top of page

ಬಾಬುಸಾಬ್ ಪಾಳ್ಯ ಕಟ್ಟಡ ದುರಂತ ಪ್ರಕರಣ: BBMP AEE ಅಮಾನತು; 3 ನೊಟೀಸ್ ನೀಡಿದ್ದರೂ ಮಾಲೀಕನ ನಿರ್ಲಕ್ಷ್ಯ!

  • Apr 4
  • 1 min read

ಬಾಬುಸಾಬ್ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ. ವಿನಯ್‌ ಅವರನ್ನು ಅಮಾನತುಗೊಳಿಸಲಾಗಿದೆ.


ree









ಬೆಂಗಳೂರು: ಮಂಗಳವಾರ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಎಂಟು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಒಂದು ದಿನದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಲೀಕರಿಗೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿ ಅವರು ಅನಧಿಕೃತ ಮಹಡಿಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿರುವುದು ಬೆಳಕಿಗೆ ಬಂದಿದೆ. .

ದುರಂತದ ಹಿನ್ನೆಲೆಯಲ್ಲಿ, ನಗರಾಡಳಿತ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶವನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಅವರನ್ನು ಅಮಾನತುಗೊಳಿಸಲಾಗಿದೆ. ಬಾಬುಸಾ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ. ವಿನಯ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಲಭ್ಯವಿರುವ ದಾಖಲೆಗಳ ಪ್ರಕಾರ, BBMP ಕಾಯಿದೆ, 2020 ರ ಸೆಕ್ಷನ್ 313 ರ ಅಡಿಯಲ್ಲಿ ಮೊದಲ ನೋಟೀಸ್ ಅನ್ನು 24 ಏಪ್ರಿಲ್ 2024 ರಂದು ಮಾಲೀಕ ಮುನಿರಾಜ್ ರೆಡ್ಡಿ ಅವರಿಗೆ ನೀಡಲಾಯಿತು, ಅವರು 2,400- ರಂದು ಭೂ ಮಾಲೀಕತ್ವದ ದಾಖಲೆಗಳು ಮತ್ತು ನಿರ್ಮಾಣದ ವಿವರಗಳನ್ನು ಸಲ್ಲಿಸಲು ಏಳು ದಿನಗಳ ಗಡುವು ನೀಡಲಾಗಿತ್ತು.

ಬೆಂಗಳೂರು ಕಟ್ಟಡ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಇದಾದ ನಂತರ 13ನೇ ಸೆಪ್ಟೆಂಬರ್ 2024 ರಂದು BBMP ಕಾಯಿದೆ, 2020 ರ ಸೆಕ್ಷನ್ 248(1) ರ ಅಡಿಯಲ್ಲಿ ಎರಡನೇ ನೋಟೀಸ್ ನೀಡಲಾಯಿತು, ಅನಧಿಕೃತ ಮಹಡಿಗಳಂತಹ ಉಲ್ಲಂಘನೆಗಳನ್ನು ದೃಢಪಡಿಸಿತು ಮತ್ತು ಅವುಗಳನ್ನು ತೆಗೆದುಹಾಕಲು ಮಾಲೀಕರಿಗೆ ನಿರ್ದೇಶಿಸಿತು. ಆ ಸಮಯದಲ್ಲಿ, ವಿವಾದಾತ್ಮಕ ಕಟ್ಟಡವು ಐದು ಮಹಡಿಗಳನ್ನು ಹೊಂದಿತ್ತು.

ಮತ್ತೊಮ್ಮೆ, ಸೆಪ್ಟೆಂಬರ್ 21 ರಂದು, ಬಿಬಿಎಂಪಿ ಕಾಯಿದೆ, 2020 ರ ಸೆಕ್ಷನ್ 248 (3) ರ ಅಡಿಯಲ್ಲಿ ಮೂರನೇ ನೋಟೀಸ್ ನೀಡಲಾಯಿತು, ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವಂತೆ ಮಾಲೀಕ ರೆಡ್ಡಿಗೆ ತಿಳಿಸಲಾಯಿತು. ಆದರೆ, ಮಾಲೀಕ ಮುನಿರಾಜು ರೆಡ್ಡಿ ಆದೇಶವನ್ನು ನಿರ್ಲಕ್ಷಿಸಿದ್ದು ಮಾತ್ರವಲ್ಲದೆ ಮತ್ತೊಂದು ಮಹಡಿಯನ್ನು ಸೇರಿಸಿದ್ದಾನೆ. ಈ ಉಲ್ಲಂಘನೆಗಳ ಹೊರತಾಗಿಯೂ, ಬಿಬಿಎಂಪಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಕೇವಲ ನೋಟಿಸ್‌ಗಳನ್ನು ನೀಡಿದರು, ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ,

ನಿಯಮಾವಳಿಗಳ ಪ್ರಕಾರ, ಮಾಲೀಕರು ಅನುಸರಿಸಲು ವಿಫಲವಾದರೆ, BBMP ಕಾಯಿದೆ, 2020 ರ ಸೆಕ್ಷನ್ 356 ರ ಅಡಿಯಲ್ಲಿ BBMP ಡೆಮಾಲಿಷನ್ ನೋಟಿಸ್ ನೀಡಬೇಕಾಗುತ್ತದೆ. ಮೊದಲ ನೋಟೀಸ್ ನೀಡುವುದರಿಂದ ಹಿಡಿದು ಕೆಡವಲು ಆರಂಭಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು 117 ದಿನಗಳಲ್ಲಿ ಪೂರ್ಣಗೊಳಿಸಬೇಕು. ಆದರೆ, ಬಿಬಿಎಂಪಿ ವಿಳಂಬ ಮಾಡಿದ್ದರಿಂದ ದಾರುಣ ಘಟನೆ ನಡೆದಿದೆ ಎಂದು ಹೊರಮಾವು ನಿವಾಸಿಗಳು ದೂರಿದ್ದಾರೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page