರೈತರು ಎಂದು ವಿಭಜನೆಯಾಗಿದ್ದಾರೆ. ಅಧಿಕಾರಿಗಳು ಶಾಸಕರ ಮಾತನ್ನು ಕೇಳುತ್ತಿಲ್ಲ ಎಂದು ಅವರು ಹೇಳಿದರು.

ಹೆಸರೇಳದೆ ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ವಿರುದ್ದ ಕಿಡಿಕಾರಿದ್ದಾರೆ. ನಾನು ಹಾಲಿ ಶಾಸಕನಾಗಿ ರೈತರ ಪರ ಬಂದು ಪ್ರತಿಭಟನೆ ಮಾಡ್ತಿದ್ದೇನೆ. ನಾನು ಬ್ಯಾಂಕ್ ಕಡೆ ಬರಬಾರದು ಅಂತಾನೆ ಇನ್ನು ಚುನಾವಣೆ ನಡೆಸಿಲ್ಲ. ನಾನು ಕೈ ಮುಗಿದು ಕೇಳ್ತೇನೆ ರೈತರ ಪರವಾಗಿ ಕೆಲ್ಸ ಮಾಡಿ ನಾನು ಬರುವುದೇ ಇಲ್ಲ. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಹುಣಸೂರಿನ ರೈತರಿಗೆ ಎಂಸಿಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಕೊಡುತ್ತಿಲ್ಲ. ಕಳೆದ 5 ತಿಂಗಳಿಂದಲೂ ಕೂಡ ರೈತರನ್ನು ಆಟ ಆಡಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಜಿ ಟಿ ದೇವೆಗೌಡ ಕುಟುಂಬದ ಹಿಡಿತ ತಪ್ಪಿಸಲು ರೈತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹನಗೂಡು, ಧರ್ಮಪುರ ಸಹಕಾರಿ ಬ್ಯಾಂಕ್ ನಲ್ಲಿ ಸಾಲ‌ಮರುಪವತಿ ಮಾಡಿದ್ರು ಸಾಲ ನೀಡುತ್ತಿಲ್ಲ. ಬ್ಯಾಂಕ್ ಆಡಳಿತಾಧಿಕಾರಿ ರೈತರ ಹಿತ ಮರೆತು ಆ ನಾಯಕನ ಮಾತಿಗೆ ಕುಣಿಯುತ್ತಿದ್ದಾರೆ. ಹುಣಸೂರಿನಲ್ಲಿ 15 ವರ್ಷದಿಂದಲೂ ಅಧಿಕಾರಿದಲ್ಲಿದ್ದ ಒಬ್ಬ ನಾಯಕರು ಇದರ ಹಿಂದಿದ್ದಾರೆ.


Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page