top of page

ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು!

  • Apr 8
  • 1 min read

ಐಕ್ಯೂಏರ್‌ನ ವಿಶ್ವ ವಾಯು ಗುಣಮಟ್ಟ ವರದಿ 2024ರಲ್ಲಿ ದೆಹಲಿ ಜಾಗತಿಕವಾಗಿ ಅತ್ಯಂತ ಮಲಿನ ರಾಜಧಾನಿಯಾಗಿ ಉಳಿದಿದ್ದು, ಭಾರತವು 2024 ರಲ್ಲಿ ವಿಶ್ವದ ಐದನೇ ಅತ್ಯಂತ ಮಾಲಿನ್ಯಭರಿತ ದೇಶವಾಗಿದೆ.

ree

ನವದೆಹಲಿ: ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಹದಿಮೂರು ನಗರಗಳು ಭಾರತದಲ್ಲಿವೆ ಎಂದು ಮಂಗಳವಾರ ಪ್ರಕಟವಾದ ಹೊಸ ವರದಿ ತಿಳಿಸಿದ್ದು, ಅಸ್ಸಾಂನ ಬೈರ್ನಿಹತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಗಾಳಿಯಲ್ಲಿನ ಮಾಲಿನ್ಯಕರ ಅಂಶವನ್ನು ಮಾಪನ ಮಾಡುವ ಸ್ವಿಸ್ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ ವಿಶ್ವ ವಾಯು ಗುಣಮಟ್ಟ ವರದಿ 2024ರಲ್ಲಿ ದೆಹಲಿ ಜಾಗತಿಕವಾಗಿ ಅತ್ಯಂತ ಮಲಿನ ರಾಜಧಾನಿಯಾಗಿ ಉಳಿದಿದ್ದು, ಭಾರತವು 2024 ರಲ್ಲಿ ವಿಶ್ವದ ಐದನೇ ಅತ್ಯಂತ ಮಾಲಿನ್ಯಭರಿತ ದೇಶವಾಗಿದೆ. 2023 ರಲ್ಲಿ ಮೂರನೇ ಸ್ಥಾನದಲ್ಲಿ ಭಾರತ ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಭಾರತವು 2024 ರಲ್ಲಿ PM2.5 ಸಾಂದ್ರತೆಯಲ್ಲಿ ಶೇಕಡಾ 7 ರಷ್ಟು ಕುಸಿತವನ್ನು ಕಂಡಿದೆ. ಪ್ರತಿ ಘನ ಮೀಟರ್‌ಗೆ ಸರಾಸರಿ 50.6 ಮೈಕ್ರೋಗ್ರಾಂಗಳಷ್ಟು ಇಳಿಕೆಯಾಗಿದೆ. 2023 ರಲ್ಲಿ ಪ್ರತಿ ಘನ ಮೀಟರ್‌ಗೆ 54.4 ಮೈಕ್ರೋಗ್ರಾಂಗಳಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ವಿಶ್ವದ 10 ಅತ್ಯಂತ ಮಾಲಿನ್ಯ ನಗರಗಳ ಪೈಕಿ ಆರು ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ.

ದೆಹಲಿಯು ನಿರಂತರವಾಗಿ ಹೆಚ್ಚಿನ ಮಾಲಿನ್ಯ ಮಟ್ಟವನ್ನು ದಾಖಲಿಸಿದ್ದು, ವಾರ್ಷಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 91.6 ಮೈಕ್ರೋಗ್ರಾಂಗಳಷ್ಟಿದ್ದು, 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿತ್ತು.

ವಿಶ್ವದ ಅಗ್ರ 20 ಅತ್ಯಂತ ಕಲುಷಿತ ನಗರಗಳಲ್ಲಿರುವ 13 ಭಾರತೀಯ ನಗರಗಳಾಗಿದ್ದು, ಬೈರ್ನಿಹತ್, ದೆಹಲಿ, ಮುಲ್ಲನ್‌ಪುರ(ಪಂಜಾಬ್), ಫರಿದಾಬಾದ್, ಲೋನಿ, ದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ ಮಾಲಿನ್ಯಭರಿತ ನಗರಗಳಾಗಿವೆ.

ವಾಯು ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿದ್ದು, ಇದು ಅಂದಾಜು 5.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ, 2009 ರಿಂದ 2019 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಸಾವುಗಳು PM2.5 ಮಾಲಿನ್ಯದಿಂದ ಸಂಭವಿಸಿವೆ ಎಂದು ಹೇಳಿದೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page