ಬೀದರ್ : ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಚಿಟಿಕೆ ಹೊಡೆದು ಅವಾಜ್ ಹಾಕಿರುವ ಘಟನೆ ಅ.29 ರಂದು ನಡೆದಿದ್ದು,
- Apr 8
- 1 min read
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ, ಸಾರಿಗೆ ಅಧಿಕಾರಿ ಮಂಜುನಾಥ್ ಕೊರವಿ ಅವರ ಜೊತಗೆ, ಶಾಸಕರ ವಿರುದ್ದ ಲಂಚದ ಆರೋಪವನ್ನೂ ಹೊರೆಸಿದ್ದು ಈ ಪ್ರಕರಣ ಮತ್ತೊಂದು ಹಾದಿ ಹಿಡಿದಿದೆ.

ಅ.29 ರಂದು ರಾತ್ರಿ 10 ಗಂಟೆ ಸುಮಾರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾಲ್ಕಿ ರಸ್ತೆ ಮೂಲಕ ತೆರಳುತ್ತಿದ್ದರು. ನೌಬಾದ್-ಲಾಲ್‌ಬಾಗ್ ಸಮೀಪ ರಸ್ತೆಯ ಎರಡೂ ಬದಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಜನ ಕೂಡ ನಿಂತಿದ್ದರು. ಇದನ್ನು ಗಮನಿಸಿದ ಬೆಲ್ದಾಳೆ ಅವರು ಮಂಜುನಾಥ ಕೊರವಿ ಬಳಿ ತೆರಳಿ, 'ರಾತ್ರಿ ಹೊತ್ತು ಇಷ್ಟೊಂದು ವಾಹನಗಳನ್ನೇಕೆ ತಡೆದು ನಿಲ್ಲಿಸಿದ್ದೀರಿ. ಮಹಿಳೆಯರು, ಮಕ್ಕಳು ರಸ್ತೆಬದಿ ನಿಂತಿದ್ದಾರೆ. ಬೇಗ ಪರಿಶೀಲಿಸಿ ಕಳಿಸಿಕೊಡಬೇಕು. ಹೆಲ್ಮೆಟ್ ಇದ್ದರೂ ಬೈಕ್ ಸವಾರರನ್ನೇಕೆ ತಡೆದಿದ್ದೀರಿ? ಜನರಿಗೆ ತೊಂದರೆ ಕೊಡಬೇಡಿ' ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಕೊರವಿ, ನಾನು ಕೇವಲ ಅಧಿಕಾರಿ ಮಾತ್ರವಲ್ಲ ಎಲ್ಲಾ ಫೀಲ್ಡಿನಲ್ಲೂ ಇದೀನಿ ಎಂದು ಬೆದರಿಕೆ ಹಾಕಿದ್ದಲ್ಲದೇ ಶಾಸಕರಿಗೆ ಚಿಟಿಕಿ ಹೊಡೆದು ಅವಾಜ್ ಹಾಕಿದ್ದರು.
ಶಾಸಕರ ಹಿಂಬಾಲಕರು ಇದನ್ನು ವಿಡಿಯೋ ಮಾಡಿದ್ದರು. ಬಳಿಕ ಮಂಜುನಾಥ ಕೊರವಿ ಅವರನ್ನು ರಾಯಚೂರಿನ ಆರ್‌ಟಿಒ ಕಚೇರಿಗೆ ವರ್ಗಾವಣೆಗೊಳಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಆದೇಶ ಹೊರಡಿಸಿದ್ದರು.
ಈ ವಿವಾದದ ಬಳಿಕ ಮಂಜುನಾಥ ಕೊರವಿ ಮತ್ತೊಂದು ವಿಡಿಯೋ ಮಾಡಿ ಶಾಸಕರ ವಿರುದ್ದ ಭ್ರಷ್ಟಾಚಾರದ ಆರೋಪ ಹೊರೆಸಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆ ನೀಡುವಂತೆಯೂ ಹೇಳಿಕೊಂಡಿದ್ದಾರೆ.

Comments