top of page

ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹತ್ಯೆಯಾದ 18 ವರ್ಷಗಳ ಬಳಿಕ ಪುತ್ರಿಯಿಂದ ಸ್ಪೋಟಕ ಸಂಗತಿ ಬಹಿರಂಗ

  • Apr 8
  • 1 min read

ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಹಾಗೂ ಬಿಜೆಪಿಯ ಮಾಜಿ ಸಂಸದೆ ಪೂನಂ ಮಹಾಜನ್,



ree









ತಮ್ಮ ತಂದೆಯವರ ಹತ್ಯೆಯ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದು, ಹತ್ಯೆಯು ದೊಡ್ಡ ಪಿತೂರಿ, ಅದು ಅಂತಿಮವಾಗಿ ಬೆಳಕಿಗೆ ಬರಲಿದೆ ಎಂದು ಹೇಳಿದ್ದಾರೆ. ಘಟನೆ ನಡೆದ 18 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕುಟುಂಬದ ಸದಸ್ಯರೊಬ್ಬರು ಅಮಾನುಷವಾಗಿ ನಡೆದ ಹತ್ಯಾ ಘಟನೆಯ ವಿವರಗಳನ್ನು ನೀಡಿದ್ದಾರೆ.


Zee 24 ತಾಸ್‌ನ ‘ಜಾಹಿರ್ ಸಭಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೂನಂ ಮಹಾಜನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, “ಪ್ರಮೋದ್ ಮಹಾಜನ್ ಅವರ ಕೊಲೆ ಹಣ ಅಥವಾ ಅಸೂಯೆಗಾಗಿ ನಡೆದಿಲ್ಲ ಅಥವಾ ಯಾವುದೇ ಕೌಟುಂಬಿಕ ಸಮಸ್ಯೆಯಿಂದಲ್ಲ” ಎಂದು ಹೇಳಿದ್ದಾರೆ.

2006 ರಲ್ಲಿ, ಪ್ರಮೋದ್ ಮಹಾಜನ್ ಅವರ ಮೇಲೆ ಸ್ವಂತ ಸಹೋದರ ಪ್ರವೀಣ್ ಮಹಾಜನ್ ಗುಂಡು ಹಾರಿಸಿದ್ದರು. ಇದು ಅವರ ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳುಗಳನ್ನು ವ್ಯಾಪಕವಾಗಿ ಹಾನಿಗೊಳಿಸಿ ಭಾರೀ ಆಂತರಿಕ ರಕ್ತಸ್ರಾವವನ್ನು ಉಂಟುಮಾಡಿತ್ತು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಪ್ರಮೋದ್‌ ಮಹಾಜನ್ 13 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ನಂತರ‌ ಈ ಅಪರಾಧ ಎಸಗಿದ್ದ ಅವರ ಸಹೋದರ ಪ್ರವೀಣ್ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದ.

ಪೂನಂ ಮಹಾಜನ್ ಹೇಳಿದ್ದೇನು ?

ನಿಮ್ಮ ತಂದೆಯವರನ್ನು ಹತ್ಯೆ ಮಾಡಿದ್ದು ಅವರ ಸಹೋದರ ಹಾಗೂ ನಿಮ್ಮ ಸ್ವಂತ ಚಿಕ್ಕಪ್ಪನಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂನಂ, ಅವರು ಕೋಪ ಅಥವಾ ಅಸೂಯೆಯಿಂದ ಗುಂಡು ಹಾರಿಸಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಒಂದು ದಿನ, ಬಹುಶಃ ಇಂದು ಅಥವಾ ನಾಳೆ, ಸತ್ಯ ಬಹಿರಂಗವಾಗುತ್ತದೆ, ಮತ್ತು ಇದು ಏಕೆ ಸಂಭವಿಸಿತು ಎಂಬುದು ಬಯಲಾಗಲಿದೆ ಎಂದರಲ್ಲದೇ, ಸಹೋದರರ ನಡುವೆ ಯಾವುದೇ ಜಗಳ ಇರಲಿಲ್ಲ, ಆದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂಬ ಸ್ಪೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ.


Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page