top of page

ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಆಗಿ ರಿಷಬ್ ಪಂತ್ ನೇಮಕ; 'ಅತ್ಯುತ್ತಮ ಆಟಗಾರ' ಎಂದ LSG ಮಾಲೀಕ ಸಂಜೀವ್ ಗೋಯೆಂಕಾ

  • Apr 8
  • 1 min read

ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು.

ree

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಮುಂಬರುವ ಆವೃತ್ತಿಗಾಗಿ ಭಾರತ ಕ್ರಿಕೆಟ್ ತಂಡದ ವಿಕೆಟ್-ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಪಂತ್ ಅವರನ್ನು ಎಲ್‌ಎಸ್‌ಜಿ ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತ್ತು.

ಪಂತ್ ಅವರು 2021, 2022 ಮತ್ತು 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕರಾಗಿದ್ದರು. ಆದರೆ, ಅವರು ಹೊಸ ಆವೃತ್ತಿಗೆ ಮುಂಚಿತವಾಗಿ ಹೊಸ ಫ್ರಾಂಚೈಸಿಯೊಂದಿಗೆ ಸೇರಿಕೊಳ್ಳಲು ನಿರ್ಧರಿಸಿದ್ದರು. ಹರಾಜು ಪ್ರಕ್ರಿಯೆಯಲ್ಲಿ LSG ಮತ್ತು DC ತಂಡಗಳು ಪಂತ್ ಅವರಿಗಾಗಿ ಪೈಪೋಟಿ ನಡೆಸಿದವು. ಕೊನೆಗೆ IPL ಹರಾಜಿನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಟಗಾರ ಪಂತ್ ಎನಿಸಿಕೊಂಡರು.

ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು. ಆದರೆ, ಆರ್‌ಸಿಬಿ ಕೈಬಿಟ್ಟ ನಂತರ ಸನ್‌ರೈಸರ್ಸ್ ಹೈದರಾಬಾದ್ (SRH) ಬಿಡ್ಡಿಂಗ್ ಅನ್ನು ಮುಂದುವರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 'ರೈಟ್ ಟು ಮ್ಯಾಚ್' ಕಾರ್ಡ್ ಅನ್ನು ಬಳಸಲು ಪ್ರಯತ್ನಿಸಿತು. ಆದರೂ, ಪಂತ್ ದುಹಾರಿ ಮೊತ್ತಕ್ಕೆ ಎಲ್ಎಸ್‌ಜಿ ಪಾಲಾದರು.

ಈ ಕುರಿತು ಪ್ರತಿಕ್ರಿಯಿಸಿರುವ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ, 'ರಿಷಭ್ ಪಂತ್ ಐಪಿಎಲ್‌ನ ಅತ್ಯಂತ ಮೌಲ್ಯಯುತ ಆಟಗಾರ ಮಾತ್ರವಲ್ಲ, ಅತ್ಯುತ್ತಮ ಆಟಗಾರ. ನಾವು ಹೊಸ ಭರವಸೆ ಮತ್ತು ಆಕಾಂಕ್ಷೆಗಳೊಂದಿಗೆ ಮುಖ್ಯವಾಗಿ, ಹೊಸ ಆತ್ಮವಿಶ್ವಾಸದೊಂದಿಗೆ ಈ ಆವೃತ್ತಿಯನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ಹೊಸ ನಾಯಕನಾಗಿ ರಿಷಭ್ ಪಂತ್ ಅವರನ್ನು ನಿಮ್ಮೆಲ್ಲರಿಗೂ ಪರಿಚಯಿಸಲು ನಾನು ಬಯಸುತ್ತೇನೆ' ಎಂದು ಸೋಮವಾರ ಹೇಳಿದ್ದಾರೆ.


'ನಾನು ನನ್ನ ಕಡೆಯಿಂದ ಉತ್ತಮವಾಗಿ ಆಡಲು ಬದ್ಧನಾಗಿದ್ದೇನೆ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಮತ್ತು ಹೊಸ ಆರಂಭ ಮತ್ತು ಹೊಸ ಶಕ್ತಿಗಾಗಿ ಎದುರು ನೋಡುತ್ತಿದ್ದೇನೆ. ಬಹಳಷ್ಟು ಮೋಜಿನ ಜೊತೆಗೆ ಉತ್ತಮವಾಗಿ ಆಟವನ್ನು ಆಡೋಣ' ಎಂದು ಪಂತ್ ನಾಯಕನಾಗಿ ನೇಮಕಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಕಳೆದ ಬಾರಿ ಎಲ್ಎಸ್‌ಜಿ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಿದ್ದರು. ಆದರೆ, ಟ್ರೋಫಿ ಗೆಲ್ಲಲು ವಿಫಲವಾದ ಕಾರಣ ಮೆಗಾ ಹರಾಜಿಗೂ ಮುನ್ನ ತಂಡವು ರಾಹುಲ್ ಅವರನ್ನು ಕೈಬಿಟ್ಟಿತ್ತು. ಬಳಿಕ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು.

ಪಂತ್ 2016 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆಡಿರುವ 110 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 18 ಅರ್ಧಶತಕಗಳನ್ನು ಗಳಿಸಿದ್ದಾರೆ. 2021 ರಲ್ಲಿ ಪಂತ್ ತಂಡದ ನಾಯಕನ ಸ್ಥಾನಕ್ಕೇರಿದರು ಅದೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ಗೆ ಪ್ರವೇಶಿಸಿತ್ತು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page