ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಯೋಜನೆಯಡಿ ಶಿಷ್ಯ ವೇತನ ನೀಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮಮತಾರಾವ್ ತಿಳ
- Prajanudi Digital
- Aug 10
- 1 min read

ನಗರದ ಗುರುಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2025- 26ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಸಮಾರಂಭದಲ್ಲಿ ಮಾತ ನಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನ ಯೋಜನೆಯಾಗಿ ಜಾರಿಗೊಂಡಿರುವ ಸುಜ್ಞಾನ ನಿಧಿ ಯೋಜನೆಯಡಿ ರಾಜ್ಯದ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಿ ಶಿಷ್ಯವೇತನ ನೀಡಲಾಗುತ್ತಿದೆ. ಹುಣಸೂರು ತಾಲೂಕಿನಲ್ಲಿ ಈ ಬಾರಿ 162 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಯೋಜನೆ ವತಿಯಿಂದ ವ್ಯಕ್ತಿಯ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅನುಕೂಲ ಆಗು ವಂತಹ ಯೋಜನೆಗಳನ್ನು ಖಾವಂದರು ರೂಪಿಸಿ ದ್ದಾರೆ. ಆರೋಗ್ಯ, ಶಿಕ್ಷಣ, ಹಣಕಾಸು, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅನು ಕೂಲವಾಗುವ ಯೋಜನೆ ರೂಪಿ ಸುವ ಮೂಲಕ ಜನಮಾನಸದಲ್ಲಿ ಮುಖ್ಯವಾಗಿ ಗ್ರಾಮೀಣರ ಬದುಕಿಗೆ ಆಸರೆಯಾಗಿ ಯೋಜನೆ ನಿಂತಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಶಿಷ್ಯವೇತನವನ್ನು ಯೋಜನೆ ನೀಡಿರುವ ಉದ್ದೇಶಕ್ಕೆ ಮಾತ್ರ ಬಳಸಬೇಕೇ ಹೊರತು ಅನ್ಯ ಉದ್ದೇಶಕ್ಕೆ ಬಳಸಬಾರ ದು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಇಒ ಎಸ್. ಪಿ.ಮಹದೇವ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣ ಕುಮಾರ್ ಮಾತ ನಾಡಿದರು. ಯೋಜನೆ ಘಟಕ ಒಂದರ ಯೋಜನಾಧಿ ಕಾರಿ ನಾರಾಯಣ ಶೆಟ್ಟಿ, ಘಟಕ 2ರ ಯೋಜನಾಧಿಕಾರಿ ಶುಭದೇವಿ, ಮೇಲ್ವಿಚಾರಕ ಸತೀಶ್, ಅಂಬಿಕಾ, ಜ್ಞಾನ ವಿಕಾಸ ಸಂಯೋಜಕಿ ರೂಪಾ, ದೇವಿಕಾ ಇದ್ದರುಸ್ವಾಸ್ಥ್ಯ ಸಂಕಲ್ಪದ ಮೂಲಕ ಯುವಜನರಿಗೆ ಜಾಗೃತಿ ಹಂದನ ಹಳ್ಳಿ
ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ, 1982ರಲ್ಲಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ 32 ಜಿಲ್ಲೆಯ ಗ್ರಾಮ ಗ್ರಾಮ ಗಳಲ್ಲೂ ವ್ಯಾಪಿಸಿದೆ. ಮುಖ್ಯವಾಗಿ ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣರ ಆರ್ಥಿಕ ಸದೃಢತೆ ಸ್ಥಾಪಿಸಿದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಯೋಜನೆಯ ಯಾವುದಾದ ರೊಂದು ಯೋಜನೆ ಫಲಾನುಭವಿ ಆಗಿರುತ್ತಾನೆ ಎನ್ನುವುದೇ ಧರ್ಮಸ್ಥಳ ಯೋಜನೆಯ ವೈ ಶಿಷ್ಟವಾಗಿದೆ. ಆ ಮೂಲಕ ಯೋಜನೆಯು ಪ್ರತೀ ಮನೆಯ ದೀಪವಾಗಿ ಬೆಳಗುತ್ತಿದೆ ಎಂದರು. ಯೋಜನೆ ಅಂಗ ಸಂಸ್ಥೆಯಾದ ಜನ ಜಾಗೃತಿ ಜಿಲ್ಲಾ ವೇದಿಕೆಯು ಯುವಕರಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯ ಕ್ರಮದ ಮೂಲಕ ಆರೋಗ್ಯದ ಅರಿವು ಮೂಡಿಸುತ್ತಿದೆ ಎಂದರು.
Comments