ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ...
- Prajanudi Digital
- Jun 22
- 1 min read

ಮೈಸೂರು ದಸರಾ ೧೧ ದಿನ ಆಚರಣೆ ಹೊಸದೇನಲ್ಲ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ೯ ದಿನಗಳು ಮಾತ್ರವಲ್ಲದೆ, ೧೧ ದಿನಗಳ ಕಾಲ ಆಚರಣೆ ಮಾಡಿರುವ ಸಾಕಷ್ಟು ನಿದರ್ಶನಗಳಿವೆ ಎಂದು ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ ನೀಡಿದ್ದಾರೆ.
ಪ್ರತಿ ವರ್ಷ ೯ ದಿನಗಳ ಕಾಲ ನಡೆಯುವ ದಸರಾ ಈ ಬಾರಿ ೧೧ ದಿನಗಳ ಕಾಲ ನಡೆಯಲಿದ್ದು, ೪೦೦ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ೧೧ ದಿನ ನಡೆಯುತ್ತಿದೆ ಎಂಬ ಸುದ್ದಿ ಹಿನ್ನೆಲೆ, ಪತ್ರಿಕಾ ಪ್ರಕಟಣೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ೧೧ ದಿನಗಳ ಕಾಲ ಆಚರಣೆ ಮಾಡುತ್ತಿರುವುದು ಹೊಸದಲ್ಲ. ಈ ಹಿಂದೆಯೂ ಹಲವು ಬಾರಿ ಅರಮನೆಯ ಕ್ಯಾಲೆಂಡರ್ ಅನ್ವಯ ದಸರಾವನ್ನು ೧೧ ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಅದೇ ರೀತಿ ಈ ಬಾರಿಯೂ ಸಹ ೧೧ ದಿನಗಳ ಕಾಲ ನಡೆಯಲಿದೆ. ಹೀಗೆ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ, ಅಲ್ಲದೆ ಇದರಲ್ಲಿ ಯಾವುದೇ ವಿಶೇಷತೆ ಕೂಡ ಇಲ್ಲ. ನಾಡಹಬ್ಬ ಹಾಗೂ ಅರಮನೆಯ ನವರಾತ್ರಿಗಳು ಸಾಂಪ್ರದಾಯಿಕವಾಗಿ ಈ ಹಿಂದಿನAತೆಯೇ ನಡೆಯಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದಸರಾ ಹಬ್ಬವನ್ನು ಈ ಹಿಂದೆಯೂ ೧೧ ದಿನಗಳು, ಅಷ್ಟರಾತ್ರಿಗಳು, ನವರಾತ್ರಿಗಳು, ದಶರಾತ್ರಿಗಳು ಹಾಗೂ ೧೧ ದಿನಗಳ ಕಾಲ ನಡೆಸಿದ ಹಲವು ನಿದರ್ಶನಗಳಿವೆ. ಮುಖ್ಯವಾಗಿ ಅರಮನೆಯ ಪಂಚಾAಗದ ಅನುಸಾರ, ಹಬ್ಬದ ಆಚರಣೆಗಳ ಅವಧಿಯ ವ್ಯತ್ಯಾಸಗಳು ಖಗೋಳ ಅಂಶಗಳಿAದ ನಿರ್ದಿಷ್ಟವಾಗಿ ಸೂರ್ಯ ಮತ್ತು ಚಂದ್ರನ ಚಲನೆ ಹಾಗೂ ಚಂದ್ರನ ದಿನಗಳು ಹಾಗೂ ದಿನಾಂಕಗಳ ಜೋಡಣೆಯನ್ನ ನಿರ್ಧರಿಸುತ್ತವೆ. ವಾಸ್ತವಿಕವಾಗಿ ದಸರಾವನ್ನ ಅಂಕಿಗಳಲ್ಲಿ ೧೯೨೦, ೧೯೨೯, ೧೯೫೨, ೧೯೬೨, ೧೯೮೦, ೧೯೯೦, ೧೯೯೮, ೨೦೦೦, ೨೦೧೫ ಹಾಗೂ ೨೦೧೬ರಲ್ಲಿ ದಸರಾವನ್ನ ೧೧ ದಿನಗಳ ಕಾಲ ಆಚರಣೆ ಮಾಡಲಾಗಿದೆ ಎಂದು ರಾಜಮಾತೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ...
Comments