top of page

ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್

  • Apr 8
  • 1 min read

ಬೆಂಗಳೂರು: 'ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ' ಎಂಬ ಕಾರಣ ನೀಡಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿದ್ದ ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.


ree









ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಸರ್ವೆ ನಂಬರ್‌ 1 ಮತ್ತು 2ರ ಬೆಲೆ ಬಾಳುವ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ. ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಸರ್ಕಾರದ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ, ಅಂದು ನಿರ್ಧಾರ ತೆಗೆದುಕೊಂಡಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದರು.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದೀಪ್‌ ದವೆ, ಪ್ರಧಾನ ಕಾರ್ಯದರ್ಶಿ ಯಾಗಿದ್ದ ವಿಜಯಕುಮಾರ್‌ ಗೋಗಿ (ಇಬ್ಬರೂ ಈಗ ನಿವೃತ್ತಿ) ಹಾಗೂ ಐಟಿಸಿ ವಿಭಾಗದ ಈಗಿನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್‌, ತಾಂತ್ರಿಕ ಕೋಶದ ಅಧಿಕಾರಿ ಆರ್. ಗೋಕುಲ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.

'ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಹೊರತು ಒಮ್ಮೆ ಅರಣ್ಯ ಎಂದು ನಮೂದಾದ ಭೂಮಿ ಅರಣ್ಯವೇ ಆಗಿರುತ್ತದೆ. ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಪರಿಹಾರ ಭೂಮಿ ಒದಗಿಸುವಾಗ ಮೊತ್ತ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯ ಬೇಕಾಗುತ್ತದೆ. ಅನುಮತಿ ನೀಡಿದರೂ, ಅರಣ್ಯ ಭೂಮಿಯನ್ನು ಗುತ್ತಿಗೆ ಮಾತ್ರ ನೀಡಬೇಕು. ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಮರಳಿ ಪಡೆಯಬೇಕಾಗುತ್ತದೆ. ಆದರೂ, ನಾಲ್ವರು ಅಧಿಕಾರಿಗಳು ನಿಯಮವನ್ನು ಅಂದು ಏಕೆ ಪಾಲಿಸಲಿಲ್ಲ' ಎಂದು ನೋಟಿಸ್‌ ಮೂಲಕ ಪ್ರಶ್ನಿಸಲಾಗಿದೆ.

'ಮುಖ್ಯಕಾರ್ಯದರ್ಶಿ ಅಧ್ಯಕ್ಷತೆ ಯಲ್ಲಿ 2020ರಲ್ಲಿ ನಡೆದ ಸಭೆಯಲ್ಲಿ 1980ರ ಪೂರ್ವದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ನೀಡಿದ್ದ ಜಮೀನು ಮಂಜೂರಾತಿಗಳ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯಪಡೆದು, ಅಂತಹ ಅರಣ್ಯಪ್ರದೇಶಗಳ ಡಿನೋಟಿಫಿಕೇಶನ್‌ ಪ್ರಸ್ತಾವವನ್ನು ಸಚಿವ ಸಂಪುಟದ ನಿರ್ಧಾರಕ್ಕಾಗಿ ಸಲ್ಲಿಸಲು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿತ್ತು. ಆದರೆ, ಸಂಪುಟದ ಗಮನಕ್ಕೆ ತಾರದೇ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಇದು ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಉಲ್ಲಂಘನೆಯೂ ಅಲ್ಲವೇ' ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page